ನಕಲಿ ಪಿ.ಎಚ್.ಡಿ ದಾಖಲೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಬಿಗ್ ಶಾಕ್.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇದಾವತಿ ಹಾಗೂ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗ ಹಾಲಿ ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಹೊರ ರಾಜ್ಯಗಳಿಂದ ಪಿ.ಏಚ್ .ಡಿ ಸಲ್ಲಿಸಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರ ಎಲ್ಲ ಮೂಲ ದಾಖಲಾತಿಗಳನ್ನು ಹಾಗೂ ನೈಜತೆಯನ್ನು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಮತ್ತು ಯುಜಿಸಿ ನಿಯಮಾವಳಿಗಳಂತೆ ಹಾಗೂ SOP ನಿಯಮದ ಪ್ರಕಾರ ಎಲ್ಲಾ ಅವರ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಆಯಾ ವಿಶ್ವ ವಿದ್ಯಾನಿಲಯಗಳ ಮುಖಾಂತರ ಮಾಹಿತಿಯನ್ನು ತೆಗೆದುಕೊಂಡು ಅವು ನಕಲಿ ಎಂದು ತಿಳಿದ ಕೂಡಲೇ ಅವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕಾಲೇಜು ಶಿಕ್ಷಣ ಇಲಾಖೆಯ ವೆಬ್ ಸೈಟ್ ಮೂಲಕ ಆಯುಕ್ತರಿಗೆ ಇವರ ವರದಿಯನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಈ ಕಾಲೇಜಿನ ಪ್ರಾಂಶುಪಾಲರು, ಸಂಬಂಧಿಸಿದ ವಿಭಾಗಗಳ ಮುಖ್ಯಸ್ಥರು,ಹಾಗೂ ಅತಿಥಿ ಉಪನ್ಯಾಸಕರ ದಾಖಲಾತಿ ಪರಿಶೀಲನಾ ಸಮಿತಿ ಸದಸ್ಯರುಗಳು ಮುಂದಿನ ಎಲ್ಲಾ ಆಗು ಹೋಗುಗಳ ಪರಿಣಾಮಕ್ಕೆ ನೇರ ಹೊಣೆಗಾರರಾಗಿತ್ತಾರೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ .
ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ HPPC ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಹಾರ ರಾಜ್ಯದ ಮಗದ ವಿಶ್ವ ವಿದ್ಯಾನಿಲಯದಿಂದ ಪಿ ಏಚ್ ಡಿ ಪದವಿಯಲ್ಲಿ ಸಲ್ಲಿಸಿರುವ ಎಲ್ಲ ಮೂಲ ದಾಖಲೆಗಳನ್ನು ಹಾಗೂ ನೈಜತೆಯನ್ನು ಪರಿಶೀಲಿಸಿ ಅವುಗಳು ಕಾಲೇಜು ಶಿಕ್ಷಣ ಇಲಾಖೆಯ ಯುಜಿಸಿ ನಿಯಮಾವಳಿಗಳಂತೆ ಹಾಗೂ SOP ನಿಯಮದ ಪ್ರಕಾರ ಎಲ್ಲಾ ದಾಖಲೆಗಳು ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡು ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕನನ್ನು ಈ ಕಾಲೇಜಿನ ಪ್ರಾಂಶುಪಾಲರು ತಕ್ಷಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಇವರ ವರದಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿ ಆದೇಶಿಸಿದ್ದಾರೆ.
ಇದೇ ರೀತಿಯಲ್ಲಿ ಬಿಹಾರ ಹಾಗೂ ಗುಜರಾತ್ ರಾಜ್ಯಗಳಲ್ಲಿನ ನಕಲಿ ಪಿ. ಏಚ್.ಡಿ ದಾಖಲೆಗಳನ್ನು ಸಲ್ಲಿಸಿ ಹಿರಿಯೂರು ತಾಲೂಕಿನ ವೇದಾವತಿ ಹಾಗೂ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಇದೆ,
ಹಾಗಾಗಿ ಕಾಲೇಜಿನ ದಾಖಲಾತಿ ಪರಿಶೀಲನಾ ಸಮಿತಿ ಎಲ್ಲ ಸದಸ್ಯರುಗಳು,ವಿಭಾಗದ ಮುಖ್ಯಸ್ಥರು, ಹಾಗೂ ಪ್ರಾಂಶುಪಾಲರು ಪ್ರಾಮಾಣಿಕವಾಗಿ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಕೂಡಲೇ ಅವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಸದರಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂಬುದೇ ನಮ್ಮ ಆಶಯ..