
ಈ ವರ್ಷ ನೀಲಕಂಠ ಮತ್ತು ಮಹಾಲಿಂಗ ಅವರ ಬೆಂಬಲದೊಂದಿಗೆ ಗೊಲ್ಲ ಯಾದವ ಸಮುದಾಯದ ಗಣೇಶ್, ವಿನಯ್ ಕುಮಾರ್, ಕಿರಣ್, ನಂದೀಶ್, ಸೂರಿ, ಭರತ್, ಅನಿಲ್ ಮತ್ತು ನಂದೀಶ್ ಸೇರಿದಂತೆ ಒಂಭತ್ತು ಯುವಕರು ಹಂಪಿಗೆ ಪಾದಯಾತ್ರೆ ಕೈಗೊಂಡರು. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಪಾದಯಾತ್ರೆ ಮಾಡಿ, ಹಂಪಿಯ ಶ್ರೀ ವೀರಪಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಹಿಂತಿರುಗುವುದು ವಾಡಿಕೆ ಗ್ರಾಮದ ತಿಪ್ಪೇಸ್ವಾಮಿ ಹೇಳಿದರು.
ಇಂದಿನ ಪಾದಯಾತ್ರೆಯು ಗ್ರಾಮದ ದೇವಸ್ಥಾನವನ್ನು ತಲುಪಿ, ಪೂಜೆ ಸಲ್ಲಿಸಿ ಬಳಿಕ ತಮ್ಮ ಮನೆಗಳನ್ನು ತಲುಪಿದರು.