ಕಳೆದ ಆ. 3 ರಂದು ನಗರದ ನಡುರಸ್ತೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅಮಾನುಷವಾಗಿ ಕೊಲೆಯಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಮನುಷ್ಯತ್ವದ ಹಾದಿಯಲ್ಲಿ ಮಹರ್ಷಿ ವಾಲ್ಮೀಕಿ, ಬುದ್ಧ-ಬಸವ-ಅಂಬೇಡ್ಕರ್ ಆದರ್ಶದಲ್ಲಿ ಬದುಕಬೇಕು ಎಂಬ ನಮ್ಮ ಆಶಯಕ್ಕೆ ವಿರುದ್ಧವಾದ ಸಮಾಜಘಾತುಕ ಶಕ್ತಿಗಳು ತಮ್ಮ ಲಾಭಕ್ಕಾಗಿ ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿವೆ,

ಸರಕಾರಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಟ್ಟಾಗ ಮಾತ್ರವೇ ಇಂತಹ ಕೃತ್ಯಗಳು ನಿಲ್ಲಲಿವೆ. ಈ ಪ್ರಕರಣದಲ್ಲಿ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಇದರ ತನಿಖೆ ಕೈಗೊಂಡು ಕೊಲೆಯಲ್ಲಿ ಬಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅಮಾನುಷವಾಗಿ ಕೊಲೆಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಆತನ ಕುಟುಂಬಕ್ಕೆ ಆಸರೆ ಮತ್ತು ನ್ಯಾಯ ಕೊಡಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾದಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನುಷ್ಯತ್ವದ ಹಾದಿಯಲ್ಲಿ ಮಹರ್ಷಿ ವಾಲ್ಮೀಕಿ, ಬುದ್ಧ-ಬಸವ-ಅಂಬೇಡ್ಕರ್ ಆದರ್ಶದಲ್ಲಿ ಬದುಕಬೇಕು ಎಂಬ ನಮ್ಮ ಆಶಯಕ್ಕೆ ವಿರುದ್ಧವಾದ ಸಮಾಜಘಾತುಕ ಶಕ್ತಿಗಳು ತಮ್ಮ ಲಾಭಕ್ಕಾಗಿ ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿವೆ, ಸರಕಾರಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಸರಿಯಾದ ಶಿಕ್ಷೆ ಕೊಟ್ಟಾಗ ಮಾತ್ರವೇ ಇಂತಹ ಕುಕೃತ್ಯಗಳು ನಿಲ್ಲಲಿವೆ. ಈ ಪ್ರಕರಣದಲ್ಲಿ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ತತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಇದರ ತನಿಖೆಯಾಗಿ ಕೊಲೆಯಲ್ಲಿ ಬಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದರು.
ಜಿಲ್ಲೆಯಲ್ಲಿ ಸಾಮರಸ್ಯ ಕೆಡಬಾರದು ಎಂಬ ಉದ್ದೇಶದಿಂದ ನಮ್ಮ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಪೂಜ್ಯ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಸಲಹೆಯಂತೆ ಶಾಂತಿಯಿಂದ ಪ್ರತಿಭಟನೆ ಮಾಡಿದ್ದು, ರಾಜ್ಯದಲ್ಲಿ 72 ಪಾಳೆಪಟ್ಟುಗಳನ್ನು ಕಟ್ಟಿ ಆಳಿದ ವಾಲ್ಮೀಕಿ ನಾಯಕ ಸಮಾಜ ಶೌರ್ಯಕ್ಕೆ ಹೆಸರಾದವರು, ಅದೇ ರೀತಿ ವಾಲ್ಮೀಕಿ ಋಷಿಗಳು ರಾಮಾಯಣ ಬರೆದು ವಿಶ್ವಕ್ಕೆ ದೊಡ್ಡ ಸಾಹಿತ್ಯ ನೀಡಿದ ಸಮುದಾಯ. ಪರನಾರಿ ಸಹೋದರ ಗಂಡುಗಲಿ ಕುಮಾರರಾಮ ಮತ್ತು ಹಕ್ಕ ಬುಕ್ಕರ ಶಕ್ತಿ ಈಗಲೂ ಸಮುದಾಯದ ರಕ್ತದಲ್ಲಿ ಹರಿಯುತ್ತಿದೆ. ಆದರೆ ನಾವು ಸೌಹಾರ್ಧತೆಯನ್ನು ಬಯಸಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಕಾನೂನು ಪರಿಪಾಲನೆ ಮಾಡಬೇಕು ಎಂದು ಅತ್ಯಂತ ತಾಳ್ಮೆ ತೆಗೆದುಕೊಂಡಿದ್ದೇವೆ, ಇದನ್ನು ಮನಗಂಡು ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ ಎಂದರು.

ಆಗಸ್ಟ್ ಅಂತ್ಯದೊಳಗೆ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು, ಸರಿಯಾದ ಸಾಕ್ಷಿಗಳನ್ನು ಉಳಿಸಿಕೊಂಡು ಗಲ್ಲು ಶಿಕ್ಷೆ ಕೊಡಿಸಿ, ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸುವ ಜೊತೆಗೆ ಉಳಿದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಪೂಜ್ಯ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ರಾಜ್ಯದಾದ್ಯಂತ ತೀವ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯಗಳು:
- ಹತ್ಯೆಯಾದ ಗವಿಸಿದ್ಧಪ್ಪ ನಾಯಕ ಕುಟುಂಬಕ್ಕೆ ಕೂಡಲೇ ಒಂದು ಖಾಯಂ ಸರಕಾರಿ ನೌಕರಿ ಹಾಗೂ ಸೂಕ್ತ ಪರಿಹಾರ ಕೊಡಬೇಕು.
- ಕುಟುಂಬಕ್ಕೆ ಕೇಸ್ ಮುಕ್ತಾಯವಾಗುವತನಕ ಸೂಕ್ತ ಭದ್ರತೆ ಕೊಡಬೇಕು.
- ಕೃತ್ಯದಲ್ಲಿ ಭಾಗಿಯಾದ ಉಳಿದ ಎಲ್ಲರನ್ನು ಬಂಧಿಸಿ, ಶಿಕ್ಷಿಸಬೇಕು, ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಕ್ರಮವಹಿಸಬೇಕು.
- ನಿಷ್ಪಕ್ಷಪಾತವಾದ ಉನ್ನತಮಟ್ಟದ ತನಿಖೆ ನಡೆಸಿ, ವಿಶೇಷ ನ್ಯಾಯಾಲಯದಲ್ಲಿ ತುರ್ತಾಗಿ ಇತ್ಯರ್ಥಪಡಿಸಬೇಕು.
- ವಾಲ್ಮೀಕಿ ನಾಯಕ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಕ್ಕೆ ಕೊನೆ ಹಾಡಬೇಕು, ಇಂತಹ ವ್ಯಾಜ್ಯಗಳು ಬಂದಲ್ಲಿ ತುರ್ತು ಕ್ರಮ ಜರುಗಿಸಬೇಕು.
- ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಘಾತುಕ ಕಾರ್ಯಗಳು ಹೆಚ್ಚಳವಾಗುತ್ತಿದ್ದು, ಗಾಂಜಾ, ಜೂಜು, ವ್ಹೀಲಿಂಗ್, ಸೈಬರ್ ಅಪರಾಧಗಳನ್ನು ನಿರ್ಲಕ್ಷ್ಯ ತೋರದೆ ತಡೆಯುವ ಕೆಲಸ ಮಾಡಬೇಕು.

ಪ್ರತಿಭಟನೆಯಲ್ಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ, ರಾಜುಗೌಡ ನಾಯಕ, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರ, ಮುಖಂಡರಾದ ಸಿವಿ ಚಂದ್ರಶೇಖರ, ಮಹಾಂತೇಶ ಪಾಟೀಲ ಮೈನಳ್ಳಿ, ಡಾ.ಬಸವರಾಜ ಕ್ಯಾವಟರ್, ಶರಣು ತಳ್ಳಿಕೇರಿ, ಗಣೇಶ ಹೊರತಟ್ನಾಳ, ಮಂಜುನಾಥ್ ಗೊಂಡಬಾಳ, ಜ್ಯೋತಿ ಗೊಂಡಬಾಳ, ಮಲ್ಲು ಪೂಜಾರ್ , ಪರಶುರಾಮ್ ಕೆರೆಹಳ್ಳಿ,ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಫೆಡರೇಶನ್ ಜಿಲ್ಲಾ ಅಧ್ಯಕ್ಷ ತುಕಾರಾಂ ಪಾತ್ರೋಟಿ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಕೆ.ಎನ್. ಪಾಟೀಲ್, ಸುರೇಶ್ ದೊನ್ನಿ, ಶರಣಪ್ಪ ನಾಯಕ್, ಪದಾಧಿಕಾರಿಗಳು, ಸಮುದಾಯದ ಸಾವಿರಾರು ಮುಖಂಡರು ಹಾಗೂ ಗವಿಸಿದ್ದಪ್ಪ ನಾಯಕನ ಕುಟುಂಬದವರು ಭಾಗವಹಿಸಿದ್ದರು.