ಬೆಂಗಳೂರು : ಜೆಪಿ ನಗರ ಶುಭ ಕನ್ವೆನ್ಷನ್ ಸೆಂಟರ್ ಬ್ರಿಗೇಡ್ ಮಿಲೇನಿಯಂ ಎದುರು ಜನ ಸಾಮಾನ್ಯರಿಗೂ ಕೈಗೆಟುವ ದರದಲ್ಲಿ ಅತ್ಯುತ್ತಮ ಅಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ “ಜ್ಯುವೆಲ್ಸ್ ಹಬ್ಬ” ಅನಾವರಣಗೊಂಡಿದ್ದು, ಸೆಪ್ಟಂಬರ್ 1ರ ವರೆಗೆ ದಕ್ಷಿಣ ಬೆಂಗಳೂರಿನಲ್ಲಿ ಎರಡನೇ ಬಾರಿಗೆ ಸುವರ್ಣ ಮಹೋತ್ಸವಕ್ಕೆ ವೇದಿಕೆ ಸಜ್ಜಾಗಿದೆ.

ದೇಶದ 25ಕ್ಕೂ ಹೆಚ್ಚು ಪ್ರಖ್ಯಾತ ಚಿನ್ನಾಭರಣ ತಯಾರಿಕೆ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದು, ಕೇವಲ 4 ರಿಂದ 5 ಗ್ರಾಂನಲ್ಲಿ ಚಿನ್ನದ ಸರ ಒಳಗೊಂಡಂತೆ ಕಡಿಮೆ ಬಂಗಾರದಲ್ಲಿ ವೈವಿಧ್ಯಮಯ ಆಭರಣಗಳು ಮಾರಾಟವಾಗುತ್ತಿರುವುದು ಮೇಳದ ವೈಶಿಷ್ಟ್ಯವಾಗಿದೆ. ಬೆಳಗ್ಗೆ 10ಗಂಟೆಯಿಂದ ರಾತ್ರಿ 8ಗಂಟೆಯವರಗೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಸೌಮ್ಯ ರೆಡ್ಡಿ “ಜ್ಯುವೆಲ್ಸ್ ಹಬ್ಬ” ಉದ್ಘಾಟಿಸಿದರು. ವಜ್ರದ ವ್ಯಾಪಾರಿ ಪ್ರಶಾಂತ್ ಮೆಹ್ತಾ, “ಜ್ಯುವೆಲ್ಸ್ ಹಬ್ಬ”ದ ಸಂಚಾಲಕ ಸಂದೀಪ್ ಬೇಕಲ್ ಉಪಸ್ಥಿತರಿದ್ದರು. ಸೌಮ್ಯ ರೆಡ್ಡಿ ಮಾತನಾಡಿ, ಆಭರಣ ಖರೀದಿ ಒಂದು ರೀತಿಯಲ್ಲಿ ಬ್ಯಾಂಕ್ ನಲ್ಲಿ ಉಳಿತಾಯ ಮಾಡಿದಂತೆ. ಬಂಗಾರದ ಬೆಲೆ ಏರಿಕೆಯಾಗುತ್ತಿದ್ದು, ಇಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ. ಎಲ್ಲರ ಬಜೆಟ್ ಗೆ ಒಪ್ಪುವಂತಹ ಆಭರಣಗಳನ್ನು ಪ್ರದರ್ಶಿಸಿರುವುದು ಉತ್ತಮ ಬೆಳವಣಿಗೆ ಎಂದರು.

“ಜ್ಯುವೆಲ್ಸ್ ಹಬ್ಬ”ದ ಸಂಚಾಲಕ ಸಂದೀಪ್ ಬೇಕಲ್ ಮಾತನಾಡಿ, ಚಿನ್ನದ ದರ ಏರಿಕೆಯಾಗಿದ್ದು, ಇಲ್ಲಿ ಕಡಿಮೆ ಗ್ರಾಂ ಚಿನ್ನದಲ್ಲೂ ಅತ್ಯುತ್ತಮ ಆಭರಣಗಳು ಮಾರಾಟವಾಗುತ್ತಿವೆ. ಮಹಿಳೆಯರಿಗೆ ಅಭರಣಗಳ ಮೇಲೆ ಹೆಚ್ಚು ಒಲವಿದ್ದು, ಚಿನ್ನಭರಣಗಳು ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಮೆರಗು ನೀಡಲಿದೆ. ನವನವೀನ ಶೈಲಿಗಳು ಚಿನ್ನಭರಣಗಳು ಲಭ್ಯವಿದೆ. ಹೊರ ರಾಜ್ಯದವರು ಕೂಡ ಆಗಮಿಸಿದ್ದಾರೆ. ಚಿನ್ನದ ಬೆಲೆ ಹೆಚ್ಚಾಗಿದ್ದು, ಅವರ ಹಣಕಾಸಿಗೆ ತಕ್ಕಂತೆ ಆಭರಣಗಳು ದೊರೆಯಲಿವೆ.