ಬೆಂಗಳೂರು : ಕು. ಸೋನಲ್ ಮತ್ತು ಕು. ಪೂರ್ವಿಕಾ ಅವರ ರಂಗಾಭಿವಂದನೆ ಇತ್ತೀಚೆಗೆ ನಡೆಯಿತು.
ನಾಟ್ಯಗುರು ರಾಧಿಕ ಎಂ.ಕೆ. ಸ್ವಾಮಿ ಅವರ ಸಾರಥ್ಯದಲ್ಲಿ ಮಲ್ಲೇಶ್ವರಂನ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ತೋದ್ಯಮದ ಗಣ್ಯರು, ಶಾಸ್ತ್ರೀಯ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ರಂಗಾಭಿವಂದನೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
[gallery columns="2" ids="24490,24493,24491,24492,24494,24495"]
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕ ಎಸ್.ಎ. ಚೆನ್ನೇಗೌಡ, ನಿರ್ಮಾಪಕ ಎಸ್.ಎ. ಗೋವಿಂದ್ ರಾಜ್, ಡಾ. ರಾಜ್ ಪುತ್ರಿ ಲಕ್ಷ್ಮೀ ಗೋವಿಂದ್ ರಾಜ್, ಕರ್ನಾಟಕ ನೈತ್ಯ ಸಂಗೀತ ಅಕಾಡೆಮಿ ಅಧ್ಯಕ್ಷರಾದ ಶುಭಾ ಧನಂಜಯ್, ಲಲಿತಾ ಕಲಾ ಸಂಘದ ನಿರ್ದೇಶಕರಾದ ಲಲಿತಾ ಧ್ವರಜನ್ ಮತ್ತು ಡಾ. ರಾಜ್ ಅವರ ಮೊಮ್ಮಗ ಷನ್ಮುಖ ಗೋವಿಂದ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.