ನಾಯಕನಹಟ್ಟಿ : ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವತಿಯಿಂದ 90 ಲಕ್ಷ ವೆಚ್ಚದಲ್ಲಿ ಕಛೇರಿಯ ಮೇಲ್ಬಾಗದಲ್ಲಿ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು. ಮತ್ತು 88 ಲಕ್ಷ ರೂಪಾಯಿಗಳ ವೆಚ್ಚದ ಅನುದಾನದಲ್ಲಿ ಪಟ್ಟಣ ಪಂಚಾಯಿತಿ ಕಛೇರಿಯ ನೂತನವಾಗಿ ಖರೀದಿಸಿರುವ ಒಂದು ಜೆ.ಸಿ.ಬಿ. ಒಂದು ಸಕ್ಕಿಂಗ್ ಮಿಷನ್, 2 ಆಟೋ ಟಿಪ್ಪರ್, ಒಂದು ಮೊಬೈಲ್ ಶೌಚಾಲಯ ವಾಹನಗಳಿಗೆ ಚಾಲನೆ ನೀಡಿದರು.
ನಂತರ ನೂತನವಾಗಿ ರಾಜ್ಯ ಸರ್ಕಾರದಿಂದ ವಾಲ್ಮೀಕಿ ವೃತ್ತದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿದರು. ಮಾನ್ಯ ಶಾಸಕರ ಅನುದಾನದಲ್ಲಿ 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಅರುಣ್‌ಕುಮಾರ್ ಬಣ) ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದ ಜೋಗಿಹಟ್ಟಿ ಮಂಜುನಾಥ ಮತ್ತು ಇತರರು ನಾಯಕನಹಟ್ಟಿ ಹೋಬಳಿಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರೀಕರು ಸಾರಿಗೆ ಇಲಾಖೆಯ ಯೋಜನೆಗಳಿಂದ ವಂಚಿತರಾಗಿದ್ದಾರೆ ಆದ್ದರಿಂದ ಪಟ್ಟಣ ಪಂಚಾಯಿತಿ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆಂದು ಈಗಾಗಲೇ ಸಭಾ ನಡಾವಳಿಯಲ್ಲಿ ತೀರ್ಮಾನಿಸಿದ್ದು ಈ ಸಭಾನಡಾವಳಿಯನ್ನು ಉಲ್ಲಂಘನೆ ಮಾಡಿ ಖಾಸಗಿ ಬಸ್ ನಿಲ್ದಾಣ ಮಾಡಿರುವುದು ಹೋಬಳಿ ವ್ಯಾಪ್ತಿಯ ನಾಗರೀಕರಿಗೆ ಮಾಡಿದ ಅನ್ಯಾಯವಾಗುತ್ತದೆ. ಆದ್ದರಿಂದ ಖಾಸಗಿ ಬಸ್ ನಿಲ್ದಾಣದ ಬದಲಾಗಿ ಸರ್ಕಾರಿ ಸಾರಿಗೆ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂದು ಮನವಿ ಪತ್ರ ನೀಡಿದರು. ಇವರ ಮನವಿಗೆ ಸ್ಪಂಧಿಸಿದ ಶಾಸಕರು ನಿಮ್ಮ ಮನವಿಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಪ.ಪಂ. ಅಧ್ಯಕ್ಷೆ ಮಂಜುಳಶ್ರೀಕಾಂತ್, ಉಪಾಧ್ಯಕ್ಷೆ ಬೋಸಮ್ಮಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಪ.ಪಂ. ಸದಸ್ಯ ಜಾಗನೂರಹಟ್ಟಿ ಎಂ.ಟಿ. ಮಂಜುನಾಥ, ಮಹೇಶ್ವರಿ, ಗುರುಶಾಂತಮ್ಮ, ಸುನಿತಮುದಿಯಪ್ಪ, ಈರಮ್ಮ ಕೆ.ಪಿ.ತಿಪ್ಪೇಸ್ವಾಮಿ, ಪಾಪಮ್ಮ, ತಿಪ್ಪೇಶ್‌ಅಬಕಾರಿ, ಕೆ.ವಿನುತ, ಸರ್ವಮಂಗಳ ಉಮಾಪತಿ, ಓಬಯ್ಯದಾಸ್, ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಪ್ರಭುಸ್ವಾಮಿ ಮತ್ತು ಮಾಜಿ ಪ.ಪಂ. ಬಸಣ್ಣ ರವರು ಮಾತನಾಡಿದರು. ಸರ್ವ ಸದಸ್ಯರು, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸಿಬ್ಬಂದಿವರ್ಗದವರು, ನೇರಲಗುಂಟೆ ಬ್ಯಾಂಕ್ ಸೂರನಾಯಕ, ಮುದಿಯಪ್ಪ, ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಪೊಲೀಸ್ ಉಪ ಆರಕ್ಷಕ ಅಧಿಕಾರಿ ಜಿ.ಪಾಂಡುರಂಗ, ಪೊಲೀಸ್ ಸಿಬ್ಬಂದಿವರ್ಗದವರು, ಬೆವಿಕಂ ನಾಯಕನಹಟ್ಟಿ ಶಾಖಾಧಿಕಾರಿ ಬಿ.ಬೋರಯ್ಯ ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು.