ನಾಯಕನಹಟ್ಟಿ : ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ , ಕಾನೂನು ತಜ್ಞ ಹಾಗೂ ಭಾರತ ದೇಶದ ಬಡವರ ಬದುಕಿನ ಕಷ್ಟಗಳನ್ನು ಬಗೆಹರಿಸಿದ ಬಂಗಾರದ ಮನುಷ್ಯ ಡಾ ಬಿ ಆರ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ಕಿಡಿಗೇಡಿಗರು ಸಗಣಿ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಚಳ್ಳಕೆರೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ತಳಕು ನಾಡಕಚೇರಿಯ ಉಪತಾಸಿಲ್ದಾರ್ ರಫೀಕ್ ಸಾಬ್, ಹಾಗೂ ಪಿಎಸ್ಐ ಮಂಜುನಾಥ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸಿ,ನ್ಯಾಯಾಂಗದ ಅಡಿಯಲ್ಲಿ ಬಂಧಿಸಿ ಅವರಿಗೆ ಶಿಕ್ಷೆ ವಿಧಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹಿರೇಹಳ್ಳಿ ಎಸ್ ರಾಜಣ್ಣ ಹಾಗೂ ವಕೀಲರಾದ ರುದ್ರಮುನಿ, ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣಮೂರ್ತಿ, ಪತ್ರಕರ್ತ ಸಂಘದ ಪದಾಧಿಕಾರಿಗಳಾದ ನಿಂಗರಾಜು ತಳಕು, ಬರಹಗಾರ ವೀರೇಶ್, ಯುವ ನಾಯಕ ವೀರೇಶ್ , ತಳಕು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಬೇಡರ ರೆಡ್ಡಿಹಳ್ಳಿ ಬಿ ಆರ್ ತಿಪ್ಪೇಸ್ವಾಮಿ, ಹೊನ್ನೂರ್ ಮಾರಣ್ಣ, ಹನುಮಂತನ ಹಳ್ಳಿ ಚಂದ್ರಣ್ಣ, ಹಾಸ್ಟೆಲ್ ತಿಪ್ಪೇಸ್ವಾಮಿ ಹಿರೇಹಳ್ಳಿ ಉಪಸ್ಥಿತರಿದ್ದರು.