LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂತೋಷ್ ಲಾಡ್ ರಿಂದ ಅಕ್ರಮ ಗಣಿಗಾರಿಕೆ - ಬಂಗಾರು ಹನುಮಂತು

ಬಳ್ಳಾರಿ: ಅಕ್ರಮ ಗಣಿಗಾರಿಕೆಯನ್ನು ಕಾನೂನು ಬಾಹಿರವಾಗಿ ಸಂತೋಷ ಲಾಡ್ ಮತ್ತು ಸಂಸದ ಇ.ತುಕಾರಾಂ ಸೇರಿದಂತೆ ಅವರ ಬೆಂಬಲಿಗರು ಮಾಡುತ್ತಿದ್ದಾರೆ. ಉಪಚುನಾವಣೆ ನಡೆದು ಆರೇಳು ತಿಂಗಳ ಬಳಿಕ ಸ್ವಾಮಿಹಳ್ಳಿ ದೇವಸ್ಥಾನದಲ್ಲಿ ಭಾಷಣ ಮಾಡಿದ್ದಾರೆಂದು ಕೇಸ್ ಹಾಕಿದ್ದಾರೆ. ಜನಾರ್ದನ ರೆಡ್ಡಿ, ತಾಲೂಕು ಅಧ್ಯಕ್ಷ ಮತ್ತು ತಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅದೇ ದೇವಸ್ಥಾನದ ಕಟ್ಟೆಯ ಮೇಲೆ ತುಕಾರಾಂ ಮತ್ತು ಶಾಸಕಿ ಅನ್ನಪೂರ್ಣ ಪ್ರಚಾರ ಮಾಡಿದ್ದರು. ಅವರ ಮೇಲೆ ಕೆಸ್ ಹಾಕಿಲ್ಲ ಎಂದು ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಹೇಳಿದರು.

 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂತೋಷ ಲಾಡ್ ಅವರು ಪದೇ ಪದೇ ಮೋದಿ ಬಗ್ಗೆ ಆರೋಪ ಮಾಡುತ್ತಾರೆ. ರಾಹುಲ್, ಸಿದ್ದರಾಮಯ್ಯ ಡಿಕೆ ಶಿವಕುಮಾ ಓಲೈಸಲು ಮೋದಿ ಬಗ್ಗೆ ಮಾತನಾಡುತ್ತಾರೆ. ಮೋದಿ ಬಗ್ಗೆ ಇನ್ನೂ ಮುಂದೆ ಎಲ್ಲಿಯಾದರೂ ಮಾತನಾಡಿದರೆ ಅಲ್ಲೇ ಪ್ರತಿಭಮಾಡುತ್ತೇನೆ ಎಂದು ಎಚ್ಚರಿಸಿದರು.

 

ತುಕಾರಾಂ ಬೆಂಬಲಿಗ ಘಡದ್ ರಮೇಶ್ ಅಕ್ರಮ ಮಾಡುತ್ತಿದ್ದಾರೆ. ಹೀರೆಕೆರನಹಳ್ಳಿ, ಕೆರೆನಳ್ಳಿ ಸೇರಿದಂತೆ ಅನೇಕ ಕಡೆ ಅಕ್ರಮ ಗ್ರಾವೆಲ್ ಸಾಗಾಟ ಮಾಡುತ್ತಿದ್ದಾರೆ. ದಮ್ಮು ತಾಕತ್ತಿದ್ದರೆ ನನ್ನ ಮೇಲೆ ಕೇಸ್ ದಾಖಲು ಮಾಡಿ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮೂವತ್ತೆರಡು ಲಕ್ಷ ರೂ ಫೈನ್ ಹಾಕಿದ್ದಾರೆ. ರಾಜಧನ ವಂಚನೆ -ಮಾಡಿ 200 ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪ ಮಾಡಿದರು.

 

ಅಕ್ರಮ ಗಣಿ ವಿರುದ್ಧ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗ್ಯಾವೆಲ್ ವ್ಯವಹಾರ ಮಾಡಿ ಸಂಸದರಾಗಲು ನಾಗೇಂದ್ರ ಅವರನ್ನು ಬಲಿಕೊಟ್ಟಿದ್ದಾರೆ.  ಚುನಾವಣೆಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು? ಬೋಗಸ್ ಬಿಲ್ ಮಾಡಿ ಹಣ ಲೂಟಿ ಹೊಡೆಯುತ್ತಿದ್ದರು. ಎಂದು ಆರೋಪಿಸಿದರು.



ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಸಿಲುಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಏಳಿಗೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅದರೆ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಎಸಿಪಿ ಟಿಎಸ್ ಪಿ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಎಸ್ಸಿ ಎಸ್ಟಿ ನಿಗಮದ ಹಣ ನೀಡುತ್ತಿಲ್ಲ. ಕೋಟಿಗಟ್ಟಲೇ ಹಣ ಎಲ್ಲಿ ಹೋಗುತ್ತಿದೆ? ಎಂದು ಪ್ರಶ್ನಿಸಿದ ಅವರು, ಸರ್ಕರದ ವಿರುದ್ಧ ಎಸ್ಟಿ ಮೋರ್ಚಾ ವತಿಯಿಂದ ದೊಡ್ಡ ಮಟ್ಟದಲ್ಲಿ ಆ.8ರಂದು ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಹನುಮಂತು ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST