ಜಿಲ್ಲಾ ಕ್ಷಯರೋಗ ವಿಭಾಗದ ಮೇಲ್ವಿಚಾರಕರಾದ ಓಬಳ ರೆಡ್ಡಿ ಇವರು ಕ್ಷಯ ರೋಗಿಗಳಿಗೆ ಸ್ವಚ್ಛತೆ ಬಗ್ಗೆ ಪೌಷ್ಟಿಕ ಆಹಾರ ನಿಯಮಿತ ವೈದ್ಯಾಧಿಕಾರಿಗಳ ಹತ್ತಿರ ಆರೋಗ್ಯ ತಪಾಸಣೆ ಕುರಿತು ನಿಯಮಿತವಾಗಿ ಸಂಪೂರ್ಣ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಕ್ಷಯರೋಗವನ್ನು ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು. ಹಾಗೂ ಸಿವೈಟಿಬಿ ಬಗ್ಗೆ ಸಹ ಮಾಹಿತಿ ನೀಡಿದರು.
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಇವರು ಕ್ಷಯ ರೋಗ ಬಂದಾಗ ಧೈರ್ಯ ಕಳೆದುಕೊಳ್ಳದೆ ಆರೋಗ್ಯ ನಿರೀಕ್ಷಣಾಧಿಕಾರಿಗಳಿಂದ ಸಮಾಲೋಚನೆ ಪಡೆದುಕೊಳ್ಳಿ. ಉತ್ತಮ ಆಹಾರ ಜೀವನ ಶೈಲಿ ಬೆಳೆಸಿಕೊಳ್ಳಿ ಯಾವುದೇ ಕಾರಣಕ್ಕೂ ಚಿಕಿತ್ಸೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು ಸಂಪೂರ್ಣ ಚಿಕಿತ್ಸೆ ಪಡೆಯುವುದರಿಂದ ಕ್ಷಯವನ್ನು ಗುಣ ಮಾಡಬಹುದು ಎಂದು ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿಟಿಓ ಕಚೇರಿಯ ಬಸವರಾಜ್, ಆರೋಗ್ಯ ನಿರೀಕ್ಷಣ ಅಧಿಕಾರಿಯಾಗಿರುವ ಮಾರುತಿ, ಮೊಹಮ್ಮದ್ ಇಸಾಕ್, ಗುರುಸಿದ್ದಪ್ಪ, ಪ್ರಾಥಮಿಕ ಸುರಕ್ಷಾ ಅಧಿಕಾರಿಯಾಗಿರುವ ರಿಹಾನಬಾನು ಮತ್ತು ಆಶಾ ಕಾರ್ಯಕರ್ತರು, ಕ್ಷಯರೋಗಿಗಳು ಉಪಸ್ಥಿತರಿದ್ದರು