LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪುಟದಿಂದ ಕೆ.ಎನ್ ರಾಜಣ್ಣ ವಜಾ ; ವಾಲ್ಮೀಕಿ ಸಮುದಾಯದಿಂದ ಖಂಡನೆ

ಬಳ್ಳಾರಿ : ರಾಜ್ಯ ರಾಜಕಾರಣದಲ್ಲಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಇದ್ದದ್ದು ಇದ್ದಂತೆ ಮಾತನಾಡಿದ ಸಹಕಾರ ಸಚಿವೆ ಮಧುಗಿರಿ ರಾಜಣ್ಣನವರನ್ನು ಸಂಪುಟದಿಂದ ಯಾವುದೇ ಸೂಚನೆ ಅಥವಾ ನೋಟೀಸ್  ನೀಡದೇ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ ಈ ಆದೇಶವನ್ನು ಕೂಡಲೇ ರದ್ದುಗೊಳಿಸಿ ಮತ್ತೆ ಸಚಿವಸ್ಥಾನವನ್ನು ನೀಡಬೇಕೆಂದು ಹಿರಿಯ ವಾಲ್ಮೀಕಿ ಮುಖಂಡರಾದ ಮೀನಳ್ಳಿ ತಾಯಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಅವರು ಇಂದು ನಗರದ ವಸತಿಗೃಹದಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ ಮಾತನಾಡಿ, ಈ ಹಿಂದೆ ಸಹ ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಅವರನ್ನು ಸಹ ಸಚಿವ ಸ್ಥಾನದಿಂದ ರಾಜಿನಾಮೆಯನ್ನು ಪಡೆಯಲಾಗಿತ್ತು. ಹಣಕಾಸು ಇಲಾಖೆ ಸಿ.ಎಮ್ ಕೈಲ್ಲಿದ್ದರೂ ಸಹ ಅವರ ಗಮನಕ್ಕೆ ಬಾರದೇ ಅಕ್ರಮ ನಡೆಯಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ ಅವರು ಅದೇ ರೀತಿಯಲ್ಲಿ ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಸಹ ಷಡ್ಯಂತ್ರದಿಂದ ಸಚಿವ ಗಿರಿಯನ್ನು ಕಿತ್ತುಕೊಳ್ಳಲಾಗಿತ್ತು. ಮತ್ತು ಬಿ.ಜೆ.ಪಿಯಲ್ಲಿ ರಾಜ್ಯ ನಾಯಾಕರಾದ ಬಿ ಶ್ರೀರಾಮುಲುರವರನ್ನು ಸಹ ಡಿ.ಸಿ.ಎಮ್ ಮಾಡುತ್ತೇವೆಂದು ಹೇಳಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರಿಗೆ ಡಿ.ಸಿ.ಎಮ್ ನೀಡದೇ ವಂಚಿಸಲಾಗಿತ್ತು, ಇದನ್ನೆಲ್ಲಾ ಗಮನಿಸಿದಲ್ಲಿ ಎಲ್ಲಾ ಪಕ್ಷಗಳಿಂದಲೂ ವಾಲ್ಮೀಕಿ ನಾಯಕರಿಗೆ ವಂಚನೆ ಮತ್ತು ಮೋಸವಾಗುತ್ತಾ ಬರುತ್ತಿದೆ ವಾಲ್ಮೀಕಿ ಜನಾಂಗವನ್ನು ಕಡೆಗಣಿಸಬೇಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.



ಜೋಳದರಾಶಿ ತಿಮ್ಮಪ್ಪ ಮಾತನಾಡಿ, ರಾಜಕಾರಣದಲ್ಲಿ ವಾಲ್ಮೀಕಿ ನಾಯಕರು ಎಂಬ ಒಂದು ಕಾರಣಕ್ಕೆ ಹೀಗೆ ಹೇಳದೆ ಕೇಳದೆ ಮಂತ್ರಿಗಿರಿಯಿಂದ ವಜಾಗೊಳಿಸಲಾಗುತ್ತಿದೆ, ಅದೇ ಮೇಲ್ಜಾತಿಯವರಾಗಿದ್ದರೆ ಹೀಗೆ ನೋಟೀಸ್ ಕೊಡದೇ ವಿಚಾರಣೆ ಮಾಡದೇ ಕಾರಣ ಕೇಳದೆ ಹೀಗೆ ಮಾಡುತ್ತಿದ್ದರೆ ಸಿದ್ದರಾಮಯ್ಯನವರು ಉತ್ತರ ನೀಡಬೇಕು ಮತ್ತು ಕೂಡಲೇ ಸಚಿವ ಸಂಪುಟಕ್ಕೆ ಕೆ.ಎನ್ ರಾಜಣ್ಣ ಮತ್ತು ಬಿ ನಾಗೇಂದ್ರ ಅವರುಗಳನ್ನು ಪುನಃ ಸೇರಿಸಿಕೊಳ್ಳಬೇಕು ಇಲ್ಲವಾದಲ್ಲಿ ರಾಜ್ಯಾಧ್ಯಾಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು. 



ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಸರ್ಕಾರಿ ಅಭಿಯೋಜಕ ಜಯರಾಮ್ ಮಾತನಾಡಿ, ಕೆ.ಎನ್ ರಾಜಣ್ಣ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳಬೇಕೆ ಹೊರತು ಹೀಗೆ ಬೇಕಾಬಿಟ್ಟಿ ನಡೆದುಕೊಳ್ಳಬಾರದು ಇದನ್ನು ವಾಲ್ಮೀಕಿ ಸಮುದಾಯ ಖಂಡಿಸುತ್ತದೆ ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST