LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಂಗಿ ಕುಸ್ತಿ ಪಂದ್ಯಾವಳಿಗೆ ಚಾಲನೆ

ನಾಯಕನಹಟ್ಟಿ : ವಾಲ್ಮೀಕಿ ಪುತ್ತಳಿ  ಮತ್ತು ಜಂಗಿ ಕುಸ್ತಿಗೆ 2 ಲಕ್ಷ ರೂಪಾಯಿ ಹಣವನ್ನು ಧನಸಹಾಯ ಮಾಡಿದ್ದೇನೆ ಎಂದು ದ್ರಾಕ್ಷಿ ರಸ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್‌ಬಾಬು ಹೇಳಿದರು.

 

ಶ್ರೀ ಹಟ್ಟಿಮಲ್ಲಪ್ಪ ನಾಯಕ ದೊರೆಗಳ ವಂಶಸ್ಥರು, ನಾಯಕನಹಟ್ಟಿ ಹಾಗೂ ನಾಯಕ ಸಮುದಾಯದವರಿಂದ ದೊರೆಗಳ ದರ್ಬಾರು ದಸರಾ ಉತ್ಸವ ಪುರುಷರ ಮತ್ತು ಮಹಿಳೆಯರ ಬಯಲು ಜಂಗಿಕುಸ್ತಿ ಪಂದ್ಯಾವಳಿಗಳಿಗೆ ಡಾ.ಬಿ.ಯೋಗೇಶ್‌ಬಾಬು, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಚಾಲನೆ ನೀಡಿದರು.

 

ನಂತರ ಮಾತನಾಡಿದ ಅವರು ರಾಜಹಟ್ಟಿ ಮಲ್ಲಪ್ಪನಾಯಕ ಎಂದು ಕರೆಯಬೇಕು ಈ ಹಿಂದೆ ದೊರೆಗಳ ಸಮಾಧಿಗೆ ಪೂಜಿಸಿ ದೊರೆಗಳಹಟ್ಟಿಯಲ್ಲಿನ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದೆವು. ಈ ದಿನ ಇಷ್ಟು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರೆ ಈ ಮಣ್ಣಿನ ಶಕ್ತಿ. ರಾಜಾಹಟ್ಟಿ ಮಲ್ಲಪ್ಪನಾಯಕ ಸಾಮಾಧಿಯ ಸ್ಥಳವನ್ನು ಯಾರಾರೂ ಅಕ್ರಮಣ ಮಾಡಿಕೊಂಡಿದ್ದಾರೆ ಅವರಿಂದ ಮುಕ್ತಿ ಕೊಡಿಸುವಂತಹ ಕೆಲಸ ಆಗಬೇಕು, ಮುಕ್ತಿಕೊಡಿಸುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಜೊತೆಗೆ ಹೋರಾಟವನ್ನು ಮಾಡಬೇಕು. ತಾಯಿ ಚಾಮುಂಡೇಶ್ವರಿಯವರ ನಾಡಹಬ್ಬ ದಸರಾ ಅದ್ಧೂರಿಯಾಗಿ ಪ್ರಾರಂಭವಾಗುತ್ತಿದೆ. ಈದಿನ ಅಧರ್ಮ ಹೋಗಿ ಧರ್ಮ ಉಳಿಯಬೇಕು. ಶ್ರೀಗುರು ತಿಪ್ಪೇರುದ್ರಸ್ವಾಮಿಗಳ ಆರ್ಶೀವಾದದೊಂದಿಗೆ ರಾಜಾಹಟ್ಟಿ ಮಲ್ಲಪ್ಪನಾಯಕರು ಹೋಗಿ ತಮ್ಮ ಕಿರೀಟವನ್ನು ಕೊಟ್ಟು ನನ್ನ ಕೈಯಲ್ಲಿ ಆಗುವುದಿಲ್ಲ ಇನ್ನು ಮುಂದೆ ತಾವುಗಳು ಹಟ್ಟಿ ಜನರಿಗೆ ನೀವೆ ಮಾರ್ಗದರ್ಶಕರಾಗಿರಬೇಕೆಂದು ಬೇಡಿಕೊಂಡಿದ್ದರು. ಆ ಸಮಯದಲ್ಲಿ ಬರಗಾಲ ಬಂದಿದ್ದರಿAದ ಸುತ್ತಮುತ್ತಲೂ ಕೆರೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿಕೊಟ್ಟರು ಎಂದು ಹೇಳಿದರು.



ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ ಶ್ರೀ ಹಟ್ಟಿಮಲ್ಲಪ್ಪ ನಾಯಕ ದೊರೆ ಈತ ಮ್ಯಾಸನಾಯಕ ಒಂದೇ ಅಲ್ಲ ಎಲ್ಲಾ ವರ್ಗದವರನ್ನು ಪ್ರೀತಿ, ವಿಶ್ವಾಸದಿಂದ ಕಂಡAತಹ ವ್ಯಕ್ತಿ. ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದ್ದು ಪ್ರತಿಯೊಬ್ಬರೂ ನಾಯಕ ಸಮುದಾಯ ಎಂದು ಬರೆಯಿಸಿ. ಆಗಿನ ಕಾಲದಲ್ಲಿ ನಾಯಕನಹಟ್ಟಿಗೆ ತಿಪ್ಪೇಸ್ವಾಮಿಯವರು ರಾಜಗುರುವಾಗಿ ಮಾರ್ಗದರ್ಶನ ಪಡೆಯುತ್ತಿದ್ದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಜಾಹಟ್ಟಿಮಲ್ಲಪ್ಪ ನಾಯಕ ವಂಶಸ್ಥರು, ಸಮಸ್ತ ಹೋಬಳಿಯ ನಾಯಕ ಸಮುದಾಯದವರು ಹಾಗೂ ನಾಯಕನಹಟ್ಟಿ ಹೋಬಳಿಯ ಸುತ್ತಮುತ್ತಲ ಗ್ರಾಮಸ್ಥರು, ಕುಸ್ತಿಪಟುಗಳು, ತೀರ್ಪುಗಾರರು, ಪೊಲೀಸ್‌ಇಲಾಖೆಯವರು, ಆಯೋಜಕರು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST