ಅವರು ಸಂಸ್ಥೆಯ ವೃತ್ತೀಯ ಆರೋಗ್ಯ ಕೇಂದ್ರದಲ್ಲಿ ಸಂಸ್ಥೆಯ ಉದ್ಯೋಗಿಗಳಿಗಾಗಿ ಉಚಿತ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆಯ ಮುಖ್ಯ ಉದ್ದೇಶ ಯಾವುದೇ ರೋಗಗಳ ಆರಂಭಿಕ ಪತ್ತೆ ಹಚ್ಚುವುದಾಗಿದೆ. ಇದರಿಂದ ಮುಂದಿನ ಬರುವ ಆರೋಗ್ಯ ತೊಂದರೆಗಳನ್ನು ನಿಭಾಯಿಸುವುದಾಗಿದೆ. ಯಾವುದೇ ಮನುಷ್ಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಅವರು ದುಶ್ಚಟಗಳಿಂದ ದೂರವಿರಬೇಕು. ನಿಯಮಿತವಾದ ಆಹಾರ ಸೇವನೆ, ವ್ಯಾಯಾಮ, ಧ್ಯಾನ, ವಿಶ್ರಾಂತಿ ಅವಶ್ಯವಿದೆ. ಅವರು ಇಂತಹ ತಪಾಸಣಾ ಶಿಬಿರಗಳು ಏರ್ಪಡಿಸುವುದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ರೋಗ, ಕ್ಯಾನ್ಸರ್ ಮುಂತಾದ ರೋಗ ಪತ್ತೆಹಚ್ಚುವಿಕೆ ಸುಲಭ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಮುಖ್ಯಕಾರ್ಯಾನಿರ್ವಾಹಕಾಧಿಕಾರಿ ಮಂಜುನಾಥ ಪ್ರಭು ರವರು ಮಾತನಾಡಿ, ಇಂತಹ ವೈದ್ಯಕೀಯ ತಪಾಸಣಾ ಶಿಬಿರಗಳಿಂದ ಎಲ್ಲರಿಗೂ ಆರೋಗ್ಯ ಸೇವೆಯ ಜೊತೆ ವೈಧ್ಯಕೀಯ ಸಲಹೆ ದೊರೆಯುತ್ತದೆ. ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಯಾರೂ ಕೂಡ ನಿರ್ಲಕ್ಷ ವಹಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿ.ಇ.ಒ.ವಿಮಲ್ ಸಿಂಗ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಪ್ರಧಾನ ಹಣಕಾಸು ಅಧಿಕಾರಿ ವಿ.ವಿ.ವಿ.ರಾಜು.ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮನೀಶ್.ಡಿ. ವರ್ಣೇಕರ್, ಹಣಕಾಸು ಮತ್ತು ವಾಣಿಜ್ಯ ವಿಭಾಗದ ರಾಜೇಂದ್ರ ಮುಂದ್ರಾ, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ, ವೃತ್ತೀಯ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ.ಕೆ.ಎಂ.ಅಂಜನಿ, ಡಾ.ಜನಾರ್ದನ್, ಕೆ.ಎಸ್.ಆಸ್ಪತ್ರೆಯ ಡಾ.ಶಶಾಂಕ್, ಕೆ.ಎಸ್.ಪೂರ್ಣಿಮಾ ಮತ್ತು ಸಿಬ್ಬಂದಿ, ವಿಹಾನ್ ಹೆಲ್ತ್ ಕೇರ್ ನ ಶೇಖರ್, ವೃತ್ತೀಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳಾದ ಜಹಾಂಗೀರ್, ಜೇಕಬ್ ಸುದರ್ಶನ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.