ಬಳ್ಳಾರಿ: ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಜನ್ಮ ದಿನದ ನಿಮಿತ್ತ `ಮನೆ ಮನೆಗೂ ಭರತ್ ಅಭಿಯಾನ' ದ ಭಾಗವಾಗಿ ಮಹಾ ನಗರ ಪಾಲಿಕೆಯ 11ನೇ ವಾರ್ಡಿನಲ್ಲಿ ಗುರುವಾರ ಕಿಚನ್ ಕಿಟ್ ವಿತರಿಸಿದರು.
11ನೇ ವಾರ್ಡಿನ ಸುಂಕ್ಲಮ್ಮ ದೇವಿ ದೇವಸ್ಥಾನದಿಂದ ಕಿಚನ್ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಮನೆ ಮನೆಗೂ ತೆರಳಿ ತಮ್ಮ ಜನ್ಮದಿನದ ಉಡುಗೊರೆಯಾಗಿ ಕಿಚನ್ ಕಿಟ್ ವಿತರಿಸಿದರು.
ಸ್ಥಳೀಯ ಮುಖಂಡರಾದ ಲೋಕೇಶ್, ಸೋಮಪ್ಪ, ಮಡಿವಾಳಪ್ಪ, ಪ್ರಭಂಜನ್, ಮಹೇಶ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಸುಬ್ಬರಾಯುಡು, ಚಾನಾಳ್ ಶೇಖರ್, ಥಿಯೇಟರ್ ಶಿವು, ಕಪ್ಪೆ ಶಿವು, ರಘು, ಭರತ್, ಪದ್ಮಾ, ಕವಿತಾ, ಗೌತಮ್, ಧರ್ಮಶ್ರೀ ಇನ್ನಿತರರು ಇದ್ದರು.
ಸ್ಥಳೀಯರು ಇದೇವೇಳೆ ತಮ್ಮ ಅಹವಾಲುಗಳೊಂದಿಗೆ ಹಲವು ದೂರುಗಳನ್ನು ಹೇಳಿಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ದೂರುಗಳನ್ನಾಧರಿಸಿ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಈ ಹಿಂದಿನ ದಿನವೂ ನಗರದ 23ನೇ ವಾರ್ಡಿನ ಆದ್ಯಂತ ಕಿಚನ್ ಕಿಟ್ ವಿತರಿಸುವ ಕಾರ್ಯ ಪೂರ್ಣಗೊಳಿಸಲಾಯಿತು.