ನಗರದ ಕೌಲ್ ಬಜಾರ್ ಪ್ರದೇಶದ ಟಿ.ಬಿ.ಸೆಂಟೋರಿಯಂ ಸರ್ಕಲ್ ಬಳಿಯ ಜನೌಷದಿ ಕೇಂದ್ರ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಇಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಉತ್ತಮ ರುಚಿ-ಶುಚಿಯಾದ ಗುಣಮಟ್ಟದ ಆಹಾರ ಲಭ್ಯವಾಗಲಿದ್ದು, ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ, ಬಡಜನತೆಗೆ ಅದರಲ್ಲೂ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಸಹಾಯಕವಾಗಲಿದೆ. ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದು ಮಾಜಿ ಬಿ.ನಾಗೇಂದ್ರ ಹೇಳಿದರು.

ಆಹಾರ ಗುಣಮಟ್ಟವನ್ನು ಪರೀಕ್ಷಿಸುವ ದೃಷ್ಟಿಯಿಂದ ಕಾಲಕಾಲಕ್ಕೆ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸದ್ಯ ಲೋಕಾರ್ಪಣೆಗೊಂಡ ಇಂದಿರಾ ಕ್ಯಾಂಟಿನ್ ಇಲ್ಲಿನ ಟ್ರಾಮಾ ಕೇರ್ ಸೆಂಟರ್‌ಗೆ ಬರುವ ಬಡ ಹೊರ ರೋಗಿಗಳಿಗೆ ಹಾಗೂ ಅವರ ಸಂಬಂಧಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ ಮಾಜಿ ಸಚಿವ ಬಿ.ನಾಗೇಂದ್ರ ಕ್ಯಾಂಟೀನಿನ ಆಹಾರ ಸೇವಿಸಿ ರುಚಿ ಹಾಗೂ ಗುಣಮಟ್ಟ ಪರೀಕ್ಷಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್, ಉಪ ಮಹಾಪೌರರಾದ ಡಿ.ಸುಕುಂ, ವಕ್ಸ್ ಬೋರ್ಡ್ ಬಳ್ಳಾರಿ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮಾಜಿ ಮಹಾಪೌರರು ಹಾಗೂ ಹಾಲಿ ಸದಸ್ಯರಾದ ಶ್ವೇತ, ಬಗರ್ ಹುಕುಂ ಅಧ್ಯಕ್ಷರಾದ ತಿಮ್ಮನಗೌಡ, ಪಾಲಿಕೆಯ ಸದಸ್ಯರಾದ ಅಸೀಫ್ ಬಾಷ, ಉಮಾಪತಿ, ಬಿಮ್ಸ್ ನಿರ್ದೇಶಕ ಗಂಗಾಧರಗೌಡ, ಮುಖಂಡರಾದ ರೇಡಿಯೋ ಪಾರ್ಕ್ ಸೋಮು, ನಾಗಲಕೆರೆ ಗೋವಿಂದ, ಡಿ.ಅಯಾಜ್ ಅಹಮ್ಮದ್, ಕಲೀಂ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.