ತಾಲೂಕಿನ ಸರ್ಕಾರಿ ಪ್ರೌಢಶಾಲೆ ಜಾಗೀರ ಜಾಡಲದಿನ್ನಿ ಯಲ್ಲಿ ನಡೆದ 2014=15 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಪ್ರೌಢಶಾಲೆ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ ಎಂದರೆ ಇದು ಮಾದರಿ ಕಾರ್ಯವಾಗಿದೆ ಇಂದಿನ ಮಕ್ಕಳಿಗೆ ಸಂಸ್ಕಾರದ ಕೊರತೆಯಿದೆ ಇಂದಿನ ಶಿಕ್ಷಣ ಪದ್ಧತಿಯು ಸಾಕಷ್ಟು ಬದಲಾಗಿದೆ ಮಕ್ಕಳಿಗೆ ದಂಡಿಸದೆ ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರು ತಾಕಿತ್ತು ಮಾಡುತ್ತಾರೆ . ನಾವು ನಿಮಗೆಲ್ಲ ಹೊಡೆದು ಬಡೆದು ಪಾಠ ಬೋಧನೆ ಮಾಡಿರುವದರಿಂದ ಸಮಾಜದಲ್ಲಿ ಸಂಸ್ಕಾರ ಜೀವನ ಕಟ್ಟಿಕೊಂಡಿದ್ದೀರಿ ಹಲವಾರು ವರ್ಷಗಳ ನಂತರ ನಿಮ್ಮನ್ನು ಮತ್ತೆ ನೋಡಿದ್ದು ಸಂತೋಷವಾಗಿದೆ ಎಂದರು

ರವಿ ನಾಯ್ಕ್ ಮಾತನಾಡಿ ನಮ್ಮ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು ಅದರಂತೆಯೇ ನಾವುಗಳು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಿದಾಗ ನಮ್ಮ ಹೆಸರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ಬೀರೂರಲು ಸಾಧ್ಯವಾಗುತ್ತದೆ ಕೇವಲ ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಪಾಠ ಬೋಧನೆಗೆ ಹೆಚ್ಚು ಒತ್ತು ನೀಡದೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಳವಾಗಿ ಅವರದೇ ಆದಂತ ಭಾಷೆಯಲ್ಲಿ ಪಾಠ ಬೋಧನೆ ಮಾಡಿದರೆ ಸುಲಭವಾಗಿ ಅರ್ಥೈಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎರಡು ದಶಕಗಳ ಹಿಂದಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ ಅಂದು ಮಕ್ಕಳಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳಿಲ್ಲದೆ ತಮ್ಮ ಮನೆಯ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಶಿಕ್ಷಣ ಪಡೆಯುತ್ತಿದ್ದರು ಮತ್ತು ಪಾಲಕರು ತಮ್ಮ ಮಕ್ಕಳ ಶಿಕ್ಷಣ ಕಲಿಕೆ ಉತ್ತಮ ವಾಗಿಸಲು ಪ್ರತಿಯೊಬ್ಬರು ಕಾಳಜಿ ವಹಿಸುತ್ತಿದ್ದರು ಆದರೆ ಇಂದಿನ ಶಿಕ್ಷಕರು ಸರಕಾರ ಸೂಚಿಸಿರುವ ನಿಬಂಧನೆಗಳಂತೆ ಶಿಕ್ಷಣ ನೀಡಬೇಕಾಗಿದೆ ಅಂದಿನ ಮಕ್ಕಳು ಸಾಕಷ್ಟು ಹೊಡೆಸಿಕೊಳ್ಳುತ್ತಿದ್ದರು ಆದರೆ ಇಂದು ಮಕ್ಕಳನ್ನು ಹೊಡೆಯುವುದು ಬೈಯುವುದು ಮಾಡಿದರೆ ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಾರೆ ಇಂದಿನ ಶಿಕ್ಷಣ ಕುಂಠಿತವಾಗಲು ಇದೇ ಪ್ರಮುಖ ಕಾರಣ ವಾಗಿದೆ ಎಂದರು ಹಳೆಯ ವಿದ್ಯಾರ್ಥಿ ಬಸವಲಿಂಗಯ್ಯ ಸ್ವಾಮಿ ಮಾತನಾಡಿ ಪಾಠಹೇಳಿ ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಗುರುಗಳ ಸೇವೆಯನ್ನು ಸ್ಮರಿಸುವುದು ಮುತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕದ ಕಾರ್ಯ ಯಾವುದೇ ಅಪೇಕ್ಷೆ ಇಲ್ಲದೆ ನಮ್ಮ ಭವಿಷ್ಯ ರೂಪಿಸಿದ್ದಾರೆ ಎಂದರು
ಗುರುವಂದನಾ ಕಾರ್ಯಕ್ರಮದಲ್ಲಿ ತಮಗೆ ಕಲಸಿದ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಶೋಭಾ ಮೇಡಂ ಅವರು ವಹಿಸಿದರು ಮತ್ತು ಸನ್ಮಾನ ಸ್ವೀಕರಿಸಿದ ಶಿಕ್ಷಕರುಗಳಾದ ಬಂದಿಗಿ ಸಾಬ್, ರವಿನಾಯ್ಕ್ ಎಲ್ ಡಿ, ಆಶೋಕ ಸಜ್ಜನ್, ಮಹಾಂತೇಶ ಡಿ ಎನ್ ಎಮ್, ಮಾರುತಿ , ಕಿರಣ ಕಾಂಬ್ಳೆ, ರವಿ ಮೆನ್ಪಾಡಿ, ವೆಂಕಟೇಶ ಕಾವಲಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು