LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವೆಂಬರ್ ನಲ್ಲಿ ಮೋದಿ ಬದಲಾವಣೆ ಆಗ್ತಾರೆ : ಸಂತೋಷ್ ಲಾಡ್

ಬೆಂಗಳೂರು: ನವೆಂಬರ್ ನಲ್ಲಿ ಕೇಂದ್ರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾವಣೆ ಆಗುತ್ತಾರೆ ಅಂತ ನಾನು ಹೇಳ್ತೀನಿ. ಇದು ನನ್ನ ಭವಿಷ್ಯ ಅಂತ ತಿಳಿದುಕೊಳ್ಳಿ ಎಂದು ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸಂತೋಷ್ ಲಾಡ್ ತಿಳಿಸಿದರು.

 

ಸ್ಯಾಂಕಿ ರಸ್ತೆಯ ಸಪ್ತ ಸಚಿವರ ಅಂಕಣದ ತಮ್ಮ ನಿವಾಸದ ಕಚೇರಿಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದ ಡಾ. ಸ್ವಪ್ನ ಎಸ್. ಅಸೋಷಿಯೇಟ್ ಡೀನ್  ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಋತುಚಕ್ರ ನೀತಿ ಕುರಿತ ಸಮಿತಿಯ ಸದಸ್ಯರ ಜೊತೆ ಚರ್ಚೆ ನಡೆಸಿ, ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತಿನ್ ಗಡ್ಕರಿ ಮುಂದಿನ ಪ್ರಧಾನಮಂತ್ರಿ ಆಗಲಿದ್ದಾರೆ ಎಂದರು.

 

ಇದು ನನ್ನ ಮಾತಲ್ಲ. ಬಿಜೆಪಿಯವರ ಅಂತರಾಳದಲ್ಲಿಯೇ ಮಸಲತ್ತು ನಡೆಯುತ್ತಿದೆ. ನವೆಂಬರ್-ಡಿಸೆAಬರ್ ನಲ್ಲಿ ರಾಜಕೀಯ ಕ್ರಾಂತಿಯಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬದಲಾಗುತ್ತಾರೆ, ನಿತಿನ್ ಗಡ್ಕರಿ ಹೊಸದಾಗಿ ಪ್ರಧಾನಿಯಾಗುತ್ತಾರೆ ಎಂದರು. `ಗುರೂಜಿಯೊಬ್ಬರು ಕಾಂಗ್ರೆಸ್ ಆಡಳಿತಕ್ಕೆ ಇದು ಕೊನೆಗಾಲ. ಮತ್ತೆಂದೂ ಅಧಿಕಾರಕ್ಕೆ ಬರಲ್ಲ. ಕರ್ನಾಟಕ ಮೂರು ಭಾಗವಾಗುತ್ತದೆ, ಭಾರತ ಎರಡು ಭಾಗವಾಗುತ್ತದೆ ಅಂತ ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಅವರು ಖಾರವಾಗಿಯೇ ಈ ಮಾತು ಹೇಳಿದರು. ಮುಖ್ಯಮಂತ್ರಿಯವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವುದು ವಿಶೇಷವೇನಿಲ್ಲ. ನಮ್ಮಲ್ಲಿ ನವೆಂಬರ್ ಕ್ರಾಂತಿ ಎಂಬುದೇನಿಲ್ಲ. ಆದರೆ ಕೇಂದ್ರದಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುತ್ತಾರೆ ಎಂದರು.



ಬಿಜೆಪಿಯಲ್ಲಿನ ಆಂತರಿಕ ಚರ್ಚೆಗಳನ್ನು ನಾನು ಹೇಳುತ್ತಿದ್ದೇನೆ. ಮೋದಿ ಅವರ ವಿರುದ್ಧ ಬಿಜೆಪಿಯ ನಾಯಕರಾಗಲಿ, ಮಾಧ್ಯಮದವರಾಗಲಿ ಮಾತನಾಡಲು ಅವಕಾಶ ಇಲ್ಲದಂತಹ ಪರಿಸ್ಥಿತಿ ಇದೆ. ಹೀಗಾಗಿ ನವೆಂಬರ್ ನಲ್ಲಿ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆಯಲಿ, ಪ್ರಧಾನಿ ಅವರು ಅಲ್ಲಿಗೆ ಹೋಗುತ್ತಾರೆ. ಎಲ್ಲ ಸಮುದಾಯದ ಹೆಸರುಗಳನ್ನು ಹೇಳಿ ಅವರು ನಮ್ಮ ಬಾಂಧವರು ಅನ್ನುತ್ತಾರೆ. ಯಾವುದೇ ರಾಜ್ಯಕ್ಕೆ ಹೋದರೂ ಆ ರಾಜ್ಯದ ವಿಸ್ತçತ ಅರ್ಥ ಹೇಳುತ್ತಾರೆ. ಪ್ರಧಾನಿಯವರು ತಮ್ಮ ಹುದ್ದೆಯ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ವಿದೇಶಗಳಿಗೆ ಹೋದರೆ ಏನೋ ಒಂದು ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಾಗ ಪ್ರಾಸ ಬದ್ಧವಾಗಿ ಮಾತನಾಡುತ್ತಾರೆ. ಇದು ಪ್ರಧಾನಿ ಅವರ ಕೆಲಸವೇ? ಕಳೆದ ೧೦ ವರ್ಷದಲ್ಲಿ ಇಂಥ ಪ್ರಧಾನಿಯನ್ನು ನೋಡಿರಲಿಲ್ಲ ಎಂದು ಆಕ್ಷೇಪಿಸಿದರು.

 

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏನೇನು ಮಾಡುತ್ತಿದೆ? ದೇಶಕ್ಕೆ ಇದರಿಂದ ಏನುಪಯೋಗ? ಎನ್ನುವುದನ್ನು ರಾಷ್ಟçದ ಯುವಕರಿಗೆ ಶೀಘ್ರವೇ ಅರ್ಥವಾಗಲಿದೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ ಅವರು, ರಾಮ ಜೇಠ್ಮಲಾನಿ ಅವರು ನರೇಂದ್ರ ಮೋದಿ ಅವರಿಗೇ ಸುಳ್ಳುಗಾರ ಎಂದು ಸಂಬೋಧಿಸಿದ್ದರು. ಅವರು ರಾಹುಲ್ ಗಾಂಧಿಯವರನ್ನು ಟೀಕಿಸುತ್ತಾರೆ. ಅವರು ಮೋದಿ-ರಾಹುಲ್ ಗಾಂಧಿ ಯಾರನ್ನು ಬಿಡುತ್ತಾರೆ? ಎಂದರು.



ಸಮಿತಿಗೆ ಅಭಿನಂದಿಸಿದ ಲಾಡ್:

 

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಸಂಪುಟದ ಎಲ್ಲ ಸಚಿವರು ಋತು ಚಕ್ರ ನೀತಿ-೨೦೨೫ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಓರಿಸ್ಸಾದ ರಂಜಿತಾ ಪ್ರಿಯದರ್ಶಿನಿ ಎನ್ನುವ ಯುವತಿ ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ಆಗುವ ಮಾನಸಿಕ ಮತ್ತು ದೈಹಿಕ ಆರೋಗ್ಯದ ತುಮುಲಗಳ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಿದ್ದರು. ಡಾ.ಸಪ್ನಾ ಅವರ ಸಮಿತಿಯಲ್ಲಿನ ಸದಸ್ಯರಾದ ಕವಿತಾ, ಪ್ರತಿಭಾ, ಜಯಮ್ಮ, ಶಾಮಲಾ, ಮಂಜುಳಾ, ಸುನೀತಾ, ಆರೀಫ್, ಕಾತ್ಯಾಯಿನಿ, ಸೀತಾರಾಮ್, ಶೃತಿ ಸೇರಿದಂತೆ ಎಲ್ಲ ಸದಸ್ಯರನ್ನು ಇದೇವೇಳೆ ಸಚಿವರು ಶಾಲು ಹೊದಿಸಿ, ಸನ್ಮಾನಿಸಿದರು. ಭಾಗ್ಯಲಕ್ಷಿö್ಮ, ಸ್ತಿçÃಶಕ್ತಿ ಮತ್ತು ಋತು ಚಕ್ರ ನೀತಿ ಜಾರಿಯಾದ ಬಳಿಕ ಮುಂದಿನ ದಿನಗಳಲ್ಲಿ ಮನೆಗೆಲಸ ಮಾಡುವ ಹೆಣ್ಣು ಮಕ್ಕಳ ರಕ್ಷಣೆಗೆ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಶ್ರೀಮಂತ ಹೆಣ್ಣು ಮಕ್ಕಳು ಋತು ಚಕ್ರ ಸಮಯದಲ್ಲಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಾರೆ. ಮಧ್ಯಮ ಮತ್ತು ಬಡ ಹೆಣ್ಣು ಮಕ್ಕಳಿಗೆ ಋತುವಿನ ಸಮಯದಲ್ಲಿ ಸಾಕಷ್ಟು ತೊಂದರೆಗಳಿರುತ್ತವೆ. ಮನೆಗೆಲಸ ಮಾಡುವ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ನೀತಿ ರೂಪಿಸಲು ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST