LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೋಕಾ ವ್ಯಾಪ್ತಿಯಲ್ಲಿ ಲಾರ್ವ ಸಮೀಕ್ಷೆ

ಬಳ್ಳಾರಿ : ಇಂದು ಸಮುದಾಯ ಆರೋಗ್ಯ ಕೇಂದ್ರ ಮೋಕಾ  ವ್ಯಾಪ್ತಿಯಲ್ಲಿ ಬರುವ ವಣೆನೂರು ಉಪ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಣ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಲಾರ್ವ ಸಮೀಕ್ಷೆಯನ್ನು ಹಮ್ಮಿಕೊಂಡಿದ್ದರು.

ಸಮೀಕ್ಷೆ ಸಮಯದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ್ ಇವರು ಲಾರ್ವ ಸಮೀಕ್ಷೆಯ ಕುರಿತು ಮಾಹಿತಿ ನೀಡುತ್ತಾ, ಡೆಂಗ್ಯೂ ಹರಡದ ಹಾಗೆ  ಖಾಯಿಲೆ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈಗ ಮಳೆಗಾಲ ಇರುವ ಪ್ರಯುಕ್ತ ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ನಿಂತ ನೀರು ಸೊಳ್ಳೆಗಳ ತಾಣ ಆಗುತ್ತದೆ. ಡೆಂಗು ಹರಡುವ ಒಂದು ಸೊಳ್ಳೆವು 150 ರಿಂದ 200ವರೆಗೆ ಮೊಟ್ಟೆಯನ್ನು ಇಡುತ್ತದೆ. ಮಳೆಯ ನೀರಷ್ಟೇ ಅಲ್ಲದೆ ಮನೆಯ ಒಳಗಡೆ ಹಾಗೂ ಹೊರಗಡೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.



ನೀರು ಸಂಗ್ರಹಿಸುವ ಪಾತ್ರೆಗಳು, ಪರಿಕರಗಳನ್ನು ಸರಿಯಾಗಿ ಮುಚ್ಚಿಡಬೇಕು. ಸೊಳ್ಳೆಯ ನುಸುಳದಂತೆ ಮುಚ್ಚಿಡಬೇಕು. ಮುಚ್ಚುಳ ಇಲ್ಲದಿದ್ದ ಪಕ್ಷದಲ್ಲಿ ಬಟ್ಟೆಯನ್ನು ಕಟ್ಟಿ ಸೊಳ್ಳೆಯು ಒಳಗಡೆ ಹೋಗಲಾರದೆ ಮುಚ್ಚಿಡಬೇಕು. ಅಷ್ಟೇ ಅಲ್ಲದೆ ಮನೆಯ ಸುತ್ತಮುತ್ತ ಮನೆಯ ಮೇಲ್ಚಾವಣಿಯನ್ನು ಏನೋ ವೇಸ್ಟ್ ಟೈಯರ್ ಇನ್ನಿತರ ವಸ್ತುಗಳನ್ನು ಹಾಕಬಾರದು. ಅದರಲ್ಲಿ ಮಳೆ ನೀರು ಶೇಖರಣೆಯಾಗಿ ಸೊಳ್ಳೆಯು ವಂಶವೃದ್ದಿಯನ್ನು ಮಾಡುತ್ತದೆ. ನೀರಿನ ಪರಿಕರಗಳನ್ನು ಸ್ವಚ್ಛವಾಗಿ ಬ್ರೆಷ್ ಹಾಕಿ ಉಜ್ಜಿ ತೊಳೆದು ಒಂದು ದಿನ ಒಣಗಿಸಿ ನಂತರ ನೀರನ್ನು ಶೇಖರಣೆ ಮಾಡಿ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೇ ಯಾವುದೇ ಜ್ವರ ಇರಲಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಿಗೌಡ ಮಹಮ್ಮದ್ ಇಸಾಕ್ ಗುರುಸಿದ್ದಪ್ಪ ಮಂಜುನಾಥ್ ಹಾಗೂ ಗೋಪಾಲ್, ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST