LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ವಿಜೃಂಭಣೆಯಿಂದ ಜರುಗಿದ ನಂದಿ ಬಂಡಿ ಬಸವೇಶ್ವರ ರಥೋತ್ಸವ

ಕೊಪ್ಪಳ: ತಾಲೂಕಿನ ಹ್ಯಾಟಿ - ಮುಂಡರಗಿ ಗ್ರಾಮದ ಶ್ರೀ ನಂದಿ ಬಂಡಿ ಬಸವೇಶ್ವರ ರಥೋತ್ಸವು ಇಂದು ಅಪಾರ ಸಂಖ್ಯೆಯ ಭಕ್ತರ  ಮದ್ಯೆ ಜರುಗಿತು.

ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗುವ ಈ ರಥೋತ್ಸವಕ್ಕೆ ತಾಲೂಕಿನ ಸುತ್ತು ಹತ್ತು ಹಳ್ಳಿಗಳ ಭಕ್ತರು ಮತ್ತು ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಯ ಭಕ್ತರು ಪಾಲ್ಗೊಳ್ಳುವರು.  ಜಾತ್ರೆಯ ಪ್ರಯುಕ್ತ ಇಂದು ಪ್ರಾತ:ಕಾಲದಿಂದ ದೇವಸ್ಥಾನದಲ್ಲಿ ಪೂಜೆ  ರುದ್ರಾಭಿಷೇಕ,ಧೀರ್ಘ ದಂಡ ನಮಸ್ಕಾರ ಇತ್ಯಾದಿ ಕಾರ್ಯಕ್ರಮ ಜರುಗಿದವು. ಜಾತ್ರೆಗೆ ಆಗಮಿಸಿದ ಭಕ್ತರೆಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.



ಆಗಷ್ಟ್ 14 ರಿಂದ  ಆರಂಭವಾದ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು, ಆ. 19 ರ ಮಂಗಳವಾರ ಸಾಯಂಕಾಲ ಭಕ್ತ ಹಿತ ಚಿಂತನ ಸಭೆ ಮತ್ತು ಸಂಗೀತ ಕಾರ್ಯಕ್ರಮ, ರಾತ್ರಿ ಮದ್ದು ಸುಡುವುದರ ಮುಖಾಂತರ ಜಾತ್ರೆ ಸಂಪನ್ನವಾಗುವುದೆಂದು, ಹ್ಯಾಟಿ- ಮುಂಡರಗಿ, ಮೆಳ್ಳಿಕೇರಿ ಹಾಗು ಲಾಚನಕೇರಿ ಗ್ರಾಮಗಳ  ಶ್ರೀ ನಂದಿಬಂಡಿ ಬಸವೇಶ್ವರ ದೇವಸ್ಥಾನ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ