LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

ಅರಕೇರಾ : ಪರಿಸರವನ್ನು ಕಾಪಾಡಿದರೆ ಸಕಲ ಜೀವರಾಶಿಗಳು ಸೌಖ್ಯದಿಂದ ಬದುಕಲು ಸಾಧ್ಯ ಎಂದು ಎಸ್.ಕೆ.ಡಿ.ಆರ್.ಡಿ.ಪಿ ಕೃಷಿ ಅಧಿಕಾರಿ ಹುಚ್ಚಪ್ಪ ಹೇಳಿದರು.

ಸಮೀಪದ ಚಿಕ್ಕಹೊನ್ನಕುಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿನಮದ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಬುಧವಾರ ಮಾತನಾಡಿದರು.

ಭೂಮಂಡಲದಲ್ಲಿ ಪ್ರತಿಯೊಂದು ಜೀವಿ ಉಸಿರಾಟಕ್ಕೆ ಮುಖ್ಯವಾಗಿ ಪ್ರಾಣ ವಾಯು ಪರಿಸರದಿಂದ ಲಭ್ಯವಿದೆ. ಪರಿಸರವು ಸ್ವಚ್ಛ ಸುಂದರವಾಗಿ ಇಟ್ಟುಕೊಳ್ಳಬೇಕು ಎಂದರು.



ಮುಖ್ಯ ಶಿಕ್ಷಕ ಕನಕಪ್ಪ ಮಾತನಾಡಿ, ಮರಗಳು, ಗಿಡಗಳು, ಕಾಡುಗಳು, ನದಿಗಳು ಮತ್ತು ಎಲ್ಲವೂ ನಮ್ಮ ನೈಸರ್ಗಿಕ ಪರಿಸರ. ಭೂಮಿಯ ಮೇಲಿನ ಜೀವನವು ಆರೋಗ್ಯಕರ ಪರಿಸರವನ್ನು ಅವಲಂಬಿಸಿರುತ್ತದೆ. ಆದಕಾರಣ ಮಕ್ಕಳು ತಮ್ಮ ಶಾಲೆ, ಮನೆ ಅಂಗಳದಲ್ಲಿ ಒಂದು ಸಸಿಯನ್ನು ನೆಟ್ಟು ಪೋಷಿಸಿದರೆ ಉತ್ತಮ ವಾತಾವರಣ ಸಿಗುತ್ತದೆ ಎಂದರು.

 

 ವಲಯ ಮೇಲ್ವಿಚಾರಕ ಮಂಜಯ್ಯ, ಶಿಕ್ಷಕರಾದ ಅಂಜಿನಯ್ಯ, ಪ್ರಸನ್ಮ, ಶಕುಂತಲಾ, ರೂಪ, ರೆಡ್ಡಿಸಾಬ, ಸೇವಾ ಪ್ರತಿನಿಧಿಗಳಾದ ಶ್ರೀದೇವಿ, ಮಾನಶಪ್ಪ, ವಿಎಲ್ಇ ಯುವರಾಜ ಇದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST