ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 1008 ಮುತ್ತೈದರಿಗೆ ಉಚಿತವಾಗಿ ಉಡಿ ತುಂಬುವ ಕಾರ್ಯಕ್ರಮವಿದೆ. ಶ್ರೀ ವೀರಾಂಜನೇಯ ದೇವಸ್ಥಾನದ ಬಾಲಕಿಯರ ಕೋಲಾಟ ಮಂಡಳಿಯಿಂದ ಕಾರ್ಯಕ್ರಮ, ಶ್ರೀ ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರ, ಶ್ರೀ ಲಲಿತಾ ದೇವಿ ಅಲಂಕಾರ, ಶ್ರೀ ಅನ್ನಪೂರ್ಣೇಶ್ವರಿ ದೇವಿ ಅಲಂಕಾರ, ಶ್ರೀ ಮಹಾಲಕ್ಷ್ಮಿ ದೇವಿ ಅಲಂಕಾರ ವೆಂಕಟೇಶ್ವರ ಸ್ವಾಮಿ ಅಲಂಕಾರ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಕಲ್ಯಾಣೋತ್ಸವ, ಶ್ರೀ ವಾರಾಹಿ ದೇವಿ ಅಲಂಕಾರ, ಶ್ರೀ ದುರ್ಗಾದೇವಿ ಅಲಂಕಾರ, ಶ್ರೀ ಮಹಿಷಾಸುರ ಮರ್ದಿನಿ ದೇವಿ ಅಲಂಕಾರ ಕಾರ್ಯಕ್ರಮ ಇರಲಿದೆ ಎಂದರು.

ಶ್ರಿ ದುರ್ಗಾದೇವಿ ಟ್ರಸ್ಟ್ ನ ಗೌರವ ಪದಾಧಿಕಾರಿಗಳಾದ ಸಿಎಸ್ ಸತ್ಯನಾರಾಯಣ್, ಹನುಮಂತಪ್ಪ ಸಂತೋಷ್ ಸ್ವಾಮಿ, ಜಿಎಸ್ ವೆಂಕಟೇಶ್, ಹನುಮಂತಪ್ಪ, ರಾಧಮ್ಮ, ಯರಿಸ್ವಾಮಿ, ಸುನಿಲ್, ಕೃಷ್ಣ, ರಮೇಶ್, ವಿಜಯ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಇದ್ದರು.