ನಾಯಕನಹಟ್ಟಿ : ಅರಣ್ಯದಲ್ಲಿ ನೆಲೆಸಿರುವ ಅಭಯ ದೇವತೆ, ಶಕ್ತಿ ದೇವತೆ ಎನಿಸಿಕೊಂಡಿರುವ ಕಾವಲು ಚೌಡೇಶ್ವರಿದೇವಿ ದೇಗುಲದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಹೇಳಿದರು.
ಸಮೀಪದ ಹಿರೇಕೆರೆ ಕಾವಲಿನಲ್ಲಿ ಸೋಮವಾರದಿಂದ ಆರಂಭವಾದ ಜಾತ್ರೆಯ ಪ್ರಯುಕ್ತ ಚೌಡೇಶ್ವರಿದೇವಿ ದೇಗುಲಕ್ಕೆ ಭೇಟಿನೀಡಿ ಮಹಾಧ್ವಾರ ಗೋಪುರದ ಕಳಸಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಇದೇ ಮೊದಲಬಾರಿಗೆ ಅರಣ್ಯದಲ್ಲಿರುವ ಕಾವಲು ಚೌಡೇಶ್ವರಿದೇವಿ ದೇಗುಲಕ್ಕೆ ಬಂದಿದ್ದೇನೆ. ಈ ದೇಗುಲದ ಮಹಿಮೆಯ ಬಗ್ಗೆ ಮೊದಲೇ ತಿಳಿದಿತ್ತು. ತುಂಬಾ ಪ್ರಶಾಂತವಾದ ಸ್ಥಳದಲ್ಲಿ ದೇವಾಲಯ ಇರುವುದರಿಂದ ಮನಸ್ಸಿಗೆ ಮುದವನ್ನುಂಟು ಮಾಡುತ್ತದೆ. ನಾಳೆ ರಥೋತ್ಸವವಿದ್ದು, ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂದೇ ದೇಗುಲಕ್ಕೆ ಭೇಟಿನೀಡಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ದೇಗುಲವು ಅರಣ್ಯದಲ್ಲಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಅಗತ್ಯವಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ದೇಗುಲದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.
ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಮಾತನಾಡಿ, “ಕಾವಲು ಚೌಡೇಶ್ವರಿ ದೇವಿ ಮತ್ತು ದೇವಾಲಯದ ಬಗ್ಗೆ ಇರುವ ಐತಿಹ್ಯವನ್ನು ಸಚಿವರಿಗೆ ತಿಳಿಸಿದರು. ಹಾಗೂ ನಾಯಕನಹಟ್ಟಿ ಪಟ್ಟಣದಲ್ಲಿ ನಿರ್ಮಾಣದ ಹಂತದಲ್ಲಿರುವ ವಾಲ್ಮೀಕಿ ಭವನಕ್ಕೆ ಅಗತ್ಯವಾಗಿರುವ ಹೆಚ್ಚುವರಿ ಅನುದಾನವನ್ನು ಒದಗಿಸುವಂತೆ” ಮನವಿಪತ್ರ ಸಲ್ಲಿಸಿದರು. ಇದಕ್ಕೆ ಸ್ಪಂಧಿಸಿದ ಸಚಿವರು, ಕೂಡಲೇ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಯೋಜನಾ ವರದಿ ಸಿದ್ಧಪಡಿಸಲು ತಾಕೀತು ಮಾಡಿದರು.
ಇದೇವೇಳೆ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ, ಪೊಲೀಸ್‌ವೃತ್ತ ನಿರೀಕ್ಷಕ ಹನುಂತಪ್ಪ ಎಂ.ಶಿರೇಹಳ್ಳಿ, ಪಿಎಸ್‌ಐ ಜಿ.ಪಾಂಡುರಂಗ, ದೇಗುಲ ಕಾರ್ಯದರ್ಶಿ ಎಂ.ವೈ.ಟಿಸ್ವಾಮಿ, ಗ್ರಾಮಸ್ಥರಾದ ಹನುಮಣ್ಣ, ದೊಡ್ಡಬೋರಯ್ಯ, ತಿಪ್ಪೇಸ್ವಾಮಿ, ಪ್ರಕಾಶ್, ಟಿ.ಬಸಣ್ಣ, ಜಿ.ವೈ.ತಿಪ್ಪೇಸ್ವಾಮಿ, ಬೊಮ್ಮಲಿಂಗಪ್ಪ ಅವರು ಇದ್ದರು.