LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇಸಿಗೆ ಬೆಳೆ ಬೆಳೆಯಲು ಎಲ್ಎಲ್ಸಿಗೆ ನೀರು ಹರಿಸಲು ಒತ್ತಾಯ

ಬಳ್ಳಾರಿ: ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಬೇಸಿಗೆ ಬೆಳೆ ಬೆಳೆಯಲು ನೀರು ಹರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ವತಿಯಿಂದ ಮಾಜಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರಿಗೆ ಒತ್ತಾಯಿಸಿದರು.

 

ನಗರದ ಕೌಲ್ ಬಜಾರ್ ಪ್ರದೇಶದ ಟ್ರಾಮಾಕೇ‌ರ್ ಆಸ್ಪತ್ರೆಯ ಆವರಣದಲ್ಲಿ ಬುಧವಾರ ನಡೆದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಸಚಿವ ಶ್ರೀ ಬಿ.ನಾಗೇಂದ್ರ ಅವರಿಗೆ ಸವಿವರವಾದ ಮನವಿ ಪತ್ರ ಸಲ್ಲಿಸಿರುವ ತುಂಗಭದ್ರ ರೈತ ಸಂಘದ ಅಧ್ಯಕ್ಷರು, ರೈತಪರ ಹೋರಾಟಗಾರರು, ಪ್ರಗತಿಪರ ರೈತರು ಆದ ಡಾ.ಪುರುಷೋತ್ತಮಗೌಡ ಮಾನ್ಯ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.



ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಬಿಡುವ ವಿಷಯಗಳ ಕುರಿತು ತೀರ್ಮಾನಿಸಲು ಈ ತಿಂಗಳ ಕೊನೆಯ ವಾರದೊಳಗೆ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ತೀರ್ಮಾನ ಕೈಗೊಳ್ಳುವುದರ ಕುರಿತು ಅಂದಿನ ಸಭೆಯಲ್ಲಿ ತೀರ್ಮಾನಿಸಿರುತ್ತೀರಿ.

 

ಆ ಸಭೆಯ ತೀರ್ಮಾನದಂತೆ ಟಿ.ಬಿ.ಡ್ಯಾಂನ ಸಲಹಾ ಸಮಿತಿ ಸಿದ್ದರಾಮಯ್ಯ ಅವರು, ಉಪ ಡಿ.ಕೆ.ಶಿವಕುಮಾರ್‌ ಅವರು, ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರೊಂದಿಗೆ ತಾವು (ಮಾಜಿ ಸಚಿವ ಬಿ.ನಾಗೇಂದ್ರ) ಸೇರಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಟಿ.ಬಿ.ಡ್ಯಾಂನ ನೀರಾವರಿ ಸಲಹಾ ಸಮಿತಿ ಸಭೆಯನ್ನು ಅತಿ ಶೀಘ್ರದಲ್ಲಿ ಕರೆದು ಎಲ್‌ಎಲ್‌ಸಿ ಕಾಲುವೆಗೆ ಬೇಸಿಗೆ ಬೆಳೆಗೆ ನೀರು ಕೊಡುವಂತೆ ಮತ್ತು ತುಂಗಭದ್ರ ಜಲಾಶಯಕ್ಕೆ ಗೇಟ್‌ಗಳ ಅಳವಡಿಕೆ ಸಮಯ ಹಾಗೂ ಎಚ್‌ಎಲ್‌ಸಿ ಕಾಲುವೆಗೆ 2026ರ ಜ.30ರ ವರೆಗೆ ನೀರು ಹರಿಸುವ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನಿಸಲು ತಾವು (ಮಾಜಿ ಸಚಿವ ಬಿ.ನಾಗೇಂದ್ರ) ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಡಾ.ಪುರುಷೋತ್ತಮಗೌಡ ಮಾನ್ಯ ಮಾಜಿ ಸಚಿವ ಬಿ.ನಾಗೇಂದ್ರ ಅವರಲ್ಲಿ ಕಳಕಳಿಯಿಂದ ಮನವಿ ಮಾಡಿದ್ದಾರೆ.



ಈ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳಾದ ಮೋಕಾ ಗ್ರಾಮದ ಪೊನ್ನೂರು ಸಣ್ಣ ಅಂಜಿನಪ್ಪ, ದರೂರು ವೀರಭದ್ರನಾಯಕ, ಕೊಂಚಿಗೇರಿ ಮಲ್ಲಪ್ಪ, ಶ್ರೀಧರಗಡ್ಡೆ ವೀರನಗೌಡ, ಸೋಮಸಮುದ್ರದ ಲಿಂಗಾರೆಡ್ಡಿ, ಗೋಟೂರು ಭಾಸ್ಕರರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್, ಉಪ ಮಹಾಪೌರರಾದ ಡಿ.ಸುಕುಂ, ವಕ್ಸ್ ಬೋರ್ಡ್ ಬಳ್ಳಾರಿ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮಾಜಿ ಮಹಾಪೌರರು ಹಾಗೂ ಹಾಲಿ ಸದಸ್ಯರಾದ ಶ್ವೇತ, ಬಗರ್ ಹುಕುಂ ಅಧ್ಯಕ್ಷರಾದ ತಿಮ್ಮನಗೌಡ, ಪಾಲಿಕೆಯ ಸದಸ್ಯರಾದ ಅಸೀಫ್ ಬಾಷ, ಉಮಾಪತಿ, ಬಿಮ್ಸ್ ನಿರ್ದೇಶಕ ಗಂಗಾಧರಗೌಡ, ಮುಖಂಡರಾದ ರೇಡಿಯೋ ಪಾರ್ಕ್ ಸೋಮು, ನಾಗಲಕೆರೆ ಗೋವಿಂದ, ಡಿ.ಅಯಾಜ್ ಅಹಮ್ಮದ್, ಕಲೀಂ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST