LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತದಲ್ಲಿ ಹಿಂದುಗಳ ರಕ್ಷಣೆಗೆ ಅಂತರರಾಷ್ಟ್ರೀಯ ಹಿಂದೂ ಪರಿಷತ್

ಬಳ್ಳಾರಿ :  ಬಾಂಗ್ಲಾದೇಶ, ಪಾಕಿಸ್ತಾನ ಮೊದಲಾದ ದೇಶಗಳಂತೆ ಭಾರತದಲ್ಲೂ ಹಿಂದುಗಳಿಗೆ ಅಗತ್ಯ ರಕ್ಷಣೆ ಇಲ್ಲದಾಗಿದ್ದು. ಹಿಂದುಗಳ ರಕ್ಷಣೆಗಾಗಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಭಜರಂಗ ದಳ ಸಂಘಟಿತವಾಗಿ ಹೋರಾಟ ಮಾಡುತ್ತಿವೆ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಹ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಗೌರ್ ಹೇಳಿದರು.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಇಂದು ನಗರದ ರುಕ್ಮಿಣಿ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ  ಬೈಟಕ್  ನಡೆಯುತ್ತಿದೆ. ಬಳ್ಳಾರಿಯಲ್ಲೂ ಹಿಂದುಗಳ‌ಮೇಲೆ ನಡೆಯುವ ದೌರ್ಜನ್ಯದ ವಿರುದ್ದ ಹೋರಾಟಕ್ಕೆ ಚರ್ಚೆ ನಡೆಯಲಿದೆಂದು ಹೇಳಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕಡಿಮೆ ಇದ್ದ ಮುಸ್ಲೀಂರು  ಈಗ ಭಾರತವನ್ನೇ ಮುಸ್ಲಿಂ ರಾಷ್ಟ್ರ ಮಾಡಲು ತಮ್ಮ ಜನ ಸಂಖ್ಯೆ ಬೆಳೆಸಲು ಮುಂದಾಗಿದ್ದಾರೆ. ಈ ದೇಶವನ್ನಾಳುವ ಸರ್ಕಾರಗಳಿಂದ, ಮತ್ತು ಹಿಂದು ರಕ್ಷಣೆ ಸಂಘಟನೆಗಳೆಂದು ಹೇಳಿಕೊಳ್ಳುವವರಿಂದ ಹಿಂದುಗಳ ಸೂಕ್ತ ರಕ್ಷಣೆ ಆಗುತ್ತಿಲ್ಲ. ಎಂದು ಆರೋಪಿಸಿದರು.‌

ಸುದ್ದಿಗೋಷ್ಟಿಯಲ್ಲಿ ಸಂಘಟನೆಯ. ಮುಖಂಡರುಗಳಾದ ರಮೇಶ್ ಕುಲಕರ್ಣಿ, ಮಲ್ಲಿಕಾರ್ಜುನ ಅದ್ವಾನಿ, ಗಂಗಾಧರ್ ವಿಶ್ವಕರ್ಮ, ಮುಖೇಶ್ ಮೋದಿ, ಸಾಗರ್ ಸಾಮ್ರಾಟ್, ಮಲ್ಲಿಕರ್ಜುನ, ಶ್ರೀಕಾಂತ್, ಮೋಹನ್ ಬಿಲಾನ್, ಅನಿಲ್ ಸಾಳಂಕಿ ಮೊದಲಾದವರು ಇದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST