ಸಮೀಪದ ಹಾಯ್ಕಲ್ ಗ್ರಾಮದಲ್ಲಿ 2ನೇ ಬಾರಿಗೆ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಾಲ್ಮೀಕಿ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನ ಹರಿಸಬೇಕೆಂದು ತಿಳಿಸಿದರು. ಮಹರ್ಷಿ ವಾಲ್ಮೀಕಿ ಒಬ್ಬ ಮಹಾನ್ ಆದಿಕವಿ ರಾಮಾಯಣ ಮೂಲಕ ರಾಮನನ್ನು ಸೃಷ್ಠಿಸಿದ್ದು ಇದೆ ಕವಿ ಯಾವುದೇ ಒಂದು ಜಾತಿ ಧರ್ಮದ ಅಥವಾ ಒಂದು ಸಮುದಾಯಕ್ಕೆ ಸಿಮೀತವಲ್ಲ, ಅವರು ಇಡೀ ಪ್ರಪಂಚಕ್ಕೆ ಆದಿಕವಿ ಎಂದರು. ವಾಲ್ಮೀಕಿ ಅವರ ತತ್ವ ಆದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಇಡೀ ಪ್ರಪಂಚವೇ ಕೊಂಡಾಡುತ್ತಿದೆ. ಇವರ ಇತಿಹಾಸದ ಬಗ್ಗೆ ಎಲ್ಲಾರು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರುಗಳಿಗೆ ವಾಲ್ಮೀಕಿ ಜಯಂತಿ ಶುಭಾಶಯಗಳನ್ನು ಕೋರಿದರು ಮತ್ತು ಎಲ್ಲಾ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕೆಂದು ಮನವಿ ಮಾಡಿಕೊಂಡರು.
ನಿವೃತ್ತ ಶಿಕ್ಷಕರಾದ ಪಾಲಯ್ಯರವರು ಮಾತನಾಡಿ ವಾಲ್ಮೀಕಿ ಎಂದರೆ ಮೊದಲನೆಯದಾಗಿ ಇಡೀ ನಮ್ಮ ಪ್ರಪಂಚದಲ್ಲಿರುವ ಹಿಂದು ಧರ್ಮವನ್ನು ಎತ್ತಿಕೊಟ್ಟಂತಹ ದೊಡ್ಡ ಕೆಲಸ ಮಾಡಿದ್ದಾರೆ. ರಾಮಾಯಣ ಮಹಾಕಾವ್ಯವನ್ನು ಬರೆದಿದ್ದಾರೆ. ಅದಕ್ಕು ಮುಂಚೆ ಭಾರತದಲ್ಲಿ ಎರಡು ದೊಡ್ಡ ಗ್ರಂಥಗಳು ಎಂದರೆ ಮಹಭಾರತ, ರಾಮಾಯಣ ಎಂದರು. ಮಹರ್ಷಿ ವಾಲ್ಮೀಕಿ ಕೇವಲ ಒಂದು ಜಾತಿಗೆ ಸೇರಿದವರಲ್ಲ ಅವರು ವಿಶ್ವ ಮಾನವರು. ವಾಲ್ಮೀಕಿ ಸಮುದಾಯದವರು ಯಾರಿಗೂ ಕಡಿಮೆಯಿಲ್ಲ ವಿದ್ಯೆ, ಬುದ್ಧಿ, ಶಕ್ತಿ, ಸಹಾಸದಲ್ಲಿ ಯಾವುದರಲ್ಲೂ ಕಡಿಮೆಯಿಲ್ಲ. ಬೇಡರಕಣ್ಣಪ್ಪನಂತ ಭಕ್ತ ಯಾರಿದ್ದಾರೆ. ದೇವರಿಗೆ ತನ್ನ ಕಣ್ಣು ಅರ್ಪಿಸಿ ದೇವರನ್ನೆ ತನ್ನ ಕಡೆಗೆ ಸೇಳೆದುಕೊಂಡ ನಮ್ಮ ವಾಲ್ಮೀಕಿ ಸಮುದಾಯದವರು ಅಂದರೆ ಸ್ವಾಭಿಮಾನಿಗಳು ಎಂದು ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕ್ಯಾಸಕಿ ಪಾಪಯ್ಯ, ನಿವೃತ್ತಿ ಮುಖ್ಯೋಪಾದ್ಯಾಯರಾದ ಪಾಲಯ್ಯ, ಮುಖ್ಯಶಿಕ್ಷಕರಾದ ಪಾಲಯ್ಯ, ಚನ್ನಕೇಶವ, ಮಾಜಿ ಬ್ಯಾಂಕ್ ವ್ಯವಸ್ಥಪಾಕರು ತಿಪ್ಪೇಸ್ವಾಮಿ, ಬೆಳಗಟ್ಟ ಗ್ರಾಮ ಪಂಚಾಯಿತಿ ಸದಸ್ಯ ಆಶೋಕ್‌ರೆಡ್ಡಿ, ಜಯಣ್ಣ, ಪಾಲಯ್ಯ, ವಾಲ್ಮೀಕಿ ಸಮಾಜದ ಯುವಕರು, ಶಿಕ್ಷಕರು, ಮಹಿಳೆಯರು ಪಾಲ್ಗೊಂಡಿದ್ದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಾಲ್ಮೀಕಿ ಸಮಾಜದ ಮುಖಂಡರುಗಳಿಗೂ ಸನ್ಮಾನಿಸಲಾಯಿತು.