LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ರೈತ ಸಂಪರ್ಕ ಕೇಂದ್ರದಲ್ಲಿ ಮೋಸ ಭೇದಿಸಿದ ಕೆ ಆರ್ ಎಸ್ ಕಾರ್ಯಕರ್ತರು

ಲಿಂಗಸೂಗೂರು : ಒಬ್ಬೊಬ್ಬ ರೈತನ ಹತ್ತಿರ 300 ರುಪಾಯಿ ವಸೂಲಿ. ಅದು ಒಬ್ಬ ಮಧ್ಯವರ್ತಿಯನ್ನು ಇಟ್ಟುಕೊಂಡು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಆದ AO ಮತ್ತು ಅಕೌಂಟೆಂಟ್ ಸೇರಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಮಧ್ಯವರ್ತಿಯನ್ನಾಗಿ ಮಾಡಿಕೊಂಡು ರೈತರಿಗೆ ಕೃಷಿ ಉಪಕರಣಗಳನ್ನು ನೀಡುವ ಸಂದರ್ಭದಲ್ಲಿ ಗೋದಾಮಿನ ಬಳಿ ಒಬ್ಬೊಬ್ಬ ರೈತನಿಂದ ಬರೋಬ್ಬರಿ 300 ರೂಪಾಯಿ (ಅನಧಿಕೃತವಾಗಿ) ವಸೂಲಿ ಮಾಡುತ್ತಿದ್ದಾರೆ ಎಂದು ಕೆಆರ್ ಎಸ್ ಪಕ್ಷ ಆರೋಪಿಸಿದೆ.

KRS ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ಶಿವರಾಜ್ ಮತ್ತು ರಾಯಚೂರು ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಗಂಗಪ್ಪ ಕಬ್ಬೇರ ಇವರು ರೈತರ ಬೆಂಬಲಕ್ಕೆ ನಿಂತು ಅಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ಅನರ್ಥ ಉತ್ತರ ಕೊಡುವುದು ಮತ್ತು ಅವರು ಮಾಡಿದ ತಪ್ಪಿಗೆ ಒಪ್ಪುವುದೂ ಸೇರಿದಂತೆ ಕೊನೆಗೆ ಅಧಿಕಾರಿಗಳು ಸುಮಾರು 30 ರೈತರ ಬಳಿ 300 ರೂಪಾಯಿಯಂತೆ 9000 ಸಾವಿರ ರುಪಾಯಿ ವಾಪಸ್ ನೀಡಿದ್ದಾರೆ.



ರಾಜ್ಯದಲ್ಲಿ ಈಗಾಗಲೇ ರೈತರಿಗೆ ನೂರಾರು ಕಷ್ಟಗಳು, ಉತ್ತಮ ಮುಂಗಾರಿನ ನಡುವೆ ರಾಸಾಯನಿಕ ಗೊಬ್ಬರಗಳು ಮತ್ತು ಕೃಷಿ ಚಟುವಟಿಕೆಯ ಉಪಕರಣಗಳು ಸಿಗದಿರುವುದು ತುಂಬಾ ಸಮಸ್ಯೆಗಳ ನಡುವೆ ಅಧಿಕಾರಿಗಳು ಈ ರೂಪದಲ್ಲಿ ವಸೂಲಿಗಳಿದ್ದು ರೈತರ ಜೀವನದ ಜೊತೆ ಚೆಲ್ಲಾಟ ಆಡುವಂತಹ ಸಂದರ್ಭವನ್ನು ಗಮನಿಸಿದಾಗ ಸ್ಥಳೀಯ ಜನಪ್ರತಿನಿಧಿಗಳು ,ತಾಲೂಕಡಳಿತ,ಜಿಲ್ಲಾಧಿಕಾರಿಗಳು, ಕೃಷಿ ಸಚಿವರು ಮತ್ತು ರಾಜ್ಯ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವ ಅನುಮಾನ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.

ಈ ವಿಡಿಯೋವನ್ನು ಗಮನಿಸಿದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಸೂಲಿಗೆ ಇಳಿದ ಅಧಿಕಾರಿಗಳು ಮತ್ತು ಇನ್ನಿತರ ಮೇಲೆ ಸುಮೋಟೋ ಆಕ್ಷನ್ ರೂಪದಲ್ಲಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕವು ಆಗ್ರಹಿಸುತ್ತದೆ ಎಂದು ಆರ್ ಕೆ ಎಸ್ ರಾಜ್ಯ ರೈತ ಘಟಕದ ರಾಜ್ಯ ಕಾರ್ಯದರ್ಶಿ  ನಿರುಪಾದಿ ಕೆ ಗೋಮರ್ಸಿ ತಿಳಿಸಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ