ನಾಯಕನಹಟ್ಟಿ : ನಮ್ಮ ಭಾರತದ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿಯವರು ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅವರು ಒಂದು ದಿನವು ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಹಗಲು ರಾತ್ರಿ ಎನ್ನದೆ ನಮ್ಮ ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಳಕು ಮತ್ತು ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಹೇಳಿದರು.
ಪಟ್ಟಣದ ನರೇಂದ್ರ ಮೋದಿಯ 75 ನೆ ವರ್ಷ ದ ಹುಟ್ಟು ಹಬ್ಬದ ಪ್ರಯುಕ್ತ ಬುಧವಾರ ಮಧ್ಯಕರ್ನಾಟಕದ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಒಳಮಠಕ್ಕೆ ಆಗಮಿಸಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು ನರೇಂದ್ರ ಮೋದಿಯವರಿಗೆ ಆರೋಗ್ಯ ಆಯಸ್ಸು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಕೈಯಲ್ಲಿ ನಮ್ಮ ದೇಶ ಸುರಕ್ಷಿತವಾಗಿದೆ. 1950 ಸೆಪ್ಟೆಂಬರ್ 17 ರಂದು ಗುಜರಾತಿನ ವಡ್ನಾಗರದಲ್ಲಿ ಹುಟ್ಟಿ ಬೆಳೆದವರು, ಅವರ ಜೀವನೋಪಯಕ್ಕಾಗಿ ಚಹ ವ್ಯಾಪಾರಿಯಾಗಿ ಕೆಲಸ ಮಾಡಿದವರು. ನಂತರ ಆರ್‌ಎಸ್‌ಎಸ್ ಬಿಜೆಪಿ ಸಂಪರ್ಕದಿಂದ ಹಂತ ಹಂತವಾಗಿ ಬೆಳೆದರು ಬಂದರು. ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಸ್ತುತ ನಮ್ಮ ಭಾರತ ದೇಶದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿರುವುದರಿಂದ ಎಲ್ಲಾರೂ ಒಗ್ಗೂಡಿ ಸಂಘಟನೆ ಮಾಡೋಣ ಬಿಜೆಪಿ ಅಭ್ಯಾರ್ಥಿ ಯಾರಾದರು ಸಹಿ ಅವರ ಗೆಲುವಿಗೆ ಶ್ರಮಿಸೋಣ. ನಮ್ಮ ದೇಶ ವೇಗವಾಗಿ ಅಭಿವೃದ್ಧಿ ಹೊಂದಿದೆ ಆಗಾಗಿ ಇಡಿ ಪ್ರಪಂಚ ಭಾರತದ ಕಡೆ ನೋಡುತ್ತಿದೆ ಎಂದು ಅವರು ಮಾತನಾಡಿದರು.
ನಿಕಟ ಪೂರ್ವ ಅಧ್ಯಕ್ಷರಾದ ಈ.ರಾಮರೆಡ್ಡಿ ಮಾತನಾಡಿ ಮೋದಿಯವರು 100 ವರ್ಷ ಬಾಳಲಿ ನಮ್ಮ ದೇಶವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲಿ. ಇಡಿ ನಮ್ಮ ಭಾರತ ದೇಶ ಇವತ್ತು ಇಡಿ ಪ್ರಪಂಚನ್ನು ಭಾರತದ ಕಡೆ ನೋಡುವಂತಹ ಪ್ರಸಂಗ ಬಂದಿದೆ. ಎಲ್ಲೂ ಕೂಡ ನಾವು ಮುಂದೆ ಇದ್ದೇವೆ. ಯಾವುದಕ್ಕೂ ಜಗ್ಗಲ್ಲ ನರೇಂದ್ರ ಮೋದಿಯವರು ಒಳ್ಳೆ ಆಡಳಿತವನ್ನು ಕೊಡುತ್ತಿದ್ದಾರೆ. ಆಕ್ಟೋಬರ್ 02 2014 ರಂದು ಮಹಾತ್ಮ ಗಾಂಧಿಜಿ ಜನ್ಮ ದಿನದಂದು ದೇಶಾದ್ಯಂತ ಸ್ವಚ್ಚತೆಯನ್ನು ಕಾಪಾಡುವ ಒಂದು ಜನಾಂದೊಲವಾದ ಸ್ವಚ್ಚ ಭಾರತ ಮಿಷನ್ ಪ್ರಾರಂಭಿಸಿದರು. ಬಡ ಜನರಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲು ಉಜ್ವಲ ಯೋಜನೆ ಪ್ರಾರಂಭ ಮಾಡಿದರು. ಬಹುತೇಕ ಮಹಿಳೆಯರ ಹೊಗೆ ಮುಕ್ತ ಅಡುಗೆ ಮನೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಬದಲಾವಣೆ ತಂದರು. ಸುಮಾರು 10 ಕೋಟಿ ಪಲಾನುಭವಿಗಳು ಪ್ರಯೋಜನ ಪಡೆದುಕೊಂಡರು ಎಂದರು.
ಬಿಜೆಪಿ ಮುಖಂಡ ಪಾಪೇಶ್ ನಾಯಕ ಮಾತನಾಡಿ ದೇಶದಲ್ಲಿ ಅತೀ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಎರಡನೇ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು ಈ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಮ್ಮ ದೇಶಕ್ಕೆ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದಾರೆ. ನಮ್ಮ ದೇಶವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಸೆಪ್ಟಂಬರ್ 17 ಬಹಳ ಸಂತೋಷದ ದಿನವಾಗಿದೆ ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ತಳಕು ಮತ್ತು ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರು ಮಂಡಲ ಉಸ್ತುವರಿಗಳು ಪಿ.ಶಿವಣ್ಣ, ನಿಕಟ ಪೂರ್ವ ಅಧ್ಯಕ್ಷ ರಾಮರೆಡ್ಡಿ, ಎಂ.ವೈ.ಟಿ.ಸ್ವಾಮಿ, ಪಾಪೇಶ್ ನಾಯಕ, ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದ, ಜಿಲ್ಲಾ ರೈತ ಕಾರ್ಯದರ್ಶಿ ಬೋಸೆರಂಗ, ಯುವ ಮೋರ್ಚಾ ಅಧ್ಯಕ್ಷ ತ್ರೀಶೂಲ್, ಮಂಡಲ ಉಪಾಧ್ಯಕ್ಷ ಓಬಣ್ಣ ಚನ್ನಬಸಯನಹಟ್ಟಿ, ಶ್ರೀನಿವಾಸ್, ಹೆಚ್.ವಿ.ಪ್ರಕಾಶ್‌ರೆಡ್ಡಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳು, ರಾಜು, ರಾಜೇಂದ್ರ, ಓಬಿಸಿ ಅಧ್ಯಕ್ಷ ರಂಗನಾಥ, ಎಸ್.ಸಿ ಮೋರ್ಚ ಮಂಡಲ ಅಧ್ಯಕ್ಷ ಶಂಕರಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪವಿತ್ರ, ಬಾಲರಾಜ್ ಯಾದವ್ ರೈತ ಮೋರ್ಚಾ ನಿಕಟ ಪೂರ್ವ ಅಧ್ಯಕ್ಷರು, ಚೌಳಕೆರೆ ಬಸಣ್ಣ, ಹಿರೆಹಳ್ಳಿ ನಾಗರಾಜ್, ಗಿಡ್ಡಾಪುರ ಬೋರಯ್ಯ, ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಇದ್ದರು.