ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶಕುಂತಲಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ರಫಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಗರ್ಭಿಣಿಯರಿಗೆ ಓ.ಆರ್. ಎಸ್. ಮತ್ತು ಜಿಂಕ್ ಮಾತ್ರೆಗಳ ಮಹತ್ವದ ಬಗ್ಗೆ, ವಯಸ್ಸಿಗೆ ಅನುಗುಣವಾಗಿ ನೀಡಬೇಕಾದ ಓ ಆರ್ ಎಸ್ ಪ್ರಮಾಣ ಮತ್ತು ವಿಶೇಷ ಲಾಭಗಳು, ಗರ್ಭಿಣಿಯರಿಗೆ ಮತ್ತು ಮಕ್ಕಳ ತಾಯಿಂದಿರಿಗೆ ಕೈಗಳ ಸ್ವಚ್ಛತೆ ಬಗ್ಗೆ ಹಾಗೂ ಮಕ್ಕಳಿಗೆ ಸಾಬೂನಿಂದ ಕೈ ತೊಳೆಯುವ ಬಗ್ಗೆ ಹಾಗೂ ಓ ಆರ್ ಎಸ್ ತಯಾರಿಸುವ ವಿಧಾನದ ಬಗ್ಗೆ ತಿಳಿಸಿದರು.

ತಾಯಿಕಾರ್ಡ ಮಹತ್ವ ಮತ್ತು ಗರ್ಭಿಣಿಯ ಆರೈಕೆ ಬಗ್ಗೆ,ಎದೆಯ ಹಾಲಿನ ಮಹತ್ವದ ಬಗ್ಗೆ, ಹೆರಿಗೆ ಸಿದ್ಧತೆ ಬಗ್ಗೆ, ಸರಕಾರಿ ಆಸ್ಪತ್ರೆ ಹೆರಿಗೆ ಬಗ್ಗೆ, ಪೌಷ್ಟಿಕ ಆಹಾರ ಬಗ್ಗೆ, ಲಸಿಕೆ ಕಾರ್ಯಕ್ರಮ ಮತ್ತು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸೌಲಭ್ಯಗಳ ಬಗ್ಗೆ, ಎಲ್ಲಾ ಗರ್ಭಿಣಿಯರಿಗೆ ಐಎಫ್ಎ ಮಾತ್ರೆಗಳ ಮತ್ತು ಕ್ಯಾಲ್ಸಿಯಂ ಮಾತ್ರೆಯ ಮಹತ್ವದ ಬಗ್ಗೆ ಮತ್ತು ಅಂಗಾಗ ದಾನಗಳ ಬಗ್ಗೆ ಮಾಹಿತಿ ಮತ್ತು ನೊಂದಣಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಫಕೀರಮ್ಮ, ಅಂಗನವಾಡಿ ಕಾರ್ಯಕರ್ತರಾದ ಪದ್ಮಾವತಿ, ಶ್ರೀದೇವಿ, ಆಶಾ ಕಾರ್ಯಕರ್ತೆ ಯಶೋದ ಉಪಸ್ಥಿತಿದ್ದರು.