LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎನ್.ವೈ.ಗೋಪಾಲಕೃಷ್ಣರು ಜಿಲ್ಲೆಯ ಅತ್ಯುತ್ತಮ ಶಾಸಕರು

ನಾಯಕನಹಟ್ಟಿ. ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ  ರವರು ಮಾದಿಗ ಸಮುದಾಯಕ್ಕೆ ಮೋಸ ಮಾಡುವ, ಅನ್ಯಾಯ ಮಾಡುವ ಅಥವಾ ಕಡೆಗಣಿಸುವ ವ್ಯಕ್ತಿಯಲ್ಲ ಜಿಲ್ಲೆಯ ಅತ್ಯುತ್ತಮ  ಶಾಸಕರು  ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಎಸ್.ಸಿ.ವಿಭಾಗ ಹಿರೇಹಳ್ಳಿ ಮಲ್ಲೇಶ್ ರವರು ಮಾತನಾಡಿದರು.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಪತ್ರಿಕೆ ಗಳಲ್ಲಿ ಪ್ರಕಟಗೊಂಡಿರುವುದನ್ನ ನಾವುಗಳು ಗಮನಿಸಿದ್ದೇವೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮುದಾಯದ ಸಹೋದರರು ಕ್ಷೇತ್ರದ ಶಾಸಕರು ಮಾದಿಗ ಸಮುದಾಯಕ್ಕೆ ಸ್ಥಳೀಯವಾಗಿ  ರಾಜಕೀಯ ಪ್ರಾತಿನಿಧ್ಯಯವನ್ನು ಇಲ್ಲದಾಗಿಸುವ ಉನ್ನಾರಕ್ಕೆ ಮುಂದಾಗಿದ್ದಾರೆ. ಮತ್ತು ಪಟ್ಟಣ ಪಂಚಾಯಿತಿಯ ನಾಮ ನಿರ್ದೇಶನ ಸದಸ್ಯರನ್ನ ಆಯ್ಕೆ ಮಾಡುವಲ್ಲಿ  ಮಾದಿಗ ಸಮುದಾಯವನ್ನು ಕೈಬಿಟ್ಟಿದ್ದಾರೆ ಎಂಬ ಆರೋಪಗಳನ್ನು ಸಮುದಾಯದ ಮುಖಂಡರು ಮಾಡಿರುವುದು  ಸತ್ಯಕ್ಕೆ ದೂರವಾದವು. ಕೆರೆಯಾಗಳಹಳ್ಳಿ, ಭೀಮನಕೆರೆ, ಗಿಡ್ಡಾಪುರ, ಮನ್ನೆಕೋಟೆ, ಕೋಡಿಹಳ್ಳಿ, ತಳಕು, ದೇವರೆಡ್ಡಿಹಳ್ಳಿ, ಕುದಾಪುರ, ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬಂಜಿಗೆರೆ, ತುಮಕರ‍್ಲಹಳ್ಳಿ, ಚಿಕ್ಕೋಬನಹಳ್ಳಿ ಭಟ್ರಹಳ್ಳಿ, ಚಿಕ್ಕೇರಹಳ್ಳಿ, ರ‍್ಲಹಳ್ಳಿ, ಕರಡಿಹಳ್ಳಿ, ಹಾನಗಲ್, ನಾಗಸಮುದ್ರ, ರಾಂಪುರ, ಸಿದ್ದಯ್ಯನಕೋಟೆ, ಅಂಬೇಡ್ಕರ್ ಭವನಕ್ಕೆ ತಲಾ 1 ಗ್ರಾಮಕ್ಕೆ 20 ಲಕ್ಷ ರೂ.ಗಳಂತೆ 44 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದರು.

 

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಿತಿಗಳಲ್ಲಿ ಆಯ್ಕೆ ಮಾಡುವಾಗ ಎಲ್ಲಾ ಸಮುದಾಯದವರನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುವಾಗ ಶಾಸಕರ ಗಮನಕ್ಕೆ ತಂದು ಆಯ್ಕೆ ಮಾಡಲಾಗುವುದು  ಎಂದು ಭರವಸೆ ನೀಡಿದರು.

 

ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಇಂತಹ  ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರನ್ನಾಗಿ ಮಾದಿಗ ಸಮುದಾಯದವರನ್ನೇ ಮಾಡಿದ್ದಾರೆ. ಕೆಲವರು ತಮ್ಮ ಬೇಳೆ  ಬೇಯಿಸುಕೊಳ್ಳುವುದಕ್ಕೆ ಇತರ ಮಾಡುತ್ತಿದ್ದಾರೆ ಎಂದರು



ಪಟ್ಟಣ ಪಂಚಾಯತಿ ಸದಸ್ಯ. ಜಾಗನೂರಹಟ್ಟಿ ಎಂ.ಟಿ.ಮಂಜುನಾಥ್ ಮಾತನಾಡಿ, ಶಾಸಕ ಎನ್.ವೈ.ಗೋಪಾಲಕೃಷ್ಣರವರು ಮಾದಿಗ ಸಮುದಾಯದ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರಲ್ಲಿ ಮಾದಿಗ ಲಿಂಗಾಯಿತರು ಗೊಲ್ಲರು ಅಂತ ಜಾತಿ ಭೇದ ಮಾಡಲಿಲ್ಲ. ನಾವು ಅವರೊಂದಿಗೆ ಅನ್ಯೂನತೆಯಲ್ಲಿ ಇದ್ದೇವೆ. ಪ್ರತಿ ಚುನಾವಣೆಗಳು ಸಹ ಕೆಲಸ ಮಾಡಿದ್ದೇವೆ ನಮ್ಮ ಪಕ್ಷದವರು ಹೇಳಿಕೆ ಕೊಟ್ಟಿರೋದನ್ನು ಖಂಡಿಸುತ್ತೇನೆ  ನನ್ನ ವಾರ್ಡಿಗೆ 20 ಲಕ್ಷ ಅನುದಾನವನ್ನು ನೀಡಿದ್ದಾರೆ. ಎನ್.ವೈ.ಗೋಪಾಲಕೃಷ್ಣರವರು ಸರಳ ಸಜ್ಜನಿಕೆ ವ್ಯಕ್ತಿ ಅವರಲ್ಲಿ ಅಷ್ಟೆ ಕೋಪ ಇರುತ್ತೆ, ಅಷ್ಟೆ ಪ್ರೀತಿ ಇರುತ್ತೆ ಎಂದು ಹೇಳಿದರು.

 

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಶ್ರೀಕಾಂತ್ ಮಾತನಾಡಿ ಎನ್.ವೈ.ಗೋಪಾಲಕೃಷ್ಣರವರು ಎಲ್ಲಾ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯ ಕೊಡುವ ವ್ಯಕ್ತಿ. ಮಾದಿಗ ಸಮುದಾಯದ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಪಟ್ಟಣದಲ್ಲಿ ಒಳ್ಳೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಬೇರೆ ಜನಾಂಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ. ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು, ಕುರುಬ ಜನಾಂಗದವರಿಗೆ ನಾಮ ನಿರ್ದೇಶಕ ಸದಸ್ಯರನ್ನಾಗಿ ಮಾಡಿದ್ದಾರೆ. ಈ ಹಿಂದೆ ಹೊಸದಾಗಿ ಪಟ್ಟಣ ಪಂಚಾಯಿತಿ ಆದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಆಶ್ರಯ ಕಮಿಟಿ ಸದಸ್ಯೆಯನು ಮಾಡಿ ಮಾನವಿಯತೆ ಮೇರೆದರು. ಮಾದಿಗ ಸಮುದಾಯಕ್ಕೆ ಯಾವುದೇ ತರಹದ ಅನ್ಯಾಯ ಮಾಡಿಲ್ಲ. ಅವರು ಕೆಟ್ಟ ದೃಷ್ಟಿಯಿಂದ ನೋಡಿಲ್ಲ ಎಲ್ಲಾ ಜನಾಂಗಕ್ಕೆ ಒಂದೇ ಎಂದು ಭಾವಿಸಿದ್ದಾರೆ. ನಾಯಕನಹಟ್ಟಿ ಪಟ್ಟಣದ ಎಕೆ ಕಾಲೋನಿ ಶಾಲೆಗೆ 5 ಲಕ್ಷ ರೂ ವೆಚ್ಚದಲ್ಲಿ ಹೊಸ ಹೈಟೆಕ್ ಶೌಚಾಲಯ ಆಗಿದ್ದು, ಟೆಂಡರ್ ಕರೆದಿದ್ದಾರೆ ಎಂದು ಅವರು ಮಾತನಾಡಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಎಸ್.ಸಿ ವಿಭಾಗ ಅಧ್ಯಕ್ಷರು ಆರ್.ಬಸಪ್ಪ, ನೇಹಮಲ್ಲೇಶ್, ಮಾಜಿ ಗ್ರಾ.ಪಂ ಸದಸ್ಯ ಆರ್.ಶ್ರೀಕಾಂತ್, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ವೆಂಕಟೇಶ್, ಕೆಪಿಸಿಸಿ ರಾಜ್ಯ ಸಂಚಾಲಕ ಹಿರೇಹಳ್ಳಿ ಮಲ್ಲೇಶ್, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST