LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಾಮೆಂಟ್ಸ್ ಉದ್ಯಮದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಕಾಲ  ಸಿದ್ದ ಉಡುಪುಗಳ ಬೃಹತ್ ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

ಬೆಂಗಳೂರು :  ಅರಮನೆ ಮೈದಾನ ಪ್ರಿನ್ಸಸ್ ಶೀರಿನ್ ನಲ್ಲಿ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ 30ನೇ ಸಿಗಾಫೇರ್ ಬಿ ಟು ಬಿ ಗಾರ್ಮೆಂಟ್ಸ್ ಸಿದ್ದ ಉಡುಪುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಿದೆ. ಜವಳಿ ಉದ್ಯಮದ ವ್ಯಾಪಾರ, ವಹಿವಾಟು ನಡೆಸಲು ವೇದಿಕೆ ಸಜ್ಜಾಗಿದೆ.



ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ನಿರ್ದೇಶಕ ರಾಜ್ ಪುರೋಹಿತ್,  ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯನ್ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಉಪಾಧ್ಯಕ್ಷ ನರೇಶ್ ಲಕನ್ ಪಾಲ್, ಕಾರ್ಯದರ್ಶಿ ರಾಜೇಶ್ ಚಾವತ್, ಖಜಾಂಚಿ ತೇಜಸ್ ಮೆಹ್ತಾ, ಗೋವಿಂದ ಮುಂದ್ರ, ನಿರ್ದೇಶಕ ರಾಜ್ ಟೇಕಡಿಪಾಲ್ ಉದ್ಘಾಟಿಸಿದರು.

ಎಫ್ ಕೆ.ಸಿ.ಸಿ.ಐ. ಅಧ್ಯಕ್ಷ ಎಂ.ಜಿ.ಬಾಲಕೃಷ್ಣ    ಮಾತನಾಡಿ, ಸೌತ್ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ  30ವರ್ಷದಿಂದ ಏಕ್ಸಪೋ ನಡೆಯುತ್ತಿದೆ, ರಾಜ್ಯ ಮತ್ತು ರಾಷ್ಟ್ರಗಳಿಂದ ಗಾರ್ಮೆಂಟ್ಸ್ ಉದ್ಯಮದವರು ತಮ್ಮ ಸಿದ್ದ ಉಡುಪುಗಳ ಪ್ರದರ್ಶನ ಮೇಳದಲ್ಲಿ ಭಾಗವಹಿಸಿ, ತಮ್ಮ ಸಂಸ್ಥೆಗಳ ವಿಶೇಷತೆಗಳನ್ನು ಪ್ರದರ್ಶಿಸಿದ್ದಾರೆ‌. ರಾಜ್ಯದಲ್ಲಿ ಗಾರ್ಮೆಂಟ್ಸ್ ಉದ್ಯಮ ಹೆಚ್ಚು ವೇಗವಾಗಿ ಬೆಳಯುತ್ತಿದೆ. ಸಿಗಾಫೇರ್ ನಿಂದ ಮಾರಾಟಗಾರರು, ಖರೀದಿಗಾರರಿಗೆ ಅನುಕೂಲವಾಗಲಿದೆ. ಗಾಮೆಂಟ್ಸ್ ಉದ್ಯಮದಲ್ಲಿ ಉತ್ತಮ ಭವಿಷ್ಯವಿದೆ ಎಂದರು.



ಎಫ್ ಕೆ.ಸಿಸಿಐ, ರಾಜ್ಯ ಮತ್ತು ಕೇಂದ್ರ ಸರ್ಕಾರ ಜವಳಿ ಉದ್ಯಮಕ್ಕೆ ಸಹಕಾರ ನೀಡುತ್ತಿದೆ, ವಿದೇಶಗಳಿಗೆ ರಾಜ್ಯದ ಸಿದ್ದ ಉಡುಪುಗಳು ಹೊರ ದೇಶಗಳಿಗೆ ರಫ್ತು ಆಗುವುದರಿಂದ ಹೆಚ್ಚಿನ ತೆರಿಗೆ ಸಿಗುತ್ತದೆ. ರಾಜ್ಯದಲ್ಲಿ ಗಾಮೆಂಟ್ಸ್ ಉದ್ಯಮ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಲಭಿಸಿದೆ ಎಂದು ಹೇಳಿದರು.

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಗ್ಲಾ ಮಾತನಾಡಿ, ಗಾರ್ಮೆಂಟ್ಸ್ ಉದ್ಯಮ ದಕ್ಷಿಣ ಭಾರತದಲ್ಲಿ ಮತ್ತು ಬೆಂಗಳೂರಿನಲ್ಲಿ ಅತಿವೇಗವಾಗಿ ಬೆಳದಿದೆ. ಪ್ರಖ್ಯಾತ ನೂರಾರು ಗಾರ್ಮೆಂಟ್ಸ್ ಬ್ರಾಂಡೆಡ್ ಸಂಸ್ಥೆಯ ಉದ್ಯಮಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ., 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ಸುರ್ವಣಾವಕಾಶ ಇದಾಗಿದೆ.



ಬೆಂಗಳೂರುನಗರ ಗಾರ್ಮೆಂಟ್ಸ್ ಉದ್ಯಮದಲ್ಲಿ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಗಾರ್ಮೆಂಟ್ಸ್ ಉದ್ಯಮ ಆರಂಭಿಸಲು ಮತ್ತು ಸಿದ್ದ ಉಡುಪುಗಳು ನವನವೀನ ಶೈಲಿಗಳು ಫ್ಯಾಶನ್ ಶೋ ಸಹ ಏರ್ಪಡಿಸಲಾಗಿದೆ.

ಕಳೆದ ಬಾರಿ ಸಿಗಾಫೇರ್ ನಿಂದ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಮತ್ತು ಈ ಬಾರಿ ಸಾವಿರಾರು ಗಾರ್ಮೆಂಟ್ಸ್ ಉದ್ಯಮದಲ್ಲಿ ಇರುವವರು ಭೇಟಿ ನೀಡುವ ನಿರೀಕ್ಷೆ ಇದೆ. ಇದರಿಂದ ಗಾರ್ಮೆಂಟ್ಸ್ ನಿಂದ ನೇರ ಮಾರಾಟಗಾರರಿಗೆ ಸಿದ್ದ ಉಡುಪುಗಳು ದೊರಯಲಿದೆ ಎಂದು ಅನುರಾಗ್ ಸಿಂಗ್ಲಾ ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST