ತಮ್ಮ ಕಚೇರಿಯ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಗೃಹ ಮಂಡಳಿ ಯಲಹಂಕ ಉಪನಗರ `ಎ' ಸೆಕ್ಟರ್ ಬಡಾವಣೆಯ ಮೂಲೆ ನಿವೇಶನ ಸಂಖ್ಯೆ:271 ಎಂ.ಐ.ಜಿ.ಖಾಲಿ ಇರುವ ನಿವೇಶನವನ್ನು 1986ರ ಜೂ.24ರಲ್ಲಿ ಎಲ್.ಸಿ..ಎಸ್.ಆಗಿರುವುದಾಗಿ ಸತೀಶ್ ಹರಿಣಿ ಎನ್ನುವವರು ನಕಲು ದಾಖಲೆಗಳನ್ನು ಸೃಷ್ಟಿಸಿದ್ದರು. ಈ ಕುರಿತು ಬಿಬಿಎಂಪಿಯಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದ್ದರಿಂದ ಬಿಬಿಎಂಪಿ ಅವರು ನಿವೇಶನಕ್ಕೆ ಎನ್.ಓ.ಸಿ. ಕೋರಿ 2023ರಂದು ಕೆ.ಎಚ್.ಬಿ.ಅವರಿಗೆ ಅರ್ಜಿ ಸಲ್ಲಿಸಿದ್ದರು. ಕೆ.ಎಚ್.ಬಿ. ನಕಲು ಎನ್.ಓ.ಸಿ. ಅನ್ನು ನಕಲು ಮಾಡಿ 2021ರ ಆಗಸ್ಟ್ 20 ರಂದು ಸಲ್ಲಿಸಲಾಗಿತ್ತು. ಇದು ಮಂಡಳಿ ಗಮನಕ್ಕೆ ಬಂದಿದೆ. 2020ರ ಅ.23ರಂದು ಮಂಡಳಿಯ ಎಇಇ ಆಗಿದ್ದ ಸೈಯದ್ ಅಗ್ಜರ್ ಕ್ರಯಪತ್ರ ಮಾಡಿಕೊಟ್ಟಿದ್ದರು. ಗಾಂಧಿನಗರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 2020ರ ಅ.28ರಂದು ನೋಂದಣಿ ಆಗಿತ್ತು. ಈ ಪ್ರಕರಣ ಲೋಕಾಯುಕ್ತ ದಲ್ಲಿ ದಾಖಲಾಗಿತ್ತು. ಈ ಎಲ್ಲ ವಹಿವಾಟುಗಳು ನಕಲಿಯಾಗಿದ್ದವು ಎಂದು ಮಾಹಿತಿ ನೀಡಿದರು.

ಯಲಹಂಕದ ಮಂಡಳಿ ಕ್ರಯ ಪತ್ರ ರದ್ದುಪಡಿಸಿ ಕ್ರಯದ ರದ್ದಿಯಾಗಿ ಪತ್ರ ನೋಂದಣಿ ಮಾಡಿಸಿದ್ದರು. ಎಂ.ಐ.ಜಿ. ಮೂಲೆ ನಿವೇಶನ ಸಧ್ಯ ಮಂಡಳಿಯ ವಶದಲ್ಲಿದೆ. ಸದರಿ ನಿವೇಶನವನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು 2024ರ ಆ.29ರಂದು ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಗೋವಿಂದಯ್ಯ ಎನ್ನುವವರು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಇ-ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಸಧ್ಯ ಲೋಕಾಯುಕ್ತದ ಪ್ರಕರಣಕ್ಕೆ ಸಂಬAಧಿಸಿದAತೆ ಮಂಡಳಿಯಲ್ಲಿ ಅಂತಹ ಯಾವುದೇ ಅಕ್ರಮಗಳು ನಡೆದಿಲ್ಲ. ಇದು ನಾನು ಅಧ್ಯಕ್ಷನಾಗಿ ಬರುವ ಮುಂಚೆ ನಡೆದಿರುವ ಪ್ರಕರಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ಯೋಜನೆಗಳು:
ಸೂರ್ಯನಗರ-4ನೇ ಹಂತದಲ್ಲಿ ಭೂಸ್ವಾಧೀನ ಪಡಿಸಿರುವ 1938 ಎಕರೆ ಜಮೀನಿನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, 1211 ಎಕರೆ ಜಮೀನಿನ ಬಡಾವಣೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. 438 ಎಕರೆ ಉಳಿಕೆ ಜಮೀನಿನಲ್ಲಿ 2ನೇ ಹಂತದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. 50:50 ಅನುಪಾತದ ಪಾಲುದಾರಿಕೆಯಡಿ ಭೂಮಾಲೀಕರ ಪಾಲಿನ 5070 ನಿವೇಶನಗಳನ್ನು ಆಯ್ಕೆ ನೀಡಲಾಗಿದೆ. ಸಾರ್ವಜನಿಕರಿಂದ 17500 ಅರ್ಜಿಗಳು ಸ್ವೀಕೃತವಾಗಿದ್ದು ಲಭ್ಯವಿರುವ 3462 ನಿವೇಶನಗಳನ್ನು ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಬೇಕಾಗುತ್ತದೆ. ಅತ್ಯಾಧುನಿಕ ಮಾದರಿಯ 100 ಡುಪ್ಲೆಕ್ಸ್ ಮನೆಗಳನ್ನು ಎಲ್ಲ ಸೌಲಭ್ಯಗಳೊಂದಿಗೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. 75 ಎಕರೆ ಜಮೀನಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ರೂ.೫ ನೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಕೆಂಗೇರಿಯಲ್ಲೂ ನಿರ್ಮಾಣ:
ಸೂರ್ಯನಗರ 4ನೇ ಹಂತದ ವ್ಯಾಪ್ತಿಯ 5 ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ರೂ.80 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಕೆಂಗೇರಿ ಬಂಡೇಮಠ ಕೆ.ಎಚ್.ಬಿ.ಬಡಾವಣೆಯ 6 ಎಕರೆ ಜಮೀನಿನ ಪೈಕಿ ೩ ಎಕರೆ ಜಮೀನಿನಲ್ಲಿ 180.00 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತದೆ. 2 ಎಕರೆ ವಾಣಿಜ್ಯ ನಿವೇಶನದಲ್ಲಿ ಕೆ.ಎಚ್.ಬಿ. ಕನ್ವೆಷನ್ ಸೆಂಟರ್ ಹಾಗೂ ಕ್ರೀಡಾ ಕೇಂದ್ರ ವನ್ನು ರೂ.250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ದೇವನಹಳ್ಳಿ ತೈಲಗೆರೆ ಗ್ರಾಮದಲ್ಲಿ 27 ಎಕರೆ ಜಮೀನಿನಲ್ಲಿ ರೂ.57 ಕೋಟಿ ವೆಚ್ಚದಲ್ಲಿ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ರಾಮನಗರದ ರಾಯಸಂದ್ರ ಕೆ.ಎಚ್.ಬಿ.ಬಡಾವಣೆಯಲ್ಲಿ 56 ಮನೆಗಳನ್ನು ರೂ.3697.45 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಸಮುದಾಯ ಕಾರ್ಮಿಕ ವರ್ಗದವರಿಗೆ, ಹಿಂದುಳಿದವರಿಗೆ ಬೆಂಗಳೂರು ವ್ಯಾಪ್ತಿಯಲ್ಲಿ ಕೈಗೆಟುಕುವ ದರದಲ್ಲಿ ಜಿ ಪ್ಲಸ್ 3 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇನ್ನೂ ಹಲವಾರು ಯೋಜನೆಗ ಮಂಡಳಿಯಲ್ಲಿ ಬತ್ತಳಿಕೆಯಲ್ಲಿದ್ದು ಕಾರ್ಯರೂಪಕ್ಕೆ ತರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಗೃಹ ಮಂಡಳಿಯ ಮುಖ್ಯ ಇಂಜಿನಿಯರಾದ ಕೆ.ಟಿ.ರವಿಕುಮಾರ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಮೋದ್ ಮತ್ತಿತರರು ಇದ್ದರು.