LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಪ್ರಾಕೃತಿಕ ಸಂಪನ್ಮೂಲಗಳ ಮಿತಬಳಕೆ ಮುಂದಿನ ಪೀಳಿಗೆಗೆ ಸಹಕಾರಿ

ಮರಿಯಮ್ಮನ ಹಳ್ಳಿ :  ಪ್ರಾಕೃತಿಕ ಸಂಪನ್ಮೂಲಗಳ ಮಿತಬಳಕೆಯಿಂದ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದೆ ಎಂದು ಬಿ.ಎಂ.ಎಂ.ಇಸ್ವಾತ್ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಪ್ರಭು ಹೇಳಿದರು. ಅವರು ಶುಕ್ರವಾರ ಬಿ.ಎಂ.ಎಂ.ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಉದ್ದೇಶಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವ, ನಾವೆಲ್ಲರೂ ಅರಿಯಬೇಕಿದೆ.ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲವೂ ಆಹಾರ, ಗಾಳಿ, ನೀರು, ಇತರೆ ಅಗತ್ಯತೆಗಳು ಪರಿಸರವನ್ನು ಅವಲಂಭಿಸಿವೆ, ಆದರೆ ಮನುಷ್ಯ ಆಧುನಿಕತೆಯ ಘೀಳಿಗೆ ಬಿದ್ದು, ಸುಂದರ ಪರಿಸರವನ್ನು ನಾಶಪಡಿಸಬಾರದು. ಏರುತ್ತಿರುವ ಜಾಗತಿಕ ತಾಪಮಾನ ಪರಿಸರದ ಮೇಲೆ ತೀವ್ರ ಪ್ರಭಾವ ಬೀರುವುದರಿಂದ ಹವಾಮಾನ ವೈಪರಿತ್ಯಗಳುಂಟಾಗುವ ಸಾದ್ಯತೆಗಳಿವೆ. ಪ್ರತಿ ವರ್ಷ ಜೂನ್ 5ರಂದು ವಿವಿಧ ಧೈಯವಾಕ್ಯಗಳೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.ಇದು ನಿಜಕ್ಕೂ ಅಭಿನಂದನೀಯ ಎಂದರು.

news_1780765433_3_631.webp

 

ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯರಲ್ಲೂ ಜಾಗೃತಿ ಮೂಡಿಸುವುದಾಗಿದೆ ದಿನಾಚರಣೆ ಅಂಗವಾಗಿ ಎಲ್ಲಡೆಯು ಗಿಡ-ಮರಗಳನ್ನು ನೆಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಘ-ಸಂಸ್ಥೆಗಳು, ಸಮುದಾಯಗಳು, ಸರಕಾರಗಳು, ಯುವಕ-ಯುವತಿ ಮಂಡಳಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದ ಅವರು ಪರಿಸರ ರಕ್ಷಣೆಯನ್ನು ಸಕ್ರೀಯವಾಗಿ ಉತ್ತೇಜಿಸಲು ಹಾಗೂ ಆರೋಗ್ಯಕರ ಜೀವನ ನಮ್ಮದಾಗಲುನಾವೆಲ್ಲರೂ ಪರಿಸರ ರಕ್ಷಣೆಗೆ ಕೈಜೋಡಿಸಬೇಕೆಂದರು. ಪ್ರತಿ ವರ್ಷದಂತೆ ವರ್ಷವೂ ನಮ್ಮ ಬಿ.ಎಂ.ಎಂ.ಸಂಸ್ಥೆಯಲ್ಲಿ ಎಂಬತ್ತು ಸಾವಿರದಿಂದ ಒಂದು ಲಕ್ಷ ಸಸಿನೆಡುವ ಗುರಿ ಹೊಂದಲಾಗಿದೆ ಎಂದರು.

ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳಾದ ವಿಮಲ್ ಸಿಂಗ್, ಪ್ರಧಾನ ಹಣಕಾಸು ಅಧಿಕಾರಿ ವಿ.ವಿ.ವಿ.ರಾಜು, ಬಿ.ಎಂ.ಎಂ.ಸಂಸ್ಥೆಯ ಉಪಾಧ್ಯಕ್ಷರಾದ ಮನೀಶ್.ಡಿ.ವರ್ಣೇಕರ್ ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಜೇಂದ್ರ ಮುಂದ್ರಾ, ಸಂಸ್ಥೆಯ ನಿರ್ದೇಶಕರಾದ ಗಣೇಶ್ ಹೆಗಡೆ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಕಾಕನೂರು ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ