ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣ ನಾಯಕನಹಟ್ಟಿ ಹೋಬಳಿ ಘಟಕ ವತಿಯಿಂದ 5ನೇ ವರ್ಷದ ಶುಕ್ರವಾರ ಪಾದಗಟ್ಟೆಯಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದ ಹಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾನತಾಡಿದ ಅವರು ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು. ಎಲ್ಲರೂ ಪ್ರೀತಿಸಬೇಕು, ಗೌರವಿಸಬೇಕು ಅಲ್ಲದೇ ಪ್ರತೀ ಮನೆಗಳಲ್ಲಿ ಕನ್ನಡ ಬಳಕೆ ಮಾಡಿ ಕನ್ನಡ ಉಳಿಸುವ ನಾಡಿನ ಗೌರವ ಎತ್ತಿ ಹಿಡಿಯುವ ಕೆಲಸ ಎಲ್ಲರಿಂದ ಆಗಲಿ ಎಂದರು.
ವಚನ, ಸಾಹಿತ್ಯ, ಜನಪದ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಸೇರಿಕೊಂಡು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಕನ್ನಡದ ಖ್ಯಾತ ಕವಿಗಳಾದ ಕುವೆಂಪು ಮತ್ತು ಡಿವಿಜಿಯವರರು ಅವರ ಕಾವ್ಯ ಮತ್ತು ಬರಹಗಳ ಮೂಲಕ ಮನುಷ್ಯನ ಬದುಕಿನ ಮೌಲ್ಯಗಳನ್ನು ರೂಪಿಸಿದ್ದಾರೆ ವಚನಕಾರರಾದಂತಹ ಬಸವಣ್ಣ ಮತ್ತು ದಾಸ ಸಾಹಿತ್ಯದ ದಿಗ್ಗಜರಾಜ ಕನಕದಾಸರು ಮತ್ತು ಪುರಂದರದಾಸರು ಧಾರ್ಮಿಕ ಕೀರ್ತನೆಗಳ ಮುಖಾಂತರ ಮನುಷ್ಯನಿಗೆ ಮುಕ್ತಿ ಪತದ ದಾರಿಗೆ ಕಾರಣರಾಗಿದ್ದಾರೆ ಪಂಪನ ವಿಕ್ರಮಾರ್ಜುನ ವಿಜಯ ರನ್ನನ ಸಾಹಸ ಭೀಮ ವಿಜಯ ಜಗತ್ತಿನ ಅತ್ಯದ್ಭುತ ಗ್ರಂಥಗಳಾಗಿವೆ ಬೇಂದ್ರೆ ಖಾರಂತ ಮತ್ತು ಮಾಸ್ತಿ ಅವರ ಬರಹಗಳು ಕನ್ನಡ ಭಾಷೆಗೆ ಉತ್ಕಟ ಸ್ಪರ್ಶ ನೀಡಿ ಜಗತ್ತಿಗೆ ಬೆಳಕಾಗುವಂತೆ ಮಾಡಿದ್ದಾರೆ ಎಲ್ಲರ ಮಹನೀಯರ ಗ್ರಂಥಗಳನ್ನು ಪ್ರತಿಯೊಂದು ಮನೆಗಳಲ್ಲಿ ಪಾಠ ಮಾಡಿದರೆ ಇಂತಹ ಕವಿಗಳನ್ನು ಮುಂದಿನ ಸಾವಿರಾರು ವರ್ಷ ಬದುಕಿಸುವ ಕೆಲಸವನ್ನು ನಾವು ಮಾಡಿದಂತಾಗುತ್ತದೆ ಎಂದು ಹೇಳಿದರು. ನಮ್ಮ ಕನ್ನಡ ನಾಡಿನಲ್ಲಿ ಕದಂಬರು, ಹೋಯ್ಸಳರು, ಚೋಳರು, ನಿಜಾಮರು ಹಾಗೂ ಒಡೆಯರ್ ರಾಜ್ಯದವರು ಆಳಿದ ಭೂಮಿ ಕರ್ನಾಟಕ ಎಂದರು.
ತಳಕು ಮತ್ತು ನಾಯಕನಹಟ್ಟಿ ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಚನ್ನಗಾನಹಳ್ಳಿ ಮಲ್ಲೇಶ್ ಮಾತನಾಡಿ ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು ಅಸ್ಥಿತ್ವಕ್ಕೆ ಬಂದಿತು. 1956ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಯ ಆಧಾರದಲ್ಲಿ ದೇಶದ ಪ್ರಾಂತ್ಯಗಳನ್ನು ರಾಜ್ಯಗಳಾಗಿ ಪುನರ್‌ವಿಂಗಡಣೆ ಮಾಡಲಾಯಿತು. 1956 ನವಂಬರ್ 01ರಂದು ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆ ಇತ್ತು ಈಗಾಗಿ 1973ರ ನವಂಬರ್ 01ರಂದು ಮೈಸೂರು ರಾಜ್ಯ ಎಂಬುದು ಅಧೀಕೃತವಾಗಿ ಕರ್ನಾಟಕ ರಾಜ್ಯ ಉದಯವಾಯಿತು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕ ಸ್ಥಳಗಳಲ್ಲಿ, ಕಛೇರಿಗಳಲ್ಲಿ, ಶಾಲೆಗಳಲ್ಲಿ, ಕನ್ನಡವನ್ನೇ ಮಾತನಾಡಬೇಕು. ಇತರರಿಗೂ ಕನ್ನಡವನ್ನು ಕಲಿಸಬೇಕು ಕನ್ನಡ ನಾಡು ಉಳಿಸಿ ಬೆಳಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಎA.ವೈ.ಟಿ. ಮಾತನಾಡಿ ಹೆತ್ತ, ಹೊತ್ತ ತಾಯಿಗೆ ಮೊದಲು ಗೌರವ ಕೊಡಬೇಕು, ನಾವೆಲ್ಲರೂ ಕನ್ನಡ ಭಾಷೆಗೆ ಹೆಚ್ಚು ಒತ್ತು ಕೊಡಬೇಕು. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ನಮ್ಮ ಭಾಷೆಯನ್ನು ಗೌರವಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ ನಮ್ಮ ಮನೆಗಳಲ್ಲಿ ಕನ್ನಡ ಭಾಷೆ ಮಾತನಾಡಬೇಕು, ತಂದೆ-ತಾಯಿಯAದಿರುವ ಮಕ್ಕಳೊಡನೆ ನಮ್ಮ ಭಾಷೆಯಲ್ಲಿ ಮಾತನಾಡಿದಾಗ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯ. ಅಕ್ಕ-ಪಕ್ಕದವರು ಕನ್ನಡದಲ್ಲಿಯೆ ಮಾತನಾಡುವುದರಿಂದ ಕಲಿಕೆ ಬೇಗ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ತಾಲ್ಲೂಕು ಅಧ್ಯಕ್ಷ ಪಿ.ಮಂಜುನಾಥ್, ಧ್ವಜಾರೋಹಣ ರಘುರಾಂರೆಡ್ಡಿ ನೆರವೇರಿಸಿದರು. ಉಪಾಧ್ಯಕ್ಷರಾದ ಅನಿತಮ್ಮ ಗೊಂಚಿಗಾರ್ ಜಯಣ್ಣ, ನಾಯಕನಹಟ್ಟಿ ಹೋಬಳಿ ರೈತಸಂಘದ ಅಧ್ಯಕ್ಷ ಡಾ.ನಾಗರಾಜ್ ಮೀಸೆ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್‌ಅನ್ವರ್, ತಿಪ್ಪೇಸ್ವಾಮಿ ಶಿವ ಸ್ಟುಡಿಯೋ ನಾಯಕನಹಟ್ಟಿ, ಮಾಜಿ ಪ.ಪಂ.ಸದಸ್ಯ ಬಸಪ್ಪನಾಯಕ, ತ್ರಿಶೂಲ್‌ಕುಮಾರ್ ಯುವಮೋರ್ಚಾ ಅಧ್ಯಕ್ಷರು, ಶಿವದತ್ತ, ಪತ್ರಕರ್ತ ಬಿ.ಟಿ.ಶಿವಕುಮಾರ್, ಸೋಮಣ್ಣ, ಪ್ರದಾನಕಾರ್ಯದರ್ಶಿ ಮರಿಕುಂಟೆ ಚಂದ್ರಣ್ಣ, ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷ ಬೋರಯ್ಯ ಎನ್. ಓಂಕಾರಪ್ಪ, ಕಾಟಂಲಿAಗಯ್ಯ, ಸುರೇಶ್ ಎನ್. ಕಾಟಯ್ಯ ಎಸ್. ಉಮೇಶ್, ರಮೇಶ್, ಶಿವಶಂಕರ್‌ಗೌಡ, ವಿಜಯ್ ಜಿ.ಟಿ. ಯುವಘಟಕ ಉಪಾಧ್ಯಕ್ಷರು ಗಜ್ಜುಗಾನಹಳ್ಳಿ, ಮಂಜುನಾಥ ಅಧ್ಯಕ್ಷರು, ಕಾಮಯ್ಯ, ನಾಗರಾಜ್, ಬಿ.ಟಿ.ಸಣ್ಣಮಲ್ಲಪ್ಪ, ಟಿ.ಪ್ರಕಾಶ್, ಜಿ.ಟಿ.ಸಣ್ಣಮಲ್ಲಪ್ಪ, ಡಿ.ಪ್ರಸಾದ್, ಸಂತೋಷ್, ಈ ಸಂಧರ್ಭದಲ್ಲಿ ರಾಜಾಹಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸರ್ಕಾರಿ ಮಾದರಿ ಶಾಲೆಯ ಮಕ್ಕಳು, ಶಿಕ್ಷಕರು, ಪೊಲೀಸ್ ಇಲಾಖೆಯವರು, ಸಾರ್ವಜನಿಕರು, ಹೋಬಳಿ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.