LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಣ್ಣನವರ ಪುತ್ಥಳಿಗೆ ಹೊಸ ಸ್ವರೂಪ ನೀಡಲು ಕರ್ನಾಟಕ ರಾಜ್ಯ ಯುವ ಸಮೂಹ ಒತ್ತಾಯ

ಬೆಂಗಳೂರು : ನಗರದ ಚಾಲುಕ್ಯ ವೃತ್ತದಲ್ಲಿರುವ ಕಾಯಕಯೋಗಿ ಬಸವಣ್ಣನವರ ಪುತ್ಥಳಿಗೆ ಬಣ್ಣ ಬಳಿದು ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ  ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರದಿರುವ ಅವರು, ಏಪ್ರಿಲ್ 20 ರಂದು ನಾಡಿನೆಲ್ಲೆಡೆ ಬಸವ ಜಯಂತಿ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಪುತ್ಥಳಿ ನಳನಳಿಸುವಂತೆ ಮಾಡಬೇಕು. ಅಂದು ನಾಡಿನ ಹಲವು ಗಣ್ಯರು ವಿಶ್ವಗುರುವಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಆದರೆ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಯನ್ನು ಸ್ವಚ್ಛಗೊಳಿಸದೇ, ನಿರ್ವಹಣೆ ಮಾಡದೇ ನಿರ್ಲಕ್ಷ್ಯವಹಿಸಿರುವುದರಿಂದ ಅದು ಜೀವ ಕಳೆ ಕಳೆದುಕೊಂಡಿದೆ. ಪುತ್ಥಳಿಯ ಬಣ್ಣ ಮಸುಕಾಗಿದ್ದು, ತಕ್ಷಣ ಹೊಸ ಸ್ವರೂಪ ನೀಡುವ ಕೆಲಸ ನಡೆಯಬೇಕು. ರಾಜ್ಯದ ಯಾವುದೇ ಪುತ್ಥಳಿಯಲ್ಲೂ ಬಿಳಿ ಬಣ್ಣ ಬಳಿದಿಲ್ಲ.  ಗೋಲ್ಡನ್ ಕಲರ್ ಬಳಸಿ ಪುತ್ಥಳಿಗೆ ಹೊಸ ಸ್ಪಷ್ಟ ನೀಡಬೇಕು ಎಂದು ಹೇಳಿದ್ದಾರೆ.



ಬಸವಣ್ಣನವರ ಪುತ್ಥಳಿಯ ಸುತ್ತಮುತ್ತ ತುರ್ತು ಸ್ವಚ್ಛತೆ, ಸೌಂದರ್ಯೀಕರಣ, ಮೂಲಭೂತ ಸೌಲಭ್ಯಗಳೊಂದಿಗೆ ಪಾರ್ಕ್ ನಿರ್ಮಾಣ ಮಾಡಬೇಕು. ಪ್ರತಿದಿನ ಪ್ರತಿದಿನ ಬೆಳಗ್ಗೆ 5 ರಿಂದ 10 ಗಂಟೆ, ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ಧ್ವನಿ ವರ್ಧಕ ಧ್ವನಿ ವರ್ಧಕದ ಮೂಲಕ  ವಚನ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು. ಧ್ವನಿ ವರ್ಧಕ ವ್ಯವಸ್ಥೆ ಬಸವ ಜಯಂತಿಗೆ ಸೀಮಿತವಾಗದೆ ಅನುದಿನದ ಕಾರ್ಯಕ್ರಮವಾಗಬೇಕು. ಬಸವಣ್ಣನವರ ವಚನಗಳು ಸಮಾಜದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರುವ ಅಮೂಲ್ಯ ಸಂದೇಶಗಳಾಗಿದ್ದು, ಅವು ಜನಮಾನಸಕ್ಕೆ ಪ್ರತಿದಿನ ತಲುಪುವಂತೆ ಮಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.

ಪುತ್ಥಳಿಯ ಸೌಂದರ್ಯ ವೃದ್ಧಿಸುವ ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸೀರಿಕರಣಕ್ಕೆ ಒತ್ತು ನೀಡಬೇಕು. ಹೂವಿನ ಗಿಡಗಳು, ವಿಧಾನಸೌಧ, ಹೈಕೋರ್ಟ್, ಲೋಕಭವನಕ್ಕೆ ಕೂಗಳೆಯ ದೂರದಲ್ಲಿರುವ ಚಾಲುಕ್ಯ ವೃತ್ತದ ಪುತ್ಥಳಿಯನ್ನು ಸರ್ಕಾರ ನಿರ್ಲಕ್ಷ್ಯ ತೋರದೇ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಅಲಂಕಾರಿಕ ಸಸ್ಯಗಳು, ಹೂವಿನ ಕುಂಡಗಳ ಮೂಲಕ ಸುಂದರ ವಾತಾವರಣ ನಿರ್ಮಾಣ ಮಾಡಬೇಕು.



ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಸಮರ್ಪಕ ಬೆಳಕು, ಭದ್ರತೆ ಹಾಗೂ ದಿನನಿತ್ಯ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಬಸವಣ್ಣನವರ ಸ್ಮಾರಕ ಸ್ಥಳವು ನಗರದ ಗೌರವದ ಪ್ರತೀಕವಾಗಿದೆ. ಕ್ರಾಂತಿಯೋಗಿಯ ಚಿಂತನೆಗಳ ಬಗ್ಗೆ ಎಲ್ಲೆಡೆ ಮಾತನಾಡುವ ಮುಖ್ಯಮಂತ್ರಿ ಅವರು, ಅತೀ ತುರ್ತಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಬಸವಣ್ಣನವರ ಚಿಂತನೆಗಳು ಮತ್ತು ವಚನಗಳು ಜನರಿಗೆ ತಲುಪುವಂತೆ ಮಾಡುವ ಒಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಪತ್ರಕ್ಕೆ ಹನುಮೇಶ್ ಗುಂಡೂರ, ವಕೀಲರ ನಿಂಗರಾಜ ಗುಳೆ, ಮಲ್ಲಿಕಾರ್ಜುನ್ ಬಾಂಬೇಕರ್, ಜಿ ಎಂ ಬಬಲದ, ಅಭಿಷೇಕ, ಭೀಮಾಶಂಕರ ಬಿಲ್ಲವ ಮತ್ತು ಮಂಜುನಾಥ ಬಿ (ಗುತ್ತಿಗೆದಾರರು) ಸಹಿ ಮಾಡಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST