LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ

ನಾಯಕನಹಟ್ಟಿ: ಕುಲ ಕುಲ ಎಂದು ಹೊಡೆದಾಡದಿರಯ್ಯ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂಬ ಅಮೂಲ್ಯ ಸಂದೇಶವನ್ನು ಕನಕದಾಸರು ನೀಡಿದ್ದು, ಜಗತ್ತಿನ ಮನುಷ್ಯ ಜನಾಂಗ ಎರಡು ಸಾಲುಗಳಲಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎನ್ನುವ ಮೂಲಕ ಕನಕದಾಸರನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಸ್ಮರಿಸಿದರು.

 

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ನಂತರ ಮಾತನಾಡಿದ ಅವರು ದಾಸರಲ್ಲಿ ಅತ್ಯಂತ ಶ್ರೇಷ್ಠದಾಸರು ಕನಕದಾಸರು ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು ವಿಶ್ವಮಾನವ ಕಲ್ಪನೆ ಹೊಂದಿದ್ದ ಮಾನವಿಯ ಗುಣಗಳನ್ನು ಪ್ರತಿಪಾಲಿಸಿ ಸಮಾನತೆ ಸಾರಿದರು ಎಂದು ತಿಳಿಸಿದರು. ಸಮಾಜದಲ್ಲಿ ಶಾಂತಿ ಸಮಾನತೆ ಪ್ರಗತಿ ಸಾಧಿಸಲು ಸಾಧ್ಯವಿದೆ. ಪರಿವರ್ತನೆಯ ಹಾರಿಕಾರರು ತಮ್ಮ ರಾಜ ಸತ್ವವನ್ನು ಬಿಟ್ಟು ಅವರು ದಾಸ ಶ್ರೇಷ್ಠರಾಗಿದ್ದಾರೆ. ಪುರಂದರದಾಸರ ಸಮಕಾಲಿನವರು, ವ್ಯಾಸರಾಯನ ಶಿಷ್ಯರು ಆದ ಕನಕದಾಸರು, ಹಾವೇರಿ ಜಿಲ್ಲೆ, ಶಿವಗಾವಿ ತಾಲ್ಲೂಕು, ಬಾಡ ಎಂಬ ಗ್ರಾಮದಲ್ಲಿ ಜನಿಸಿದ್ದರು. ಅವರ ಜನನ ಸುಮಾರು ೧೫೦೯ರಲ್ಲಿ ಹುಟ್ಟಿದರು. ಅವರ ತಂದೆಯ ಹೆಸರು ವೀರಪ್ಪನಾಯಕ, ತಾಯಿ ಹೆಸರು ಬಚ್ಚಮ್ಮ, ಅವರ ಆರಾಧ್ಯ ದೈವ ಕಾಗಿನೆಲೆ ಆದಿಕಾಶವ, ಮೊಹನ ತರಂಗಿಣಿ, ನಳಚರಿತ್ರೆ, ರಾಮಾಧಾನ್ಯ ಚರಿತ್ರೆ, ಹರಿಭಕ್ತಿಸಾರ ಇನ್ನೂ ಹಲವಾರು ಕೃತಿಗಳನ್ನು ಬರೆದಿದ್ದಾರೆ.



ಪಟ್ಟಣ ಪಂಚಾಯಿತಿ ಸದಸ್ಯೆ ಸರ್ವಮಂಗಳ ಉಮಾಪತಿ ಮಾತನಾಡಿ ನಾಯಕನಹಟ್ಟಿ ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ದತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜದ  ತಿದ್ದಿದ್ದ ಅಂಕು ಡೊಂಕುಗಳನ್ನು ತಿದ್ದಿದ್ದ ಮಹಾನ್ ದಾರ್ಶನಿಕರು ಇವರು ಜೀವನ ತತ್ವಗಳು ಇಂದಿನ ಪೀಳಿಗೆ ಮಾದರಿ ಕನಕದಾಸರು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರು ಇದ್ದ ಕಂದಾಚಾರಿಗಳನ್ನು ಹೋಗಲಾಡಿಸಲು ಶ್ರಮಿಸಿ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಎಲ್ಲರನ್ನು ಸಮಾನತೆ ದೃಷ್ಟಿಕೋನೊಡುವಂತೆ ತಿಳಿಸಿ ವಿಶ್ವ ಮಾನವರಾದರು ಎಂದು ಹೇಳಿದರು.

 

ಸ್ಥಾಯಿ ಸಮಿತಿ ಅಧ್ಯಕ್ಷ  ಸೈಯದ್ ಅನ್ವರ್ ಮಾತನಾಡಿ ಸಮಾಜದಲ್ಲಿ ಮನುಷ್ಯರನ್ನು ಜಾತಿ ಹೆಸರಿನಲ್ಲಿ ಮೇಲು ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು ೧೫-೧೬ನೇ ಶತಮಾನದಲ್ಲಿಯೇ ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ್ದ ಒಬ್ಬ ಮಹಾನ್ ವ್ಯಕ್ತಿ. ೧೨ನೇ ಶತಮಾನದಲ್ಲಿ ಬಸವಣ್ಣ, ಕನಕದಾಸ ಹಿಗೆ ಹಲವು ಮಹಾನಾಯಕರು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಬೇಕೆಂದು ಶ್ರಮಿಸಿದ್ದಾರೆ. ಅವರೆಲ್ಲ ಇಂದು ನಮ್ಮ ಕಣ್ಣುಮುಂದೆ ಇಲ್ಲದೆ ಇದ್ದರು ಅವರ ಸಂದೇಶಗಳು ಜೀವಂತವಾಗಿರುತ್ತದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬೋಸಮ್ಮ, ಸದಸ್ಯೆ ಮಹೇಶ್ವರಿ, ಗುರುಶಾಂತಮ್ಮ, ಸರ್ವಮಂಗಳ ಉಮಾಪತಿ, ಬೋರಮ್ಮ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ  ಸೈಯದ್ ಅನ್ವರ್, ರೇಣುಕಮ್ಮ, ಶ್ವೇತ, ಮೇಘ, ಹೆಲ್ತ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇನ್ನೂ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST