LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗದ್ದುಗೆ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ

ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್

ಬೆಂಗಳೂರು : ಮುಖ್ಯಮಂತ್ರಿ ಗದ್ದುಗೆ ಗುದ್ದಾಟವನ್ನು ವಿಷಯಾಂತರ ಮಾಡುವ ದುರುದ್ದೇಶದಿಂದ ಪರಿಶಿಷ್ಟ ಜಾತಿ, ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಮತ್ತು ಹಿಂದುಳಿದ ಜಾತಿಗಳ ನಡುವೆ ಒಳ ಮೀಸಲಾತಿಯ ವರ್ಗೀಕರಣ ವಿಚಾರದ ಮೂಲಕ ಪರಿಶಿಷ್ಟರಲ್ಲಿ ಮೂಡಿದ್ದ ದಲಿತ ಮುಖ್ಯಮಂತ್ರಿಯ ಹೆಬ್ಬಯಕೆಯನ್ನು ಕಾಂಗ್ರೆಸ್ ನಯವಾಗಿ ಹೊಸಕಿ ಹಾಕಿದೆ ಎಂದು ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್  ಆರೋಪಿಸಿದ್ದಾರೆ.

ದಲಿತ ಮುಖ್ಯಮಂತ್ರಿ ಎಂಬ ರಾಜಕೀಯ ಮಹತ್ವಕಾಂಕ್ಷೆಯನ್ನು ಒಳಮೀಸಲಾತಿ ವರ್ಗೀಕರಣ ಸೋಗಿನಲ್ಲಿ ಚಿವುಟುತ್ತಿರುವುದು ಖಂಡನೀಯ.   ಸಚಿವರಾದ ಡಾ. ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಹೆಚ್.ಸಿ, ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ, ಆರ್.ಬಿ ತಿಮ್ಮಾಪುರ ಅವರಂತಹ ಹಿರಿಯ ಮಂತ್ರಿಗಳಿದ್ದರೂ ರೋಸ್ಟರ್ ಬಿಂದುವಿನಲ್ಲಾಗಿರುವ ಮೋಸ, ಅಸಮಾನತೆ ಮತ್ತು ಅನ್ಯಾಯಗಳು ಈ ಮಂತ್ರಿಗಳ ಕಣ್ತಪ್ಪಿ ಮುಖ್ಯಮಂತ್ರಿ ಕೈ ಸೇರಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಬಲಗೈ, ಎಡಗೈ ಸಮುದಾಯಗಳಿಂದ ಮತ್ತು ಬೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳಿಂದಲೂ ನಡೆಯುತ್ತಿರುವ ಪ್ರತಿಭಟನೆಗಳು ರ್ಯಲಿ ಮೆರವಣಿಗೆಗಳು ಎಲ್ಲಾವನ್ನು ಗಮನಿಸಿ ರಾಜ್ಯ ಸರ್ಕಾರ ರೋಸ್ಟರ್ ಬಿಂದುವಿನಲ್ಲಾಗಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮವಹಿಸದೆ ಜಾಣ ಮೌನ ವಹಿಸಿರುವುದು ಖಂಡನೀಯ ಎಂದಿದ್ದಾರೆ.

ದಲಿತ ಮಂತ್ರಿಗಳು ಮತ್ತು  ಮುಖಡರು ಸಮುದಾಯದ ಬಲಗೈ ಸಮಾಜಕ್ಕೆ ಆಗಾಧ ಅನ್ಯಾಯ ಮಾಡಿ, ಬೆಂಕಿ ಹಚ್ಚಿ ರಕ್ತಪಾತಕ್ಕೆ ಮುನ್ನುಡಿದ್ದಾರೆ. ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ನಂಬಿ ಒಳ ಮೀಸಲಾತಿಯ ಹೋರಾಟಕ್ಕೆ ಧುಮುಕಿ ಎರಡು ಸಮುದಾಯಗಳ ಭಟ್ಟಂಗಿ ನಾಯಕರುಗಳ ನಡೆ ಖಂಡನೀಯ. ಸರ್ಕಾರದಿಂದ ಕೇವಲ ರೋಸ್ಟರ್ ಬಿಂದು ಅನ್ಯಾಯವನ್ನು ಸರಪಡಿಸದಿರುವುದು ವಿಷಾದನೀಯ. ಇದೊಂದು ಹಾಸ್ಯಸ್ಪದ ಮತ್ತು ಜನವಿರೋಧಿ ನಡೆ. ಅವೈಜ್ಞಾನಿಕವಾದ ಮಾರಕ ರೋಸ್ಟರ್ ಬಿಂದು ತೊಂದರೆ ಸರಿಪಡಿಸಲಾಗದ ಅಸಮರ್ಥ ಸರ್ಕಾರ ಇದಾಗಿದೆ ಎಂದು  ಟೀಕಿಸಿದ್ದಾರೆ.



ಶಕ್ತಿ ಪ್ರದರ್ಶನ ಮಾಡಿಸಲು ಎರಡು ಸಮುದಾಯಗಳ ಕಾರ್ಯಕರ್ತರನ್ನು ಫ್ರೀಡಂ ಪಾರ್ಕಿಗೆ ಐಷರಾಮಿ ಬಸ್ಸುಗಳ ಮುಖಾಂತರ ಕರೆ ತಂದು ಸರ್ಕಾರದ ಪರವಾಗಿ ಶಕ್ತಿ ಪ್ರದರ್ಶನ ಮಾಡುವ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಲಗೈ ಸಮುದಾಯದ ಅಸಂಖ್ಯ ಸರ್ಕಾರಿ ನೌಕರರು ಮತ್ತು ಅಧಿಕಾರಿ ವಲಯ ಅವರ ಉದ್ಯೋಗವನ್ನು ನೆಚ್ಚಿಕೊಂಡಿರುವ ಅವರ ಕುಟುಂಬವರ್ಗ ಈ ಅನ್ಯಾಯದ ವಿರುದ್ಧ ತುಟಿಬಿಚ್ಚದಂತೆ ಮಾಡಿರುವುದು ಸರ್ಕಾರಿ ಭಯೋತ್ಪದನೆಯಾಗಿದೆ ಹಾಗೂ ಬಲಗೈ ಸಮುದಾಯದ ಸರ್ಕಾರಿ ನೌಕರರ ತೀವ್ರ ಅಸಯಾಕತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ವಿವೇಚನ ರಹಿತವಾಗಿ ನಾಗಮೋಹನ್ ದಾಸ್ ವರದಿಯನ್ನು ಒಪ್ಪಿಕೊಳ್ಳುವ ಮೂಲಕ ರೋಸ್ಟರ್ ಬಿಂದು ಜಾರಿಗೊಳ್ಳುವ ಮೊದಲೇ ಪೂರ್ವಾಗ್ರಹ ಪೀಡನೆಯಿಂದ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪರಿಶೀಲನೆಯನ್ನು ವರ್ಗಿಕರಣಗೊಳಿಸಿ ಪ್ರವರ್ಗಗಳನ್ನು ವಿಭಜಿಸಿರುವ ಮಾರಕ ಪದ್ದತಿಯನ್ನು ರದ್ದುಗೊಳಿಸಬೇಕು. ನ್ಯಾ. ನಾಗಮೋಹನ್ ದಾಸ್ ವರದಿಯ ಅನುಸಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗದ ಮೀಸಲಾತಿಯಡಿ ನೇರ ನೇಮಕಾತಿ ಮಾಡುವ ವೇಳೆ ಹೊಸದಾಗಿ ಸೃಜಿಸಿರುವ ಎ.ಬಿ.ಸಿ.ಡಿ.ಇ.ಎಪ್ ವರಗಿನ ರೋಸ್ಟರ್ ಬಿಂದು ಪದ್ದತಿಯನ್ನು ಕೂಡಲೇ ರದ್ದುಗೊಳಿಸಬೇಕು. ಇದರಡಿ ಹೊಲಯ ಮತ್ತು ಮಾದಿಗ ಸಮುದಾಯದ ಜನರಿಗೆ ಸರ್ಕಾರ ಘೋಷಿಸಿರುವ ಅನುಪಾತ 15ರ ಮೀಸಲಾತಿಯನ್ನು ಎರಡು ಸಮುದಾಯಗಳಿಗೆ ಪ್ರವರ್ಗಗಳಲ್ಲಿನ ಎ ಮತ್ತು ಬಿ ತಾರತಮ್ಯವನ್ನು ಹೊರತುಪಡಿಸಿ ಸಾಮಾನ್ಯವಾಗಿ ಒಂದೇ ಬಿಂದುವನಲ್ಲಿಯಡಿಯಲ್ಲಿ ತರಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಷ್ಟೀಯ ಭೀಮ ಪಡೆ ಜಿಲ್ಲಾಧ್ಯಕ್ಷ ಡಿ ಕೆ ಭರತ್ ಕುಮಾರ್, ತಾಲ್ಲೂಕು ಅಧ್ಯಕ್ಷರಾದ ಸುಮಲತ, ಧಮ್ಮ ದೀವಿಗೆ ಸಂಘಟನೆ ತಾಲ್ಲಕು ಅಧ್ಯಕ್ಷರಾದ ಕೆ ಪಿ ಉಮೇಶ್ ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST