LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾತಂತ್ರ್ಯ ದಿನಚರಣೆ : ಅಂಬೇಡ್ಕರ್ ಕಾಲೋನಿಯಲ್ಲಿ ಧ್ವಜಾರೋಹಣ

ನಾಯಕನಹಟ್ಟಿ : 79ನೇ ಸ್ವಾತಂತ್ರ್ಯ ದಿನಾಚರಣೆಯು ನಮ್ಮ ಪಾಲಿಗೆ ವಿಶೇಷದ ದಿನವಾಗಿದೆ ಎಂದು ಊರಿನ ಮುಖಂಡ ಬ್ಯಾಂಕ್ ಸೂರನಾಯಕ ಹೇಳಿದರು.

 

ಸಮೀಪದ ನೇರಲಗುಂಟೆ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಶುಕ್ರವಾರ 79ನೇ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ

 

ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಭಾರತದಲ್ಲಿ ಜೀವಿಸುತ್ತಿದ್ದೇವೆ ಎಂಬುದು ನಮ್ಮ ಹೆಮ್ಮೆ ಎಂದರು. ಸುಧೀರ್ಘ ವರ್ಷಗಳ ಸಾವಿರಾರು ಜನರ ತ್ಯಾಗ, ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರಕಿತು. ಸತ್ಯ, ಅಹಿಂಸೆ ಚಳುವಳಿಯ ಮೂಲಕ 1947 ಆಗಸ್ಟ್ 15ರಂದು ನಮಗೆಲ್ಲಾ ಸ್ವಾತಂತ್ರ್ಯ  ಸಿಕ್ಕಿದೆ.



                ಡಾ|| ಬಿ.ಆರ್.ಅಂಬೇಡ್ಕರ್‌ರವರು ಶೋಷಿತ ಸಮುದಾಯಗಳ ಧ್ವನಿಯಾಗಿದ್ದರು. ಅವರು ಎಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ಕೆಲಸಗಳು ನಮಗೆ ಆದರ್ಶ, ದೇಶಕ್ಕೆ ಮರೆಯಲಾಗದ ಕೊಡುಗೆ ಸಂವಿಧಾನ ನೀಡಿದ್ದಾರೆ. ಯುವಕರು ದುಷ್ಚಟಗಳನ್ನು ಬಿಟ್ಟು ಓದಿನ ಕಡೆಗೆ ಗಮನಹರಿಸಿ ನಿಮ್ಮ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರು. ಯುವಕರು ಮಕ್ಕಳಿಗೆ ಟಿ.ವಿ.ಮೊಬೈಲ್ ಬಿಟ್ಟು ಓದಿನ ಕಡೆಗೆ ಗಮನಹರಿಸಿ ಎಂದು ತಿಳಿಸಿದರು. ಶಿಕ್ಷಣದ ಮೂಲಕವೇ ಎಲ್ಲಾ ಬದಲಾವಣೆಗಳು ಸಾಧ್ಯ ಪ್ರತಿಯೊಬ್ಬ ಮಕ್ಕಳು ಶಿಕ್ಷಣ ಪಡೆಯಬೇಕು ಉನ್ನತಮಟ್ಟಕ್ಕೆ ಏರಿ ತಮ್ಮ ಪೋಷಕರಿಗೆ, ಊರಿಗೆ ಒಳ್ಳೆಯ ಹೆಸರು ತರಬೇಕೆಂದು ಮನವಿ ಮಾಡಿಕೊಂಡರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಗ್ರಾ.ಪಂ. ಅಧ್ಯಕ್ಷ ರುದ್ರಮುನಿ, ಉಪಾಧ್ಯಕ್ಷ ದುರುಗಮ್ಮ ಎಸ್.ರುದ್ರಮುನಿ, ಯುವಕರಾದ ದುರುಗೇಶ್, ವೆಂಕಟೇಶ್, ದಯಾನಂದ, ಹಟ್ಟಿಯ ಯಜಮಾನರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST