LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೋಟಲ್ ಉದ್ಯಮದಲ್ಲಿಯ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ

ಬಳ್ಳಾರಿ : ಹೋಟಲ್ ಉದ್ಯಮದಲ್ಲಿರುವ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ರಾಜ್ಯ ಹೋಟೆಲ್ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಹೋಟೆಲ್ ಸಂಘದ ಸಹಯೋಗದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಿಟೋರಿಯಂನಲ್ಲಿ ಶನಿವಾರ ನಡೆದ `ಜಿಲ್ಲಾ ಸಮನ್ವಯ ಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಆಸಕ್ತಿ ಇರುವವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಳ್ಳಾರಿಯಲ್ಲಿಯ ತಮ್ಮ ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಮೆಲುಕು ಹಾಕಿದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ನಾನು, ಬಳ್ಳಾರಿಯಲ್ಲಿ ಕೇವಲ ಹೋಟಲ್ ಉದ್ಯಮಿ ಆಗಿರಲಿಲ್ಲ. ಇಲ್ಲಿಯ ನೆಲ, ಜಲ, ನುಡಿ – ಜನರ ಜೊತೆಯಲ್ಲಿ ಬೆರತು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು, ನನ್ನ ಕುಟುಂಬ ಬಳ್ಳಾರಿಯನ್ನು ಸದಾಕಾಲ ಸ್ಮರಿಸುತ್ತೇವೆ ಎಂದರು.


ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ, ಕರ್ನಾಟಕದಲ್ಲಿ ಹೋಟಲ್ ಉದ್ಯಮದ ಜೊತೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗಕ್ಕೆ ಬಳ್ಳಾರಿಯಿಂದ ಶ್ರೀಕಾರ ಹಾಕಿರುವುದು ಅತ್ಯುತ್ತಮವಾದ ಬೆಳವಣಿಗೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಹೋಟಲ್ ಉದ್ಯಮಕ್ಕೆ ಅತ್ಯುತ್ತಮವಾದ ಅವಕಾಶಗಳಿವೆ ಎಂದರು.

ಈ ಭಾಗದ ಸಂಸ್ಕೃತಿ, ಇತಿಹಾಸ, ಆತಿಥ್ಯ ಮತ್ತು ವಾಣಿಜ್ಯೋದ್ಯಮ – ಕೈಗಾರಿಕೆಗಳನ್ನು ಬೆಳೆಸಲು ಹೋಟಲ್ ಉದ್ಯಮ ಪೂರಕವಾಗಿದೆ. ಹೋಟಲ್ ಸೇರಿ ನವ ಮತ್ತು ಯುವ ಉದ್ಯಮಿಗಳ ಪ್ರೋತ್ಸಾಹಕ್ಕೆ ಅಗತ್ಯವಾಗಿರುವ ಮಾರ್ಗದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು - ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಲು ಶೀಘ್ರದಲ್ಲೇ `ಚೇಂಬರ್ ಇಂಕ್ಯುಬೇಷನ್ ಸೆಂಟರ್’ ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.


ಅಬಕಾರಿ ಇಲಾಖೆಯ ಆಯುಕ್ತ ಮಂಜುನಾಥ್ ಮತ್ತು ಜಿಎಸ್‌ಟಿ ಅಧಿಕಾರಿ ಜಿ. ವಿಶ್ವನಾಥ್ ಇನ್ನಿತರರು, ಹೋಟಲ್ ಉದ್ಯಮ ಹಾಗೂ ತೆರಿಗೆ ಇನ್ನಿತರೆಗಳ ಕುರಿತು ಮಾತನಾಡಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಎಸ್. ತಿಪ್ಪೇಸ್ವಾಮಿ ಅವರು ಪ್ರವಾಸೋದ್ಯಮ ಮತ್ತು ಹೋಟಲ್ ಉದ್ಯಮದ ಅವಕಾಶಗಳ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯ ಹೋಟಲ್ ಸಂಘದ ವಿಶ್ವನಾಥ ಶೆಟ್ಟಿ ಅವರು ಸ್ವಾಗತ ಕೋರಿದರು. ರೂಪಾ ರಾಘವೇಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ರಾಜ್ಯ ಹೋಟಲ್‌ಗಳ ಸಂಘದ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ, ಕರ್ನಾಟಕ ರಾಜ್ಯ ಹೋಟಲ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎ. ಮಧುಸೂಧನ್, ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ಬಳ್ಳಾರಿ ಜಿಲ್ಲಾ ಗೌರವ ಕಾರ್ಯದರ್ಶಿ ವಿಕ್ರಂ ಪೋಲಾ ಕರ್ನಾಟಕ ರಾಜ್ಯ ಹೋಟಲ್ ಸಂಘದ ಗೌರವ ಕಾರ್ಯದರ್ಶಿಗಳಾದ ಎಂ.ವಿ. ರಾಘವೇಂದ್ರ ಆರ್ ವೇದಿಕೆಯಲ್ಲಿದ್ದರು.



ಈ ಸಂದರ್ಭದಲ್ಲಿ ಸಂಸ್ಥೆಯ ಉಪಾದ್ಯಕ್ಷರಗಳಾದ, ಎಸ್.ದೊಡ್ಡನಗೌಡ, ಸೊಂತಗಿರಿಧರ ಗೌರವ ಕಾರ್ಯದರ್ಶಿಗಳಾದ, ಕೆ.ಸಿ.ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ, ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಹೋಟಲ್ ಸಂಘದ ಸದಸ್ಯರ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST