LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಯಾತ್ರಾ ಸ್ಥಳಗಳಿಗೆ ಮೇಕ್ ಮೈ ಟ್ರಿಪ್ನಲ್ಲಿ ಬುಕ್ಕಿಂಗ್ ಪ್ರಮಾಣ ಹೆಚ್ಚಳ

ಬೆಂಗಳೂರು :  ದೇಶಾದ್ಯಂತ ತೀರ್ಥಯಾತ್ರೆಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದು, 2024-25 ರ ಸಾಲಿನಲ್ಲಿ ತೀರ್ಥಯಾತ್ರೆಗಳ ವಸತಿ ಬುಕ್ಕಿಂಗ್ನಲ್ಲಿ ಶೇ. 19ರಷ್ಟು ವೃದ್ಧಿಯಾಗಿದೆ ಎಂದು ಮೇಕ್ ಮೈ ಟ್ರಿಪ್ ತಿಳಿಸಿದೆ.

ಈ ಕುರಿತು ಮಾತನಾಡಿದ ಮೇಕ್ಮೈಟ್ರಿಪ್ನ ಸಹಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಗೊವ್, ತನ್ನ ಬುಕ್ಕಿಂಗ್ ಆಪ್ನಲ್ಲಿ ತೀರ್ಥಯಾತ್ರಿಕ ಸಂಖ್ಯೆ ಹೆಚ್ಚುತ್ತಿದ್ದು, ದೇಶಾದ್ಯಂತ 34 ತಾಣಗಳಲ್ಲಿ ಎರಡಂಕಿ ಬೆಳವಣಿಗೆ ದಾಖಲಿಸಿದೆ, ಇನ್ನು, 15 ತಾಣಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸುವ ಮೂಲಕ ಆಧ್ಯಾತ್ಮಿಕ ಪ್ರಯಾಣಕ್ಕೆ ಜನ ಆದ್ಯತೆ ನೀಡುತ್ತಿದ್ದಾರೆ ಎಂದರು.



ಪ್ರಮುಖ ಧಾರ್ಮಿಕ ಸ್ಥಳಗಳಾದ ಪ್ರಯಾಗ್ರಾಜ್, ವಾರಣಾಸಿ, ಅಯೋಧ್ಯ, ಪುರಿ, ಅಮೃತ್ಸರ, ಮತ್ತು ತಿರುಪತಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಹೆಚ್ಚು ಬುಕ್ಕಿಂಗ್ ಆಗಿವೆ. ಜೊತೆಗೆ, ಖಾತುಷ್ಯಾಮ್ ಜಿ, ಓಂಕಾರೇಶ್ವರ ಮತ್ತು ತಿರುಚೆಂದೂರ್ ಮುಂತಾದ ಸ್ಥಳಗಳೂ ಕೂಡ ಹೆಚ್ಚು ಬುಕ್ಕಿಂಗ್ ನೋಡಬಹುದು.

ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರುಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದು-ರಾತ್ರಿ ಪ್ರವಾಸಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ, ಪ್ರೀಮಿಯಮೀಕರಣವು ಕೂಡ ಎಚ್ಚಿದ್ದು, 7 ಸಾವಿರ ರೂ. ಮೇಲ್ಪಟ್ಟ ಬೆಲೆಯ ರೂಮ್ಗಳಿಗೆ ಬುಕಿಂಗ್ಗಳು ಶೇ.20ಕ್ಕಿಂತ ಹೆಚ್ಚು ಬೆಳೆದಿವೆ ಎಂದರು.



ಆಧ್ಯಾತ್ಮಿಕ ಪ್ರವಾಸದಲ್ಲಿ ಶೇ. 53ರಷ್ಟು ಜನರು ಕೇವಲ ಒಂದು ರಾತ್ರಿಯ ಪ್ರವಾಸವನ್ನು ಆಯ್ಕೆ ಮಾಡುತ್ತಾರೆ, ಇದು ಮನೋರಂಜನಾ ಪ್ರವಾಸಕ್ಕೆ ಹೋಲಿಕೆ ಮಾಡಿದರೆ ಹೆಚ್ಚು. ಎರಡು ರಾತ್ರಿ ಬುಕ್ಕಿಂಗ್ ಮಾಡುವವರ ಪ್ರಮಾಣ ಶೇ.31ರಷ್ಟಿದೆ ಎಂದು ವಿವರಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ