ಮಂಜುಳ ಶ್ರೀಕಾಂತ್‌ರವರೇ ನೀವು ಅಧ್ಯಕ್ಷರಾಗಿನಿಂದಲೂ ಎಷ್ಟು ಮೋಟಾರ್ ಪಂಪ್ ಖರೀದಿ ಮಾಡಿದ್ದೀರ? ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹಂತಣ್ಣ ಮಾಹಿತಿ ನೀಡಿ ಎಂದು ಪ್ರಶ್ನಿಸಿದರು.
ಅಧ್ಯಕ್ಷರಾದ ಮಂಜುಳ ಶ್ರೀಕಾಂತ್ ಮಾತನಾಡಿ ಕಳೆದ ವರ್ಷ ಭರ್ಜರಿ ಮಳೆಯಾಗಿದ್ದು ಚಿಕ್ಕಕೆರೆ, ದೊಡ್ಡಕೆರೆಯಲ್ಲಿ ನೀರು ತುಂಬಿ ಹರಿದಿದ್ದು ಬೋರ್‌ವೆಲ್‌ಗಳು ಮುಳಿಗಿ ಹೋಗಿದ್ದವು. ಶ್ರೀ ಗುರು ತಿಪ್ಪೇರದ್ರಸ್ವಾಮಿಯ ಬರುವಂತಹ ಭಕ್ತಾಧಿಗಳಿಗೆ ನೀರಿನ ಅಭಾವದಿಂದ ತೊಂದರೆಯಾಗಬಾರದೆಂದು ಸುಮಾರು 10 ಬೋರ್‌ವೆಲ್‌ಗಳನ್ನು ಕೊರೆಸಿ ಅದರಲ್ಲಿ 2 ಬೋರ್‌ವೆಲ್‌ಗಳು ಫೇಲ್ ಆಗಿ, 8 ಬೋರ್‌ವೆಲ್‌ಗಳು ಯಶಸ್ವಿಯಾಗಿವೆ, 7 ಹೊಸ ಮೋಟಾರ್, ಪಂಪ್ ಖರೀದಿಸಿ ಹಳೇ ಪೈಪ್, ಕೇಬಲ್ ಅಳವಡಿಸಿ ಈಗ ನೀರು ಸರಬರಾಜು ಮಾಡುತ್ತಿದ್ದೇವೆ. ಜಾತ್ರೆಯಲ್ಲಿ ನೀರಿಗಾಗಿ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಮಾಹಿತಿ ತಿಳಿಸಿದರು. ನಂತರ ಈ ಹಿಂದೆ ಅಧ್ಯಕ್ಷರಾಗಿದ್ದವರು ಪೌರಕಾರ್ಮಿಕರು ಸಿಬ್ಬಂದಿಯವರಿಗೆ 50 ಲಕ್ಷ ರೂಪಾಯಿ ಸಂಬಳ ಮಾಡಿರಲಿಲ್ಲ. ಈಗ ನಾವು ಕಂದಾಯ ವಸೂಲಿ ಮಾಡಿ ಪೌರ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಸಂಬಳ ಮಾಡಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್.ರವಿಕುಮಾರ್ ಮಾತನಾಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಎಲ್ಲಾ ಡಬ್ಬ ಅಂಗಡಿಗಳನ್ನು ತೆರೆವುಗೊಳಿಸಬೇಕೆಂದು ಪ್ರಸ್ತಾಪ ಇಟ್ಟರು. ಪಟ್ಟಣ ಪಂಚಾಯಿತಿ ಸದಸ್ಯ ಅಬಕಾರಿ ತಿಪ್ಪೇಶ್ ಮಾತನಾಡಿ ತೆರೆವುಗೊಳಿಸಿದರೆ ಎಲ್ಲವನ್ನೂ ತೆರೆವುಗೊಳಿಸಿ ಎಂದರು. ಕೆಲವು ಸದಸ್ಯರುಗಳು ಅರ್ಧ ತೆರೆವುಗೊಳಿಸಿ ಅರ್ಧ ಇರಬೇಕು ಎಂದರು.

ಅಬಕಾರಿ ತಿಪ್ಪೇಶ್‌ರವರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳನ್ನು ಅವಾಚ್ಯಾ ಶಬ್ದಗಳಿಂದ ನಿಂದಿಸಿ ಏಕವಚನದಲ್ಲಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುತ್ತವೆ, ರಾತ್ರಿ ಹೊತ್ತಿನಲ್ಲಿ ಉರಿಯುವುದಿಲ್ಲ ಇದರ ಬಗ್ಗೆ ಮುಂದಿನ ಸಭೆಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಭಾಗವಹಿಸುವಂತೆ ತಿಳಿಸಿ. ಪಟ್ಟಣ ಪಂಚಾಯಿತಿ ವತಿಯಿಂದ ತಿಂಗಳಿಗೆ ಸುಮಾರು ಬೆಸ್ಕಾಂ ಇಲಾಖೆಗೆ 9 ಲಕ್ಷ ರೂಪಾಯಿತ ಹಣ ಸಂದಾಯ ಮಾಡುತ್ತೇವೆ. ಆದರೆ ಬೆಸ್ಕಾಂ ಇಲಾಖೆಯವರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ವಾದಿಸಿದರು. 1ನೇ ವಾರ್ಡಿನ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಆದ್ದರಿಂದ ಅಂಗನವಾಡಿ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ತಿಳಿಸಿದರು. ಸದಸ್ಯರಾದ ಸರ್ವಮಂಗಳ ಉಮಾಪತಿ ನಾಯಕನಹಟ್ಟಿ ಪ.ಪಂ.ಯಲ್ಲಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಮಂಜೂರು ಮಾಡಲು ಪ್ರಸ್ತಾಪಿಸಿದರು. ಇದಕ್ಕೆಲ್ಲ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪ.ಪಂ. ಸದಸ್ಯೆ ವಿನುತ ಅವರು ಮಾತನಾಡಿ ವಾರ್ಡ್ ನಂ.13ರಲ್ಲಿ ಬರುವ ಅಂಗನವಾಡಿ ಕಟ್ಟಡ ಪುನರ್‌ನಿರ್ಮಾಣ ಮಾಡಲು ಸಮಾಜ ಕಲ್ಯಾಣ ಇಲಾಖೆಗೆ ಶಿಫಾರಸ್ಸು ಮಾಡಲು ಸೂಚಿಸಿದರು. ಪ.ಪಂ. ಸದಸ್ಯೆ ಈರಮ್ಮ ಮಾತನಾಡಿ 06ನೆವಾರ್ಡಿನಲ್ಲಿ ಬರುವ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಪಾದಗಟ್ಟೆ ಹತ್ತಿರ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಿನಿ ಟ್ಯಾಂಕ್ ನಿರ್ಮಾಣ ಮಾಡಬೇಕು ಹಾಗೂ ಸರ್ಕಾರಿ ಆಸ್ಪತ್ರೆಯ ಮುಂಭಾಗ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕೆಂದು ಪ್ರಸ್ತಾಪಿಸಿದರು. ಇದಕ್ಕೆಲ್ಲ ಸರ್ವಸದಸ್ಯರುಗಳು ಒಪ್ಪಿಗೆ ಸೂಚಿಸಲಾಯಿತು.
ಪ.ಪಂ.ಸದಸ್ಯ ಸೈಯದ್ ಅನ್ವರ್ ಮಾತನಾಡಿ ಸರ್ಕಾರಿ ಮಾದರಿ ಶಾಲೆಯ ಮುಂಭಾಗದಲ್ಲಿರುವ ಪಟ್ಟಣ ಪಂಚಾಯಿತಿಯ ಮಳಿಗೆಗಳು ಶಿಥಿಲಗೊಂಡಿದ್ದು ಇವುಗಳನ್ನು ತೆರೆವುಗೊಳಿಸುವ ಬಗ್ಗೆ 2021-25ನೇ ಸಾಲಿನ ವರೆಗೂ ಕಂದಾಯ ವಸೂಲಿಯಾಗಿರುವುದರ ಬಗ್ಗೆ ಚರ್ಚಿಸಿದರು. ಹಾಗೂ ಪಟ್ಟಣ ಪಂಚಾಯಿತಿ ಕಛೇರಿಗೆ ಸಂಬಸಿದ ಬ್ಯಾಂಕ್ ಖಾತೆಗಳು ಎಷ್ಟಿವೆ ಎಂದು ಅಧಿಕಾರಿಗಳನ್ನು ಕೇಳಿದರು ಅದಕ್ಕೆ ಅಧಿಕಾರಿಗಳು ಸಮಂದ ಪಟ್ಟ ಸಿಬ್ಬಂದಿಗಳು ದಾಖಲೆಗಳನ್ನು ತೋರಿಸಿದರು.
ಪ.ಪಂ. ಸದಸ್ಯ ಸುನಿತಮುದಿಯಪ್ಪ ಮಾತನಾಡಿ ವಾರ್ಡ್ ನಂ.05ರಲ್ಲಿ ಬರುವ ಮುಕ್ಕಣ್ಣನ ಮನೆಯಿಂದ ಮಲ್ಲಿಮೇಷ್ಟು ಮನೆಯವರೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣದ ಬಗ್ಗೆ ಚರ್ಚೆ ಮಾಡಿದರು. ಪ.ಪಂ. ಸದಸ್ಯರಾದ ಎನ್.ಮಹಂತಣ್ಣ ಮಾತನಾಡಿ ಪಾರ್ಕ್ ನಿರ್ಮಾಣದ ಬಗ್ಗೆ ಮಹಿಳಾ ಸದಸ್ಯರ ಬಗ್ಗೆ ತೆಗೆದುಕೊಂಡಿರುವ ಬಗ್ಗೆ ಚರ್ಚೆ ಮಾಡಿದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು 3 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಸೇರಿಸಿಕೊಂಡಿದ್ದೀರ ಎಂದು ಪಟ್ಟಣದಲ್ಲೆಲ್ಲ ಪ್ರಚಾರ ಹರಡುತ್ತಿದೆ. ಇದರ ಬಗ್ಗೆ ಏನು ಉತ್ತರ ಕೊಡುತ್ತೀರ ಹೇಳಿ ಮುಖ್ಯಅಧಿಕಾರಿ ಶ್ರೀನಿವಾಸ್‌ರವರೇ ನಮ್ಮ ಸದಸ್ಯರ ಗಮನಕ್ಕೆ ತರದೇ ಹೇಗೆ ಕೆಲಸಕ್ಕೆ ಸೇರಿಸಿಕೊಂಡಿದ್ದೀರಾ? ನಿಮಗೆ ಅಧಿಕಾರ ಕೊಟ್ಟವರು ಯಾರು? ನೀವು ಇಷ್ಟ ಬಂದಂತೆ ಕೆಲಸ ಮಾಡುತ್ತೀದ್ದೀರ? ಲ್ಯಾಪ್‌ಟಾಪ್, ಸಿ.ಸಿ.ಕ್ಯಾಮೆರಾಕ್ಕೆ 3 ಲಕ್ಷದ 47 ಸಾವಿರ ಹೇಗೆ ಖರ್ಚು ಮಾಡಿದ್ದೀರ? ಹೇಳಿ 3 ಮಹಿಳಾ ಸದಸ್ಯರನ್ನು ವಜಾಮಾಡಿ ಬೇರೆಯವರನ್ನು ನೇಮಕಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ತೀರ್ಮಾನ ಕೈಗೊಳ್ಳಿ ಎಂದು ಮಾತನಾಡುವ ಭರಾಟೆಯಲ್ಲಿ ಬಕೆಟ್ ಹಿಡಿಯುವವರು ಅಧ್ಯಕ್ಷರಾಗುತ್ತಾರೆ ಎನ್ನುತ್ತಿದ್ದಂತೆ ಕೋಪಗೊಂಡ 9ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್.ರವಿಕುಮಾರ್ ಮತ್ತು ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಎನ್.ಮಹಂತಣ್ಣನ ವಿರುದ್ಧ ಏಕವಚನದಲ್ಲಿ ಗುಡುಗಿದರು. ನೀನು ಕೂಡ ಬಕೆಟ್ ಹಿಡಿದು ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರುಗಳಿಂದ ಅಧ್ಯಕ್ಷನಾಗಿದ್ದಿಯ, ನೀನು ಹೇಳುವುದು ನಮಗೆ ಅವಶ್ಯಕತೆ ಇಲ್ಲ ಎಂದಾಗ ಸಭೆಯಲ್ಲಿ ಗದ್ದಲವಾಯಿತು.
ಪ.ಪಂ. ಸದಸ್ಯೆ ಮಹೇಶ್ವರಿ ಅವರು ಮಾತನಾಡಿ ಜಾಲಿ ಗಿಡಗಳನ್ನು ತೆಗೆಸಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗೂ ಆಂಜನೇಯ ದೇವಸ್ಥಾನದಿಂದ ಹಳ್ಳಕ್ಕೆ ಚರಂಡಿ ನಿರ್ಮಾಣ ಪೂರ್ಣಗೊಳಿಸುವುದರ ಬಗ್ಗೆ ಚರ್ಚಿಸಿದರು. ಮತ್ತು 3ನೇ ವಾರ್ಡ್ನಲ್ಲಿ 4 ದಿನಗಳಿಂದ ವಿದ್ಯುತ್ ಇಲ್ಲ, ಕುಡಿಯುವ ನೀರಿನ ಅಭಾವ ಉದ್ಬವಿಸಿದೆ ಮೊದಲು ಇದನ್ನು ಸರಿ ಪಡಿಸಿ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಟಿ ಮಂಜುಳ ಶ್ರೀಕಾಂತ್. ಉಪಾಧ್ಯಕ್ಷರಾದ ಬೋಸಮ್ಮ ಮಂಜುನಾಥ, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಕೆಪಿ ತಿಪ್ಪೇಸ್ವಾಮಿ, ಸದಸ್ಯರುಗಳಾದ ಎಂ ಟಿ ಮಂಜುನಾಥ್, ಟಿ ಮಹೇಶ್ವರಿ, ಬಿ ಗುರು ಶಾಂತಮ್ಮ , ಡಿ ಸುನಿತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಜೆಆರ್ ರವಿಕುಮಾರ್, ಪಾಪಮ್ಮ, ಅಬಕಾರಿ ತಿಪ್ಪೇಸ್ವಾಮಿ, ವಿನುತಾ, ಎನ್ ಮಹಾಂತಣ್ಣ, ಪಿ ಓಬಯ್ಯ ದಾಸ. ನೌಕರರಾದ ತಾಂತ್ರಿಕ ಅಭಿಯಾಂತರರು, ಮುಖ್ಯಾಧಿಕಾರಿ ಶ್ರೀನಿವಾಸ್, ಇಂಜಿನಿಯರ್ ಶ್ರೀನಿವಾಸ್, ಟಿ.ತಿಪ್ಪೇಸ್ವಾಮಿ. ಟಿ.ಸಂದೀಪ್. ಅಕೌಂಟೆಂಟ್ ಮಧು, ಲತಮ್ಮ, ರತ್ನಮ್ಮ, ಪ.ಪಂ. ಸರ್ವಸದಸ್ಯರುಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.