LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ರಾಮಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬ

ನಾಯಕನಹಟ್ಟಿ : ಹಾಯ್ಕಲ್ ಗ್ರಾಮದಲ್ಲಿ ಆರಾಧ್ಯ ದೈವ ರಾಮಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಗಳು ನಡೆಯಿತು. ಬೆಳಿಗ್ಗೆ ಮತ್ತು ರಾತ್ರಿಯ ವೇಳೆಯಿಂದ ಮಹಿಳೆಯರು ಕುಟುಂಬದೊಂದಿಗೆ ತೆರಳಿ ದೇವರ ದರ್ಶನ ಪಡೆದರು.

ಭಕ್ತರು ಭಕ್ತಿ ಸಾಗರವೇ ಹರಿದು ಬಂದಿತ್ತು. ದೇವಾಲಯದಲ್ಲಿ ಮಕ್ಕಳಿಗೆ ಬೆಲ್ಲದ ತೂಕ ನೇರವೇರಿಸಿದರು. ಶಿವರಾತ್ರಿ ದಿನದ ಅಂಗವಾಗಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅನೇಕರು ಬೆಳಿಗ್ಗೆಯಿಂದಲೇ ಉಪವಾಸವಿರುತ್ತಾರೆ. ಮನೆಗಳಲ್ಲಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಭಕ್ತರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ಮಕ್ಕಳು ವೇಷಭೂಷಣವನ್ನು ತೊಡಗಿಕೊಂಡಿದ್ದರು. ರಾಮಲಿಂಗೇಶ್ವರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುರಿಸುವುದರ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುತೈದೆಯರು ಕುಂಭಮೇಳ, ದೀಪೋತ್ಸವ ಮೆರವಣಿಗೆಯಲ್ಲಿ ಸಾಗಿದರು.

 

ಹಾಯ್ಕಲ್ ಗ್ರಾಮದ ಎನ್.ನಾಗರಾಜರೆಡ್ಡಿ ಮಾತನಾಡಿ ಶಿವರಾತ್ರಿ ಹಬ್ಬದ ಪ್ರಯುಕ್ತ 52ವರ್ಷಗಳಿಂದಲೂ ಹಬ್ಬಗಳನ್ನು ಆಚರಿಸುತ್ತ ಬಂದಿದ್ದೇವೆ. ಕುಂಭಮೇಳದಲ್ಲಿ ಇದ್ದಂತ ನೀರನ್ನು ರಾಮಲಿಂಗೇಶ್ವರ ಸ್ವಾಮಿಯ ಅಭಿಷೇಕ ಮಾಡಿ ಬಹಳ ಆದ್ಧೂರಿಯಾಗಿ ಆಚರಿಸುತ್ತೇವೆ. ಸುಮಾರು 2 ಸಾವಿರದಿಂದ 3 ಸಾವಿರದವರೆಗೆ ಬರುವಂತ ಭಕ್ತಧಿಗಳಿಗೆ ಅನ್ನದಾಸೋಹ ಇರುತ್ತದೆ ಎಂದು ಅವರು ಮಾತನಾಡಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಎನ್.ನಾಗರಾಜರೆಡ್ಡಿ, ಕೆ.ಜಿ.ಲೋಕೇಶ್‌ರೆಡ್ಡಿ, ಪಿ.ಚಿದಾನಂದ, ರವಿಶಂಕರ್‌ರೆಡ್ಡಿ, ಎಲ್.ವೆಂಕಟೇಶ್‌ರೆಡ್ಡಿ, ನಾಗರಾಜ್‌ರೆಡ್ಡಿ, ಕ್ಯಾಸಕಿಪಾಪಯ್ಯ, ಡಬ್ಬರಾಜಪ್ಪ, ಹಾಗೂ ಭಕ್ತಾಧಿಗಳು ಮುಖಂಡರುಗಳು ಇದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ