LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ ನಾಲ್ವರಲ್ಲಿ ಒಬ್ಬರು ಹೈಪರ್ ಟೆನ್ಷನ್ ಗೆ ಒಳಗಾಗುತ್ತಿದ್ದಾರೆ - ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಪ್ರತಿ ನಾಲ್ವರಲ್ಲಿ ಓರ್ವರು ಹೈಪರ್ ಟೆನ್ಷನ್ ಗೆ ಒಳಗಾಗುತ್ತಿದ್ದಾರೆ. ಕರ್ನಾಟಕವೊಂದರಲ್ಲಿಯೇ ಲಕ್ಷಾಂತರ ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವಂತಹ ಕಾಯಿಲೆಗಳ ಭಯದಲ್ಲಿ ಬದುಕುವಂತಾಗಿದೆ. ಇದರಲ್ಲದೇ ಇದರ ಅರ್ಥಿಕ ಹೊರೆಯೂ ಊಹಿಸಲಿಕ್ಕೆ ಅಸಾಧ್ಯ ಆಸ್ಪತ್ರೆಗಳಿಗೆ ದಾಖಲಾಗಿ ಕುಟುಂಬಗಳ ಅದಾಯ ಮೂಲಕ್ಕೆ, ಪೆಟ್ಟು ಬೀಳುತ್ತಿದೆ. ಇದರಿಂದ ಅರ್ಥಿಕ ಸಂಕಷ್ಟಕ್ಕೆ ಕುಟುಂಬಗಳು ಒಳಗಾಗಲಿವೆ. ಆರಂಭದಲ್ಲಿಯೇ ಅಧಿಕ ರಕ್ತದೊತ್ತಡ ಪರೀಕ್ಷೆಗೆ ಒಳಪಟ್ಟು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

 

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗಾಗಿ ಹೃದಯಘಾತ, ಸ್ಟೊçÃಕ್ ಕುರಿತು ಹಮ್ಮಿಕೊಂಡಿದ್ದ `ಮೀಡಿಯಾ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡಿದ ಅವರು, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್-ರಿಷಿಕೇಶ ಇವರು ತಜ್ಞವೈದ್ಯರಿಂದ ಕರ್ನಾಟಕ ರಾಜ್ಯದಲ್ಲಿ ಅಧಿಕ ರಕ್ತದೊತ್ತಡದಿಂದ ಸಂಭವಿಸುತ್ತಿರುವ ಹೃದಯಾಘಾತ, ಸ್ಟ್ರೋಕ್ ಮತ್ತು ಬಹು ಅಂಗಾಂಗ ವೈಫಲ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.



ಬಣ್ಣ ಬಣ್ಣದ ಆಹಾರ, ಪಾನೀಯ ಸೇವನೆ ಪ್ರಕ್ರಿಯೆಯಲ್ಲಿ ಜನರಿಗೆ ಸಾಕಷ್ಟು ಗೊಂದಲಗಳಿವೆ. ಕಬಾಬ್, ಕರಿದ ಪದಾರ್ಥಗಳು, ಗೋಬಿ ಮಂಚೂರಿಯಿಂದ ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅತಿಯಾದ ಮಾನಸಿಕ ಒತ್ತಡ ಮಧು ಮೇಹ ಸೇರಿದಂತೆ ದೇಹದ ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಬಹುದಾದ ರೋಗಗಳು ಉಲ್ಬಣಗೊಳ್ಳುತ್ತಿವೆ. ಆಟೋ, ಕ್ಯಾಬ್ ಓಡಿಸುವವರಲ್ಲಿ ಈ ರೀತಿಯ ಒತ್ತಡಗಳ ಕಾಯಿಲೆಗಳು ಹೆಚ್ಚು ಎಂದ ಅವರು, ರಾಜ್ಯ ಸರ್ಕಾರ `ಗೃಹ ಆರೋಗ್ಯ ಯೋಜನೆ' ಯಡಿ ಒಟ್ಟು 14 ಬಗೆಯ ರೋಗಗಳಿಗೆ ಉಚಿತ ತಪಾಸಣೆ, ಶಾಶ್ವತ ಔಷಧಿಗಳನ್ನು ವಿತರಿಸುವ ಉದ್ದೇಶ ಹೊಂದಿದೆ ಎಂದರು.



ಬದಲಾದ ಜೀವನ ಶೈಲಿ, ಹವ್ಯಾಸಗಳು, ಕುಡಿತ, ಧೂಮಪಾನ ಸೇವನೆಗಳಿಂದ ಆರೋಗ್ಯ ಕುಂಠಿತವಾಗುತ್ತಿದೆ. ಪಾಕೆಟ್ ನೀರು, ಹಾಲು, ಐಸ್ ಕ್ರೀಂ, ಬೇಕರಿ ತಿನಿಸುಗಳ ಸೇವನೆಯಿಂದ ರೋಗಗಳು ಉಲ್ಬಣಗೊಳ್ಳುತ್ತವೆ. ಇದರಿಂದ ಜನರು ಜಾಗೃತರಾಗಬೇಕು. ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡದಿಂದ ಜನ ಸಾಮಾನ್ಯರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ -೫ ರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕ ರಕ್ತದೊತ್ತಡ ಒಂದು ಅತಿ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ರಕ್ತದೊತ್ತಡದಿಂದ, ಹೃದಯಾಘಾತ, ಸ್ಟೋಕ್, ಕಿಡ್ನಿ ವೈಫಲ್ಯದಂತಹ ಜೀವಹಾನಿ ಕಾಯಿಲೆಗಳಿಗೆ ಸದ್ದಿಲ್ಲದೇ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರಲ್ಲಿ ಹದಿನೈದು ವರ್ಷ ಹಾಗೂ ಮೇಲ್ಪಟ್ಟವರ ಪೈಕಿ ಶೇ. 16.3, ಒಳಗಾಗಿದ್ದಾರೆ. ಶೇ.6.1 ರಷ್ಟು ಮಂದಿ ಮಹಿಳೆಯರು ಮಧ್ಯಮ ಪ್ರಮಾಣ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಒಟ್ಟಾರೆಯಾಗಿ ಶೇ. 25 ರಷ್ಟು ಮಹಿಳೆಯರು ಅಂದರೆ ನಾಲ್ಕು ಮಂದಿ ಮಹಿಳೆಯರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

 

ಪುರುಷರ ಪೈಕಿ, ಹದಿನೈದು ವರ್ಷ ಮತ್ತು ಮೇಲ್ಪಟ್ಟವರ ಪೈಕಿ ಶೇ. 18.5 ರಷ್ಟು ಮಂದಿ ಸಣ್ಣ ಪ್ರಮಾಣದ ರಕ್ತದೊತ್ತಡ ಬಳಲುತ್ತಿದ್ದಾರೆ. ಶೇ. 6.8 ರಷ್ಟು ಮಂದಿ ಮಧ್ಯಮ ಪ್ರಮಾಣದ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದು, ಪುರುಷರ ಪೈಕಿ ಶೇ. 26.9 ರಷ್ಟು ಮಂದಿ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ಕರ್ನಾಟಕ ರಾಜ್ಯದಲ್ಲಿ ನಾಲ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದಾರೆ. ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ. ರಕ್ತದೊತ್ತಡದ ಬಗ್ಗೆ, ಕಾಲ ಕಾಲಕ್ಕೆ ತಪಾಸಣೆಗೆ ಒಳಗಾಗದೇ ಹೋದರೆ, ಸ್ಟೋಕ್, ಹೃದಯಘಾತ, ಕಿಡ್ನಿ ವೈಫಲ್ಯದಂತಹ ಜೀವಹಾನಿ ಕಾಯಿಲೆಗಳಿಗೆ ತುತ್ತಾಗಿ ಅಲ್ಪಾಯುಷ್ಯಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂದರು.

ಜೀವನ ಶೈಲಿ ಬದಲಾವಣೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಅರೋಗ್ಯ ಇಲಾಖೆ ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳಲ್ಲಿ ಅಧಿಕ ರಕ್ತದೊತ್ತಡ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಸೌಲಭ್ಯವನ್ನು ಮತ್ತಷ್ಟು ವಿಸ್ತರಣೆ ಮಾಡುತ್ತಿದೆ. ಎನ್ ಪಿ ಸಿ ಡಿ ಎಸ್ ಅಡಿಯಲ್ಲಿ ಸಮುದಾಯ ಹಂತದಲ್ಲಿ ಅಧಿಕ ರಕ್ತದೊತ್ತಡ ತಪಾಸಣೆ ಮಾಡವುದು. ಜನರಲ್ಲಿ ವ್ಯಾಯಾಮ, ಮಿತ ಆಹಾರ ಸೇವನೆ, ಚಟುವಟಿಕೆ ಆಧಾರಿತ ಜೀವನ ಶೈಲಿ ರೂಪಿಸಿಕೊಳ್ಳವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರದ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಔಷಧ ಲಭ್ಯ ಮತ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವುದು.



ಮಾಧ್ಯಮ ಸಹಕಾರದಿಂದ ಜಾಗೃತಿ ಅಭಿಯಾನ, ಆರೋಗ್ಯ ವಿಶ್ವ ವಿದ್ಯಾಲಯಗಳು, ನಾಗರಿಕ ಸಮುದಾಯದ ಜತೆ ಸಹಭಾಗಿತ್ವ ವಹಿಸಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಕ್ರಮ ವಹಿಸುವುದು ಸರ್ಕಾರದ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಇದರ ನಿಯಂತ್ರಣ ಕುರಿತು ಚರ್ಚಿಸಲು ಪ್ರೆಸ್ ಕ್ಲಬ್ ಆಡಿಟೋರಿಯಂನಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಪ್ರೊಫೆಸರ್ ಡಾ.ಪ್ರದೀಪ್ ಅಗರ್ ವಾಲ್, ಡಾ.ಓಂಪ್ರಕಾಶ್ ಮತ್ತಿತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST