LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಪತ್ರಕರ್ತರು ಒತ್ತಡಕ್ಕೆ ಒಳಗಾಗಬೇಡಿ

ಅರಕೇರಾ: ಪತ್ರಕರ್ತರು ಯಾವುದೇ ಒತ್ತಡಕ್ಕೆ ಒಳಗಾಗದೆ ನಿಜಾಂಶವನ್ನು ಬರೆಯಬೇಕು ಅಂದಾಗ ಮಾತ್ರ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿ ಹಿಡಿಯಲು ಸಾಧ್ಯ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ.‌‌ ಅನಂತರಾಜ ನಾಯಕ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ದುರ್ಗದ ಸಿರಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ವರದಿಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದ ಕುರಿತು ಮಾತನಾಡಿದರು.

ನಿತ್ಯದ ಘಟನೆಗಳನ್ನು ‌ತಮ್ಮ ನೈಜ ಬರವಣಿಗೆಯ ಮೂಲಕ ಓದುಗರಿಗೆ ತಲುಪಿಸುವ ಪ್ರಾಮಾಣಿಕ ಸೇವೆಗೆ ಪ್ರಶಸ್ತಿ ದೊರಕಿದ್ದು ಹೆಮ್ಮೆಯ ಸಂಗತಿ. ಪತ್ರಕರ್ತರ ಚಿಂತನೆಗಳು ಸಮಾಜಕ್ಕೆ ಮಾದರಿಗಬೇಕು. ಗ್ರಾಮೀಣ ಪ್ರದೇಶದ ಪತ್ರಕರ್ತರ ಜೀವನ ಕಷ್ಟಕರವಾಗಿದೆ. ಯಾವುದೇ ರೀತಿಯ ನಿರೀಕ್ಷೆಗಳಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಸಮಸ್ಯೆಗಳ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.  ನಂತರ ಹಿರಿಯ ವೈದ್ಯರಾದ ಡಾ.ಎಚ್.ಎ.ನಾಡಗೌಡ ಮಾತನಾಡಿ, ನೊಂದವರ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡಬೇಕು.‌‌ ನಿಷ್ಪಕ್ಷಪಾತವಾಗಿ ಸುದ್ದಿಗಳನ್ನು ಬರೆದು ಪ್ರಶಂಸೆಗೆ ಪಾತ್ರರಾಗಬೇಕು.



ಸಮಾಜದಲ್ಲಿ ಪತ್ರಕರ್ತರ ಬರವಣಿಗೆಗೆ ಒಳ್ಳೆಯ ಸ್ಥಾನ ಇದೆ. ಅದನ್ನು ಕಾಪಾಡಿಕೊಂಡು ಗೌರವವನ್ನು ಸಂಪಾದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರವೇ ಪತ್ರಕರ್ತರ ವೃತ್ತಿ ಸಾರ್ಥಕ ಎಂದು ಸಲಹೆ ನೀಡಿದರು.‌‌ ನಂತರ ಪ್ರಶಸ್ತಿ ಪುರಸ್ಕೃತರಾದ ಮಹಾಂತೇಶ ಹಿರೇಮಠ, ಸಚ್ಚಿದಾನಂದ ನಾಯಕ ಹೆಗ್ಗಡದಿನ್ನಿ ಇಬ್ಬರು ವರದಿಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಜಿಪಂ‌ ಸದಸ್ಯರಾದ ಸತ್ಯನಾರಾಯಣ ನಾಯಕ‌ ಪೋ.ಪಾ, ಡಾ.ಜಾವೀದ ಆರ್.ಚಿಂಚೋಳಿಕರ್.ಮಲ್ಲಿಕಾರ್ಜುನ ಸಾಹುಕಾರ ಗುಡಿ, ಡಾ.ಶಿವಕುಮಾರ ನಾಡಗೌಡ, ರವಿ ನಾಯಕ, ಬೂದೆಪ್ಪ ಪರ್ಸಲ್, ಖರೀಂ ಸಾಬ್, ಹಂಪಯ್ಯ ಸ್ವಾಮಿ ಮಠಪತಿ, ಗ್ರಾಪಂ ಸದಸ್ಯರಾದ ವಿಶ್ವನಾಥ ಹೊಸಮನಿ, ವೆಂಕಟೇಶ ಕರ್ನಾಳ್, ಭೀಮಣ್ಣ, ಇಮ್ರಾನ್ ಖಾನ್, ಭಗವಂತ್ರಾಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ