ನಗರದ ವಾರ್ಡ್ ಸಂಖ್ಯೆ 20ರ ಗಣೇಶ್ ಕಾಲೋನಿ ಹಾಗೂ ಹುಸೇನ್ ನಗರದಲ್ಲಿ 7.30 ಕೋಟಿ ರೂ.ಗಳ ಅನುದಾನದ ಅಡಿ ಮೂಲಭೂತ ಸೌಕರ್ಯ ಒದಗಿಸುವ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ವಾರ್ಡಿನ ಸದಸ್ಯ ಪೇರಂ ವಿವೇಕ್, ಮಾಜಿ ಮೇಯರ್ ನಾಗಮ್ಮ, ಸದಸ್ಯರಾದ ಕುಬೇರಾ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಹಾವಂಭಾವಿ ಲೋಕೇಶ್, ದುಬ್ಬರಾಜು, ರಘು, ಥಿಯೇಟರ್ ಶಿವು, ಗೌಸಿಯಾಬೀ, ಶ್ರೀನಿವಾಸ್ ರಾವ್ ಸೇರಿದಂತೆ ಹಲವರು ಹಾಜರಿದ್ದರು.

ಅದೇ ರೀತಿ ವಾರ್ಡ್ ಸಂಖ್ಯೆ 18ರ ವ್ಯಾಪ್ತಿಯ ರಾಘವೇಂದ್ರ ಕಾಲೋನಿ ಹಾಗೂ ಎಂ.ಜಿ. ಪೆಟ್ರೋಲ್ ಬಂಕ್ ಸಮೀಪ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ 8.90 ಕೋಟಿ ರೂ.ಗಳ ಮೂಲಭೂತ ಸೌಕರ್ಯ ಒದಗಿಸುವ ವಿವಿಧ ಕಾಮಗಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಮೇಯರ್ ಹಾಗೂ ವಾರ್ಡಿನ ಸದಸ್ಯ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಮುಖಂಡ ಬಿಸಲಹಳ್ಳಿ ಮಂಜು, ಆಟೋನಗರ ನಾಗರಾಜ, ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.