LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಈರುಳ್ಳಿ ಬೆಲೆ ಕುಸಿತ : ಕಂಗಾಲದ ಈರುಳ್ಳಿ ಬೆಳೆಗಾರರು

ಹರೀಶ್ ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಬೆಳೆಗಾರರೆಲ್ಲಾ ಕಣ್ಣೀರಿನಲ್ಲಿ ಕೈ ತೊಳಿಯುವ ಪರಿಸ್ಥಿತಿ ಬಂದಿದೆ. ಗ್ರಾಹಕರಿಲ್ಲದೆ ತುಂಬಿಟ್ಟಿರುವ ಚೀಲದಲ್ಲಿ ಈರುಳ್ಳಿ ಕೊಳೆಯುತ್ತಿದ್ದು ಅನ್ನದಾತರು ಕಂಗಾಲಾಗಿದ್ದಾರೆ.
ಈರುಳ್ಳಿ ಬೆಳೆಗಾರರು ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಈರುಳ್ಳಿ ಕಟಾವು ಮಾಡಲಾಗಿದ್ದು ದರ ಕುಸಿತದಿಂದ ಆಕಾಶದತ್ತ ಮುಖಮಾಡಿದ್ದಾರೆ. ಬ್ಯಾಂಕ್ಗಳಲ್ಲಿ ಒಡವೆ ಇಟ್ಟು ಸಂಘದಲ್ಲಿ ಹಣ ತೆಗೆದುಕೊಂಡು ಈರುಳ್ಳಿ ಬೆಳೆಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಬೆಳೆ ಬೆಳೆದರು ಕೂಡ ರೈತರಿಗೆ ಬೆಲೆ ಸಿಗುತ್ತಿಲ್ಲ. ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಅನ್ನದಾತರಿಗೆ ಬಂದಿದೆ. ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆಯಿಂದ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ದರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈರುಳ್ಳಿ ಬೆಳೆದ ರೈತರು ಜೀವನವೇ ಕಷ್ಟಕರವಾಗಿದೆ. ಈರುಳ್ಳಿ ಬೆಲೆ ಕಡಿಮೆಯಾಗಿದ್ದರಿಂದ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದುಕಿಗೆ ಆಸರೆಯಾಗಬೇಕಿದ್ದ ಈರುಳ್ಳಿ ಕಣ್ಣೀರು ಸುರಿಸುವಂತೆ ಮಾಡಿದೆ. ರಸಗೊಬ್ಬರ, ಯೂರಿಯ, ಔಷಧಿ ಸಿಂಪಡಿಸಿ ಬೆಳೆದ ಈರುಳ್ಳಿ ಬೆಲೆಗೆ ಸಿಗದಂತಾಗಿದೆ.

ಒಂದು ಕ್ವಿಂಟಲ್ 100ರೂ ಒಳಗಡೆ ಮಾತ್ರ ಬೆಲೆಯಿದೆ. ಆದರೆ ಈರುಳ್ಳಿ ಬೆಳೆಗಾರರು ಮಾರಾಟ ಮಾಡಲು ಹಿಂದೆಟು ಹಾಕುತ್ತಿದ್ದಾರೆ. ಈರುಳ್ಳಿ ಬೆಲೆ ಇಲ್ಲದಿದ್ದರಿಂದ ಬೆಂಗಳೂರಿಗೆ ರಪ್ತು ಆಗಬೇಕಿದ್ದ ಈರುಳ್ಳಿ ಸ್ಥಗಿತಗೊಳಿಸಲಾಗಿದೆ. ಮೊಳಕಾಲ್ಮೂರು, ದಾವಣಗೆರೆ, ಚಳ್ಳಕೆರೆಯಲ್ಲಿರುವ ರೈತರು ಅತೀ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ಈ ಬಾರಿ ಹೆಚ್ಚು ಹಣ ಪಡೆಯ ಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರ ನಂಬಿಕೆ ಹುಸಿಯಾಗಿದೆ. ಪ್ರಾರಂಭದಲ್ಲಿಯೇ ಅಪಾರ ಎದುರಾಗಿದೆ. ಹಾಯ್ಕಲ್ ಗ್ರಾಮದ ಪ್ರಗತಿ ಪರ ರೈತ ಪಾಲಯ್ಯ ಮಾತನಾಡಿ ಈರುಳ್ಳಿ ಬೆಳೆಗೆ 3 ಲಕ್ಷ ಹಣ ಖರ್ಚು ಮಾಡಿದ್ದೇನೆ, ಈರುಳ್ಳಿ ಬೆಲೆ ಕಡಿಮೆ ಆಗಿದ್ದರಿಂದ ಸುಮಾರು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ಕೂಡಲೇ ಈರುಳ್ಳಿ ಬೆಳೆಗೆ ಬೆಂಬಲ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬ ಸಮೇತ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈರುಳ್ಳಿ ಬೆಳೆಯನ್ನು ಖರಿದಿಸಲು ವ್ಯಾಪಾರಸ್ಥರೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.


ಈ ಬಾರಿ ಉತ್ತಮ ಹಣ ಗಳಿಸಿಬಹುದು ಎಂಬ ನಿರೀಕ್ಷೆಯಲ್ಲಿದೆ, ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಬಂದಿದೆ ಎಂದು ಅಳಲು ತೊಡಿಕೊಂಡರು. ಮತ್ತು ಈರುಳ್ಳಿ ಬೆಳೆ ಬೆಳೆಯುವುದಕ್ಕಾಗಿ ಅನ್ನದಾತರು ಬಿತ್ತನೆ, ಬೀಜ, ಗೊಬ್ಬರ, ಕೀಟ ನಾಶಕ, ಕಳೆ ಕೀಳಿಸುವುದು ಸೇರಿ ಖರ್ಚಿಗಾಗಿ ಸುಮಾರು 3 ಲಕ್ಷ ಸಾಲ ಮಾಡಿದ್ದು, ಈಗ ಬೆಳೆ ನಷ್ಟವಾಗಿರುವುದುರಿಂದ ಸಾಲ ತಿರಿಸುವುದು ಹೇಗಪ್ಪ ಎಂದು ಚಿಂತನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುದೇವ ಮೇಟಿ ಬಣ ನಾಯಕನಹಟ್ಟಿ ಹೋಬಳಿ ಅಧ್ಯಕ್ಷರಾದ ಡಾ.ನಾಗರಾಜ್ ಮೀಸೆ ಮಾತನಾಡಿ ಜಿಲ್ಲೆಯ ಹೋಬಳಿಗಳಲ್ಲಿ ಸುಮಾರು ಹೆಕ್ಟರ್ಗಳನ್ನು ಈರುಳ್ಳಿಯನ್ನು ತಮ್ಮ ತಮ್ಮ ಜಮೀನುಗಳಿಗೆ ಬಿತ್ತನೆ ಮಾಡಿದ್ದಾರೆ. ದುಬಾರಿ ಕೂಲಿ ಆಳುಗಳನ್ನು ಕರೆತಂದು ಗಗನಕ್ಕೇರಿದ ಬೀಜ ಔಷಧಿಗಳನ್ನು ತಂದು ಹಾಗೂ ಈ ಪ್ರಕೃತಿ ವಿಕೋಪದಲ್ಲಿಯೂ ಬೆಳೆದಂಥ ಈರುಳ್ಳಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದರಿಂದ ರೈತ ವಿಷ ಕುಡಿದು ಸಾಯುವಂತ ಪರಿಸ್ಥಿತಿ ಎದುರಾಗಿದೆ ಒಂದು ಈರುಳ್ಳಿ ತುಂಬುವ ಖಾಲಿ ಚೀಲಕ್ಕೆ ಇದ್ದಷ್ಟು ಬೆಲೆ ಒಂದು ಪಾಕೆಟ್ ಈರುಳ್ಳಿಗೆ ಆ ಬೆಲೆ ಇರುವುದಿಲ್ಲ ವೆಂದರೆ ಎಂತಹ ವಿಪರ್ಯಾಸ ದಯಮಾಡಿ ರೈತರನ್ನು ಉಳಿಸಿ ರೈತರನ್ನು ಬದುಕಲು ದಾರಿ ಮಾಡಿಕೊಡಿ ತಾವು ಬೆಳೆದಂತೆ ಬೆಳೆಗಳಿಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಬೇಕು ಅಥವಾ ಸರ್ಕಾರವೇ ರೈತ ಬೆಳೆದಂತ ಈರುಳ್ಳಿಯನ್ನು ಖರೀದಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಡಾ.ವಾಸುದೇವ ಮೇಟಿ ) ಬಣ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ ಆಕ್ರೋಶ ವ್ಯಕ್ತಪಡಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ