LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಂಕ್ರಾಮಿಕ ರೋಗ ತಡೆಗೆ ಕೈಜೊಡಿಸಿ: ಡಾ ಚಂದ್ರಶೇಖರಯ್ಯ ಸ್ವಾಮಿ

ಜಿಲ್ಲೆಯಲ್ಲಿ ನಿರಂತರ ಮಳೆ, ಮನೆಯ ಸುತ್ತಲೂ ನೀರು ನಿಲ್ಲುವ ತಾಣಗಳನ್ನು ತಪ್ಪದೆ ತೆರವುಗೊಳಿಸಿ

ಸಿಂದನೂರು: ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯು ಸತ‌ತವಾಗಿ ಸುರಿಯುತ್ತಿರುವ ಹಿನ್ನಲೆ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಸಾರ್ವಜನಿಕರು ಮಕ್ಕಳನ್ನು ಬೆಚ್ಚಗಿಡುವ, ಮಳೆಯಲ್ಲಿ ತೊಯ್ದುಕೊಳ್ಳದಂತೆ ಖಾಳಜಿ ವಹಿಸಿ ಹಾಗೂ ಮನೆಯ ಸುತ್ತಲೂ ಮಳೆ ನೀರು ನಿಲ್ಲದಂತೆ ನಿಗಾವಹಿಸಲು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ ಚಂದ್ರಶೇಖರಯ್ಯ ಸ್ವಾಮಿ ಜನತೆಗೆ ವಿನಂತಿ ಮಾಡಿಕೊಂಡಿದ್ದಾರೆ.

ಸಿಂಧನೂರು ನಗರದ ಮಕ್ಕಳ ಆಸ್ಪತ್ರೆಗಳು ಹಾಗೂ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಖುದ್ದು ಬೇಟಿ ನೀಡಿ,  ಕಳೇದ ಎರಡು ತಿಂಗಳುನಿಂದ ನಿರಂತರವಾಗಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದನ್ನು ನೋಡುತ್ತಿದ್ದೆವೆ. ಇದರಿಂದ ಭೂಮಿಯ ತೇವಾಂಶದಲ್ಲಿ ತಂಪು ಹೆಚ್ಚಾಗುವ ಜೋತೆಗೆ ವೈರಲ್‌ ಜ್ವರ ಪ್ರಕರಣಗಳು ಕಂಡು ಬರುವ ಸಾಧ್ಯತೆಯಿದ್ದು, ಪಾಲಕರು ಮಕ್ಕಳಿಗೆ ಬೆಚ್ಚಗಿಡುವ, ಮಳೆಯಲ್ಲಿ ತೊಯ್ದು ಬರದಂತೆ ಹಾಗೂ ಬಿಸಿಯಾದ ಆಹಾರ ಉಣಿಸುವ ಮತ್ತು ಮನೆಯಲ್ಲಿ ಬಾಣಂತಿಯರು ಹಾಗೂ ಗರ್ಭಿಣಿಯರ ಖಾಳಜಿ ವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಲ್ಲದೆ ಈಗಾಗಲೆ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞರು ಪ್ರತಿದಿನ 200 ರಿಂದ 300 ಹೊರರೋಗಿಗಳ ತಪಾಸಣೆ ಮಾಡುತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಿದರು.



ತಾಲೂಕಾ ಆರೋಗ್ಯಾಧಿಕಾರಿಕಾರಿ ಡಾ ಅಯ್ಯನಗೌಡ ಮಾತನಾಡಿ, ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧೋಪಚಾರ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರು ಸದುಪಯೋಗ ಪಡೆಯಲು ತಿಳಿಸಿದರಲ್ಲದೆ, ಮನೆಯ ಸುತ್ತಲೂ ನೀರು ನಿಲ್ಲುವುದರಿಂದ ಈಡಿಸ್‌ ಸೊಳ್ಳೆಯ ಉತ್ಪತ್ತಿ ಹೆಚ್ಚಾಗಿ ಡೆಂಗ್ಯು, ಚಿಕನ್‌ಗುನ್ಯಾ, ದಂತಹ ಖಾಯಿಲೆಗಳು ಹರಡುವ ಸಾಧ್ಯತೆವಿದ್ದು, ತಮ್ಮಮನೆಯ ಸಂಗ್ರಹಿಸಿದ ನೀರಿನ ತೊಟ್ಟಿಗಳನ್ನು, ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ ತುಂಬಿಸಿ ಸೊಳ್ಳೆ ಹೋಗದಂತೆ ಭದ್ರವಾಗಿ ಮುಚ್ಚಿಡಿ,

ಮನೆಯ ಸುತ್ತಮುತ್ತ ಬಿಸಾಡಿದ ಘನ ತ್ಯಾಜ್ಯ ವಸ್ತುಗಳಾದ, ತೆಂಗಿನ ಚಿಪ್ಪು, ಒಡೆದ ಬಾಕೆಟ್, ಕೊಡ, ಟೈರು, ಇತರೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸರಿಯಾದ ಸ್ಥಳದಲ್ಲಿ ಹಾಕಿ ವಿಲೇವಾರಿ ಮಾಡಿ, ಮನೆಯ ಮುಂದೆ ನೀರು ನಿಲ್ಲದಂತೆ ತೆಗ್ಗು ಗುಂಡಿಗಳನ್ನು ಮುಚ್ಚಿ ಹಾಗೂ ಚರಂಡಿಯಲ್ಲಿ ಕಸ ಹಾಕಬೇಡಿ, ಚರಂಡಿಯ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.



ಈ ಸಂಧರ್ಬದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಸುರೇಶಗೌಡ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗನಾಥ ಗುಡಿ, ಬಿಹೆಚ್‌ಇಓ ಗೀತಾ ಹೀರೆಮಠ ಎಮ್‌ಟಿಎಸ್‌ ಎಫ್‌.ಎ. ಹಣಗಿ ಸೇರಿದಂತೆ ಮಕ್ಕಳ ತಜ್ಞರು, ವೈದ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST