ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ಸುಗಮವಾಗಲು ಮತ್ತು ಅಪಘಾತಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ತಿರುವುಗಳು, ಅಪಾಯಕಾರಿ ಪ್ರದೇಶಗಳು, ಸೇತುವೆಗಳು ಹಾಗೂ ಗ್ರಾಮ ಪ್ರವೇಶ ದ್ವಾರಗಳ ಬಳಿ ರಿಫ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ.

ನಾಯಕನಹಟ್ಟಿ ಪೋಲೀಸ್ ಠಾಣೆ ಮತ್ತು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ (ರಿ) ನಾಯಕನಹಟ್ಟಿ ಸಹಯೋಗದೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ನಾಯಕನಹಟ್ಟಿ ಪೋಲೀಸ್ ಠಾಣೆಯ ಪಿಎಸ್ಐಯಾದ ಪಾಂಡುರಂಗಪ್ಪ ರವರು ಹಾಗೂ ಸಿಬ್ಬಂದಿ ಮತ್ತು ಸಂಜೀವಿನಿ ತಂಡದ ಸದಸ್ಯರಾದ ದುರುಗೇಶ್, ಮೌರ್ಯ, ಗಗನ , ಮಂಜು, ಪ್ರಸನ್ನ ಇದ್ದರು.
ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ ಎಂದು
ಡಾಕ್ಟರ್ ಸೌಮ್ಯ ಮಂಜುನಾಥ್ ಸ್ವಾಮಿ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಕರ್ನಾಟಕ ತಿಳಿಸಿದರು