ಕರ್ನಾಟಕ ರಾಜ್ಯದಲ್ಲಿ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತುಂಬಾ ಅನಾನುಕೂಲವಾಗುತ್ತಿದೆ. ರಾಜ್ಯ ವಾಣಿಜ್ಯ ತೆರಿಗೆ ಅವರು ನೀಡಿದ ಈ ನೋಟಿಸ್ ಅನ್ನು ನೋಡಿದ ಕೂಡಲೇ ಭಯಪಡುವಂತ ಮತ್ತು ಬೀದಿ ಪಾಲಾಗುವನಂತಹ ಹಾಗೂ ಬರೆ ಹಾಕುವಂತಹ ಪರಿಸ್ಥಿತಿ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಎದುರಾಗಿದೆ. ತತ್ ಕ್ಷಣ ರಾಜ್ಯ ಸರ್ಕಾರ ಈ ನೋಟೀಸ್ ಗಳನ್ನು ವಾಪಸ್ ಪಡೆದು ಸಣ್ಣವ್ಯಾಪಾರದಾರರಿಗೆ ಸರಿಯಾದ ಮಾಹಿತಿ ಕೊಟ್ಟು ತಿಳಿಗೊಳಿಸ ಬೇಕೆಂದು ಹೇಳಿದರು .

40 ಲಕ್ಷ ವಹಿವಾಟು ಮಾಡಿದವರಿಗೆ ನೋಟಿಸಿ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಬೀದಿಬದಿ ವ್ಯಾಪಾರಿಗಳು 40 ಲಕ್ಷ ರೂಪಾಯಿ ವಹಿವಾಟು ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರಲ್ಲದೆ, ಕೇಂದ್ರದ ಪ್ರಧಾನಿಗಳು ಕ್ಯಾಶ್ ಲೆಸ್ ಭಾರತವನ್ನು ಮಾಡಲು ಹೊರಟಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಕ್ಯಾಶ್ ಅನ್ನು ತೆಗೆದುಕೊಳ್ಳಬೇಕೆನ್ನುತ್ತದೆ. ಇದರಿಂದ ಜನಸಾಮಾನ್ಯರಿಗೆ ಏನು ಮಾಡಬೇಕೆಂಬುದೇ ದೋಚದಂತಾಗಿದೆ. ಇದನ್ನು ನಮ್ಮ ರೈತ ಸಂಘ ಹಾಗೂ ಅನೇಕ ನಾಗರಿಕರು ಜನಕ್ರೋಶದ ಮೂಲಕ ಖಂಡಿಸುತ್ತೇವೆ ಎಂದರು.
ಇದನ್ನು ಇಲ್ಲಿಗೆ ಮುಗಿಸಿ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಧೈರ್ಯ ತುಂಬುವಂತ ಕೆಲಸ ಮಾಡಬೇಕು. ರಾಜ್ಯ ವಾಣಿಜ್ಯ ತೆರಿಗೆಯನ್ನು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರದವರು , ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರದವರು ಹೇಳುವುದನ್ನು ಮೊದಲು ಬಿಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿ ಕಾರ್ಯದರ್ಶಿ ಕೆ.ಎಂ. ಮಂಜುನಾಥ , ಸಿ ಎಸ್ ರಾಘವೇಂದ್ರ , ಎಸ್ ರಮೇಶ್. ರೈತ ಸಂಘದ ಸದಸ್ಯರು ಇನ್ನು ಅನೇಕ ರೈತ ಮುಖಂಡರು ಭಾಗವಹಿಸಿದ್ದರು.