ಬಳ್ಳಾರಿ ಹಿಂದೂ ಜಾಗರಣ ವೇದಿಕೆ ಯು ಅಖಂಡ ಭಾರತ ಸಂಕಲ್ಪ ದಿನದ ಮಹತ್ವದ ಕುರಿತು ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಸಂಜೆ 5-30ಕ್ಕೆ ನಗರದ ಎಸ್.ಜಿ.ಕಾಲೇಜು ಆವರಣದಲ್ಲಿ ನಡೆವ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮಹಾನಂದಿ ಪುಣ್ಯಕ್ಷೇತ್ರದ ಅದ್ವೆöÊತ ಶಂಕರಪೀಠದ ಪರಮಹಂಸ ಪರಿವ್ರಾಜಕಾಚಾರ್ಯ ಪ.ಪೂ.ನಿತ್ಯಾನಂದ ಭಾರತಿಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು.

ಮಾಜಿ ಶಾಸಕರು ಹಾಗೂ ಸಂಕಲ್ಪ ದಿನ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಶಾಸಕ ಜಿ.ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಮುಂಡ್ಲೂರ್ ಅನೂಪ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿಂದುತ್ವವೇ ಭಾರತದ ರಾಷ್ಟಿçÃಯತೆ ಎನ್ನುವ ಉದ್ಘೋಷಣೆಯೊಂದಿಗೆ ಮಾಧವಿ ಲತಾ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಮಳೆ ಬಂದರೂ ಈ ಕಾರ್ಯಕ್ರಮ ನಿಲ್ಲುವುದಿಲ್ಲ. ದೇಶಭಕ್ತ ನಾಗರಿಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತರ ಕರ್ನಾಟಕ ಸಮನ್ವಯ ಸದಸ್ಯರಾದ ಶ್ರೀರಾಮುಲು, ಜಿಲ್ಲಾ ಸದಸ್ಯರಾದ ಮುಲ್ಲಂಗಿ ಕಿಶೋರ್ ಕುಮಾರ್, ಜಿಲ್ಲಾ ಪ್ರಮುಖರಾದ ಅರ್ಜುನ್ ಸಿಂಗ್ ಕೋರಿದ್ದಾರೆ.