LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಗ್ರಾಪಂ ಕಚೇರಿ ಉದ್ಘಾಟನೆ

ನಾಯಕನಹಟ್ಟಿ : ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಹೆಸರನ್ನು ಶಾಶ್ವತಗೊಳಿಸಿವ ಎಂಬ ಉದ್ದೇಶದಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧೀಜಿ ಹೆಸರು ನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದೆ ಎಂದು ದ್ರಾಕ್ಷಿ ರಸ ನಿಗಮ ಮಂಡಳಿ ಅಧ್ಯಕ್ಷ ಡಾ||ಯೋಗೇಶ್ ಬಾಬು ಹೇಳಿದರು.



ಸಮೀಪದ ತಳಕು ಗ್ರಾಮದಲ್ಲಿ 35 ಲಕ್ಷ ರೂ.ವೆಚ್ಚದಲ್ಲಿ ಉದ್ಯೋಗ ಖಾತ್ರಿ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಟೇಪ್ ಕಟ್ ಮಾಡುವುದರ ಮೂಲಕ ಮತ್ತು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಳಕು ಗ್ರಾಮದ ಸುಸಜ್ಜಿತವಾದ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ತೆಗೆದುಕೊಂಡ ಕಾಳಜಿ ಕಾರಣ ಎಂದರು. ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಆರಂಭಿಸಲಾಗಿದ್ದು, ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ. ಸರ್ಕಾರಿ ಚೆಕ್‌ಗೆ ಸಹಿ ಮಾಡುವ ಅಧಿಕಾರ ಪ್ರಧಾನ ಮಂತ್ರಿಯಿಂದ ಮುಖ್ಯಮಂತ್ರಿಯವರೆಗೂ ಯಾವ ಜನಪ್ರತಿನಿಧಿಗಳಿಗೆ ಇಲ್ಲ, ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಇದೆ. ತಳುಕಿನ ವೆಂಕಣ್ಣಯ್ಯನವರು ರಾಷ್ಟ್ರ ಕವಿ ಕುವೆಂಪುರವರಿಗೆ ಮಾರ್ಗದರ್ಶಕರಾಗಿದ್ದರು. ತಳಕು ಗ್ರಾಮ ಇತಿಹಾಸ ಹೊಂದಿದ ಗ್ರಾಮವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ಜನರಿಗೆ ಸೇವೆ ಕೈಲಾಗದಷ್ಟು ಸಹಾಯ ಮಾಡಿದ್ದೀರ ಎಂದು ನಂಬುತ್ತೇನೆ. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ನೇರವಾಗಿ ಸಾರ್ವಜನಿಕರಿಗೆ ಕಛೇರಿಗೆ ಓಡಾಡಿಸದೆ ಕೆಲಸವನ್ನು ಮಾಡಿಕೊಟ್ಟಿದ್ದಿರ ಎಂದು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.



ಈ ಸಂದರ್ಭದಲ್ಲಿ ಉಪಸ್ಥಿತರಾದ ತಳಕು ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಾಯಣಿ ಟಿ.ಎಂ.ಮಲ್ಲೇಶ್ ಕುಮಾರ್, ಉಮಾ ಕುಮಾರ್ ಉಪಾಧ್ಯಕ್ಷರು, ಗದ್ದಿಗೆ ಬಿ.ತಿಪ್ಪೇಸ್ವಾಮಿ ತಾಲ್ಲೂಕು ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಚಳ್ಳಕೆರೆ, ಶಶಿಧರ.ಹೆಚ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಚಳ್ಳಕೆರೆ, ಸಂಪತ್‌ಕುಮಾರ್ ಜಿ.ಎನ್ ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯಿತಿ ಚಳ್ಳಕೆರೆ, ಸಂತೋಷ್ ಕುಮಾರ್ ಟಿ.ಹೆಚ್. ಇಂದಿನ ಸಹಾಯಕ ನಿರ್ದೇಶಕರು, ತಳಕು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೃಷ್ಣಮೂರ್ತಿ, ರವಿಚಂದ್ರ ಟಿ., ಸೈಯದ್ ಕರೀಂಸಾಬ್, ಶಮೀಮ್ ಖಾನಂ, ತಿಪ್ಪೇಸ್ವಾಮಿ ಕೆ., ನೀಲಮ್ಮ, ಶಾಂತಕುಮಾರ, ಲಕ್ಷö್ಮಮ್ಮ, ಟಿ.ವಾಣಿಬಾಯಿ, ಎಂ.ತಿಪ್ಪೇಸ್ವಾಮಿ, ಲಕ್ಷಿö್ಮÃ, ನೀಲಬಾಯಿ, ಕುಮಾರಿ ಭಾಗ್ಯಮ್ಮ, ಹೆಚ್.ಮಾರಯ್ಯ, ಬಿ.ನಾಗರಾಜ್, ಓಬಮ್ಮ ಕ್ಯಾಸಪ್ಪ, ಗೀರಿಜಮ್ಮ, ಬಿ.ಭಾಗ್ಯಮ್ಮ, ಪಿ.ಎಂ.ಚAದ್ರಣ್ಣ, ಚನ್ನಯ್ಯ, ಗೌರಮ್ಮ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಓಬಯ್ಯ, ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಜನಿಕಾಂತ್, ನೇರಲಗುಂಟೆ ಗ್ರಾ.ಪಂ. ಪಿ.ಡಿ.ಓ ಜಯಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಗ್ರಾ.ಪಂ.ಸಿಬ್ಬAದಿಗಳು, ತಳಕು ವೈದ್ಯಾಧಿಕಾರಿ, ಸಿಬ್ಬಂದಿಗಳು, ಹಾಗೂ ಇನ್ನೂ ಇತರರು ಕಾರ್ಯಕ್ರಮದಲ್ಲಿ ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST