LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮರಿಯಮ್ಮನಹಳ್ಳಿ ನಾಡಿಗೆ ಹೆಸರಾಂತ ಕಲಾವಿದರನ್ನುಕೊಟ್ಟಿದೆ : ಡಾ. ಸೋಮೇಶ್ವರ

ಮರಿಯಮ್ಮನಹಳ್ಳಿ : ಮರಿಯಮ್ಮನಹಳ್ಳಿಯು ಕಲಾವಿದರ ತವರೂರಾಗಿದ್ದು, ಹೆಸರಾಂತ ಕಲಾವಿದರನ್ನು ನಾಡಿಗೆ ಕೊಟ್ಟಿರುವಂತಹ ಕೀರ್ತಿ ನಮ್ಮ ಮರಿಯಮ್ಮನಹಳ್ಳಿಗೆ ಸಲ್ಲುತ್ತದೆ ಎಂದು ಪಟ್ಟಣದ ವೈದ್ಯರಾದ ಜಿ.ಎಂ.ಸೋಮೇಶ್ವರ ರವರು ಹೇಳಿದರು.

ಅವರು ಪಟ್ಟಣದ ದುರ್ಗಾದಾಸ ರಂಗ ಮಂದರದಲ್ಲಿ ಮರಿಯಮ್ಮನಹಳ್ಳಿಯ ಸೃಷ್ಟಿ ಕಲಾ ಬಳಗ, ಯಜಮಾನ್ ಎಂಟರ್‌ಪ್ರೈಸಸ್ ಹನುಮನಹಳ್ಳಿ ಹಾಗೂ ಮರಿಯಮ್ಮನಹಳ್ಳಿಯ ಕಲಾಪೋಷಕರ ಸಹಯೋಗದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆ, ಲಕ್ಷ್ಮಿನಾರಾಯಣ ಆಂಜನೇಯ ಸ್ವಾಮಿ ಸ್ವಾಮಿ ಜೋಡಿ ರಥೋತ್ಸವದ ಅಂಗವಾಗಿ ಯಜಮಾನ್ ಕಲಾಶ್ರೀ ಪ್ರಶಸ್ತಿ ಪ್ರದಾನ, ಸ್ಥಳೀಯ ರಂಗ ಕಲಾವಿದರಿಂದ ರಂಗಗೀತೆಗಳ ಗೀತಗಾಯನ ಮತ್ತು ಕಿವುಡ ಮಾಡಿದ ಕಿತಾಪತಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲೆ ಕೇವಲ ಮನೋರಂಜನೆಯಾಗಿ ಉಳಿಯದೇ, ವ್ಯಕ್ತಿಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಎಲ್ಲಾರೀತಿ ವಿಕಸನಕ್ಕೆ ಸಹಕಾರಿಯಾಗಿದೆ. ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಡೆಗೊಂಡ ನಾರಾಯಣದೇವರ ಕೆರೆಯಿಂದ ರಂಗ ಕಲೆಯು ಬಳುವಳಿಯಾಗಿ ಬಂದಿದ್ದು ಇಲ್ಲಿನ ಕಲಾವಿದರು ಇಂದಿಗೂ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ನಂತರ ಅಧ್ಯಕ್ಷತೆ ವಹಿಸಿದ್ದ ಸೃಷ್ಟಿ ಕಲಾಬಳಗದ ಅಧ್ಯಕ್ಷ ಕುರಿ ಶಿವಮೂರ್ತಿ ರವರು ಮಾತನಾಡಿ, ಈ ಬಾರಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ನಮ್ಮ ಪೂರ್ವಜರಾದ ಯಜಮಾನ್ ಕುರಿ ಸೋಮಪ್ಪ ಮತ್ತು ನಿಂಗಮ್ಮ ಅವರ ಹೆಸರಿನಲ್ಲಿ ಯಜಮಾನ್ ಕಲಾಶ್ರೀ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಿ ಪ್ರಥಮ ಬಾರಿಗೆ ಯುವ ರಂಗಕಲಾವಿದೆ ಲಕ್ಕಿಮರದ ಶಾರದ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದೇ ರೀತಿ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುವದೆಂದರು.

 



ಈ ಸಂದರ್ಭದಲ್ಲಿ . ಡಾ.ಹೆಚ್.ಎಂ.ಚಂದ್ರಶೇಖರ ಶಾಸ್ತ್ರೀ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ. ನಿವೃತ್ತಿ  ಮುಖ್ಯಶಿಕ್ಷಕ ಬಿ.ಎಂ.ಎಸ್.ಮೃತ್ಯುಂಜಯ, ಲಲಿತ ಕಲಾರಂಗದ ಅಧ್ಯಕ್ಷ ಹೆಚ್. ಮಂಜುನಾಥ, ಯುವಮುಖಂಡ ಶ್ರೀಕಾಂತ ನಾಯ್ಕ ಇತರರಿದ್ದರು.

 

ಉಪಾಧ್ಯಕ್ಷ ಸಿ.ಪ್ರಕಾಶ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಶಿಕ್ಷಕ ಕೆ.ನಾಗರಾಜ ಅವರು ಕಾರ್ಯಕ್ರಮ ನಿರೂಪಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST